ಸುರ್ಯ ಸದಾಶಿವರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ

0

ನಡ: ಸುರ್ಯ ಶ್ರೀ ಸದಾಶಿವರುದ್ರ, ದೇವಸ್ಥಾನದಲ್ಲಿ ಏ. 6ರಂದು ಪ್ರತಿಷ್ಠಾ ವಾರ್ಷಿಕೋತ್ಸವ ಬಹಳ ಮತ್ತು ಏ.6ರಂದು ವಿಜೃಂಭಣೆಯಿಂದ ಜರಗಿತು.

ಏ. 6ರಂದು ಪೂರ್ವಾಹ್ನ 7.30ಕ್ಕೆ ಪುಣ್ಯಾಹ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರಾದ ಸತೀಶಚಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ್ ಅಜ್ರಿ, ಸದಸ್ಯರು, ಮುನಿರಾಜ ಅಜ್ರಿ ಹಾಗೂ ಊರ ಗಣ್ಯರು ಭಕ್ತಾದಿಗಳು ಉಪಸ್ಥಿತರಿದ್ದರು.

ರಾತ್ರಿ 8ಕ್ಕೆ ರಂಗಪೂಜೆ, ಉತ್ಸವ ನಡೆಯಲಿದೆ. ಏ.7ರಿಂದ 11ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.

ಏ. 7ರಂದು ಪೂರ್ವಾಹ್ನ 9.15ಕ್ಕೆ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ಏ. 8ರಂದು ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಸುರ್ಯಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ರಾತ್ರಿ 8ಕ್ಕೆ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ, 9.30ಕ್ಕೆ ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಡಾ।। ದೇವದಾಸ್ ಕಾಪಿಕಾಡ್, ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ ಏರ್ ಲಾ ಗ್ಯಾರಂಟಿ ಅತ್ತು ಪ್ರದರ್ಶನಗೊಳ್ಳಲಿದೆ.

ಏ 9ರಂದು ಪೂರ್ವಾಹ್ನ 7ಕ್ಕೆ ಸೊಡರಬಲಿ ಉತ್ಸವ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ.

ರಾತ್ರಿ 9.30ಕ್ಕೆ ಕಲ್ಲರ್ಸ್ ಕನ್ನಡ ಖ್ಯಾತಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತುಳುನಾಡ ಗಾನ ಗಂಧರ್ವ ಬಿರುದಾಂಕಿತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.

ಏ.10 ರಂದು ಪೂರ್ವಾಹ್ನ 8.45ಕ್ಕೆ ದರ್ಶನಬಲಿ ಉತ್ಸವ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಮಧ್ಯಾಹ್ನ 1ಕ್ಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 8ಕ್ಕೆ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ. ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವ, ರಾತ್ರಿ 9.30ಕ್ಕೆ ಸುರ್ಯ ಅಂಗನವಾಡಿ ಕೇಂದ್ರ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 11ಕ್ಕೆ ಉಜಿರೆ ಸಂಗಮ ಕಲಾವಿದರಿಂದ ಸುಬ್ಬು ಸಂಟ್ಯಾರ್ ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ ಕಾಸ್ದ ಕಸರತ್ ಪ್ರದರ್ಶನಗೊಳ್ಳಲಿದೆ.

ಏ. 11ರಂದು ಪೂರ್ವಾಹ್ನ 9ಕ್ಕೆ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ 6ಕ್ಕೆ ಯಾತ್ರಾ ಹೋಮ, ಅವಭ್ರತ ಸ್ನಾನಕ್ಕೆ ಹೊರಡುವುದು. ರಾತ್ರಿ 10.30ಕ್ಕೆ ಧ್ವಜಾವರೋಹಣ. 11.00ಕ್ಕೆ ದೈವಗಳ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here