

ಗುರುವಾಯನಕೆರೆ: ಸುಧೆಕ್ಕಾರು ಕುಟುಂಬಸ್ಥರ ತರವಾಡು ಮನೆಯಲ್ಲಿ ಜುಮಾದಿ ಬಂಟ ಮತ್ತು ಪರಿವಾರ ದೈವಗಳ ನೇಮೋತ್ಸವ ಮಾ. 27ರಂದು ಅದ್ಧೂರಿಯಿಂದ ನೆರವೇರಿದೆ. ಅರ್ಚಕ ಶ್ರೀನಿವಾಸ ಅಮ್ಮಣ್ಣಾಯ ಅವರ ನೇತೃತ್ವದಲ್ಲಿ ಮಾ. 26ರಂದು ನಾಗಬನದಲ್ಲಿ ಆಶ್ಲೇಷ ಪೂಜೆ, ಸಂಜೆ ದುರ್ಗಾ ನಮಸ್ಕಾರ ಪೂಜೆ.


ಮಾ. 27ರಂದು ಬೆಳಗ್ಗೆ ಗಣಹೋಮ ಮುಡಿಪು ಪೂಜೆ, ಮಧ್ಯಾಹ್ನ ಶ್ರೀ ಸತ್ಯನಾರಾಯಣ ಪೂಜೆ, ಸಂಜೆ ವೇಳೆಗೆ ಜುಮಾದಿಬಂಟ, ಚಾಮುಂಡಿ ಗುಳಿಗ, ಮೈಯ್ಯರಿಗೆದ ಕಲ್ಲುರ್ಟಿ ಪಂಜುರ್ಲಿ, ಕುಪ್ಪೆಟ್ಟು ಕಲ್ಲುರ್ಟಿ ಪಂಜುರ್ಲಿ, ಹಿರಿಯಜ್ಜ, ಒಂಟಿ ಕಲ್ಲುರ್ಟಿ, ರಾಹುಗುಳಿಗ, ಜೋಡುಗಳಿಗ ದೈವ ಗಳಿಗೆ ನೇಮೋತ್ಸವ ನಡೆದಿದೆ. ನೇಮೋತ್ಸವದಲ್ಲಿ ಅರಮಲೆಬೆಟ್ಟ ಕೊಡಮಣಿತ್ತಾಯ ಕ್ಷೇತ್ರದ ಅನುವಂಶಿಕ ಅಡಳಿತ ಮೊಕ್ತೇಸ್ವರ ಸುಕೇಶ್ ಕುಮಾರ್ ಕಡಂಬು ಸೇರಿದಂತೆ ಗಣ್ಯರು ಭಾಗವಹಿಸಿದ್ದರು.