ಕಣಿಯೂರು: ಹೊಲಿಗೆ ತರಬೇತಿಯ ಸಮಾರೋಪ ಸಮಾರಂಭ

0

ಕಣಿಯೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ ತಾಲೂಕಿನ ಜ್ಞಾನ ವಿಕಾಸ ಕಾರ್ಯಕ್ರಮ ದಡಿಯಲ್ಲಿ 3 ತಿಂಗಳ ಕಾಲ ಹೊಲಿಗೆ ತರಬೇತಿ ಯನ್ನು ಕಣಿಯೂರು ವಲಯದ ಪಿಳಿಗೂಡು ಅಭಿನಂದನ್ ಜ್ಞಾನ ವಿಕಾಸ ಕೇಂದ್ರದಲ್ಲಿ ನಡೆಸಿದ್ದು, ಈ ದಿನ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಸಲಾಯಿತು.

ಜಿಲ್ಲಾ ನಿರ್ದೇಶಕರು ಮಹಾಬಲ ಕುಲಾಲ್ ಟೈಲರಿಂಗ್ ತರಬೇತಿ ಪಡೆದ ಸದಸ್ಯರು ತಮ್ಮ ಜೀವನದಲ್ಲಿ ವೃತ್ತಿ ಯನ್ನು ನಿಷ್ಠೆ ಯಿಂದ ನಡೆಸುವುದು ಹಾಗೂ ಜ್ಞಾನವಿಕಾಸ ಕಾರ್ಯಕ್ರಮ ದಿಂದ ಮಹಿಳೆಯರ ಸಭಲೀಕರಣ ಆಗಬೇಕು ಎಂಬುವುದು ಮಾತೃಶ್ರೀ ಹೇಮಾವತಿ ಅಮ್ಮನ ಆಶಯ ಎಂದು ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು.

ಮಹಿಳೆಯರ ಏಳಿಗಾಗಿ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ನಡೆದಂತಹ ಹೊಲಿಗೆ ತರಬೇತಿ ಬಹಳಷ್ಟು ಯಶಸ್ವಿಯಾಗಿದೆ ಹಾಗೂ ಕಲಿತ ವಿದ್ಯೆಯನ್ನು ಶ್ರದ್ದೆಯಿಂದ ಜೀವನದಲ್ಲಿ ಅನುಷ್ಠಾನಿಸಬೇಕೆಂದು ಜನಜಾಗೃತಿ ವಲಯಧ್ಯಕ್ಷ ಪ್ರಫುಲ್ಲ ಚಂದ್ರ ಅಧ್ಯಾಯಣ್ತಯ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಾನಕಿ ಮಾತನಾಡಿ ಕ್ಷೇತ್ರ ಧರ್ಮಸ್ಥಳ ದಿಂದ ಹಲವಾರು ಕಾರ್ಯಕ್ರಮಗಳು ಅನುಷ್ಠಾನ ವಾಗುತ್ತಿರುವ ಬಗ್ಗೆ ಮಾತಾಡಿದರು, ಒಕ್ಕೂಟದ ಉಪಾಧ್ಯಕ್ಷೆ ಶ ವೀಣಾ ಶುಭ ಹಾರೈಸಿದರು. ಟೈಲರಿಂಗ್ ಶಿಕ್ಷಕಿ, ಸೇವಾಪ್ರತಿನಿಧಿ ಹಾಗೂ ತರಬೇತಿ ಪಡೆದಿರುವ 32 ಜನ ಸದಸ್ಯರು ಉಪಸ್ಥಿತರಿದ್ದರು.

3 ತಿಂಗಳಲ್ಲಿ ಪಡೆದ ತರಬೇತಿಯ ಬಗ್ಗೆ ಅನಿಸಿಕೆಯನ್ನು ಆರೀಫ, ಸೌಮ್ಯ, ಕವಿತ ವ್ಯಕ್ತ ಪಡಿಸಿದರು. ತರಬೇತಿ ಪಡೆದ ಸದಸ್ಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here