ಉರುವಾಲು: ಗೋಕರ್ಣ ಮಂಡಲಾಧೀಶ್ವರ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರ ಸಂಕಲ್ಪದಂತೆ ಅದ್ವೈತ ರಥಯಾತ್ರೆ – ಶ್ರೀ ಮಹಾ ಪಾದುಕಾ ಸಂಚಾರ ಗೋಕರ್ಣ ಮಂಡಲಾದ್ಯಂತ ಸಂಚರಿಸುತ್ತಿದ್ದು, ಮಾ. 15ರಂದು ಉರುವಾಲಿನಲ್ಲಿರುವ ಶ್ರೀ ಭಾರತೀ ವಿದ್ಯಾ ಸಂಸ್ಥೆಗೆ ಆಗಮಿಸಿತು.

ವಿದ್ಯಾರ್ಥಿಗಳ ಬ್ಯಾಂಡ್ ವಾದ್ಯ ಜೊತೆಯಲ್ಲಿ ಮಾತೆಯರ ಹಾಗೂ ವಿದ್ಯಾರ್ಥಿನಿಯರ ಪೂರ್ಣ ಕುಂಭದೊಂದಿಗೆ ಅದ್ವೈತ ರಥವನ್ನು ಸ್ವಾಗತಿಸಿದರು. ಸಭಾ ಕಾರ್ಯಕ್ರಮ ಏರ್ಪಡಿಸಲಾಯಿತು. ಆಗಮಿಸಿದಂತ ಅಥಿತಿ ಗಣ್ಯರನ್ನು ಶಾಲಾ ಸೇವಾ ಸಮಿತಿಯ ಮಾಜಿ ಅಧ್ಯಕ್ಷ ದಿವಾಕರ ಶಾಸ್ತ್ರೀಯವರು ಸ್ವಾಗತಿಸಿದರು.

ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪರ್ನೆಕೋಡಿ ಪ್ರಾಸ್ತಾವಿಕ ಮಾತನಾಡಿದರು. ಶ್ರೀ ಶಂಕರಾಚಾರ್ಯರ ಕುರಿತಾಗಿ ಸಾಕಷ್ಟು ಮಾಹಿತಿಗಳನ್ನು ವಿಶೇಷ ಅತಿಥಿಗಳಾಗಿ ಆಗಮಿಸಿದ ಪದವಿ ಪೂರ್ವ ಕಾಲೇಜು ಪದ್ಮುಂಜದ ನಿವೃತ್ತ ಪ್ರಾಂಶುಪಾಲ ಮಹಾಲಿಂಗೇಶ್ವರ ಭಟ್ ಇವರು ನೀಡಿದರು.

ವಿಶೇಷ ಅತಿಥಿಗಳಿಗೆ ಶಾಲಾ ವತಿಯಿಂದ ಸ್ಮರಣಿಕೆ ನೀಡಲಾಯಿತು .ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕಿ ಶೋಭಿತ ಕೆ. ಆರ್. ಇವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಸರ್ವ ಸದಸ್ಯರೂ, ರಕ್ಷಕ ಶಿಕ್ಷಕ ಸಂಘದ ಸರ್ವ ಸದಸ್ಯರೂ, ಪೋಷಕರು, ಅಥಿತಿ ಗಣ್ಯರು, ಹಿತೈಷಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೆ ಪಾತ್ರರಾದರು. ಕಾರ್ಯಕ್ರಮದ ಕೊನೆಯಲ್ಲಿ ಸೇವಾ ಸಮಿತಿಯ ಸದಸ್ಯ ಸತ್ಯ ಶಂಕರ ಭಟ್ ಅಥಿತಿ ಗಣ್ಯರಿಗೆ ಧನ್ಯವಾದವನ್ನು ಸಮರ್ಪಿಸಿದರು.