ಕುತ್ತಿಲ ಕೊಡಮಣಿತ್ತಾಯ ಮಾಡಕ್ಕೆ ಕೊಡಿಮರ ಸಮರ್ಪಣೆ

0

ಪೂಂಜಾಲಕಟ್ಟೆ:ಪಿಲಾತಬೆಟ್ಟು ಗ್ರಾಮದ ಕುತ್ತಿಲ ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ಕೊಡಮಣಿತ್ತಾಯ ಮಾಡಕ್ಕೆ ದೈವದ ಆದೇಶದಂತೆ ಬಿಲ್ಲವ ಸಮಾಜದ ವತಿಯಿಂದ ಕುತ್ತಿಲ ದಿ ರತ್ನಾಕರ ಕರ್ಕೇರ ಫ್ಯಾಮಿಲಿ ಟ್ರಸ್ಟ್ ಮತ್ತು ಆಡಳಿತ ಸಮಿತಿಯ ಆಶ್ರಯದಲ್ಲಿ ಕೊಡಿಮರ ಹಸ್ತಾಂತರ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು.

ಕಾರ್ಯಕ್ರಮದ ಯಶಸ್ಸಿಗೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ರಿ ಕುತ್ತಿಲ, ಬಿಲ್ಲವ ಸಮಾಜ ಸೇವಾ ಸಂಘ ಕುತ್ತಿಲ, ಕಿನ್ನಿದಾರು ಬಿಲ್ಲವ ಮಹಿಳಾ ಸಮಿತಿ ಕುತ್ತಿಲ, ಶ್ರೀರಾಮ ಭಜನಾ ಮಂದಿರ ನೈನಾಡು, ಶ್ರೀರಾಮ ಯುವಕ ಸಂಫ ನೈನಾಡು, ಮಾತೃ ಬಳಗ ನೈನಾಡು, ಶ್ರೀ ಉಮಾ ಮಹೇಶ್ವರ ಗೆಳೆಯರ ಬಳಗ ಕಜೆಕೋಡಿ, ಪಿಲತಕಟ್ಟೆ ಯಕ್ಷಗಾನ ಸಮಿತಿ, ಶನಿಶ್ವರ ಪೂಜಾ ಸಮಿತಿ ಮೂರ್ಜೆ, ವಿಶ್ವ ಹಿಂದು ಪರಿಷತ್ತು ಮತ್ತು ಭರಂಗದಳ ಶ್ರೀರಾಮ ಶಾಖೆ ಶ್ರೀರಾಮ ನಗರ ಪುಂಜಾಲಕಟ್ಟೆ, Skdrdp ಒಕ್ಕೂಟ ಪಿಲಾತಬೆಟ್ಟು ಮುಡುಪಡುಕೋಡಿ ಇರ್ವತ್ತೂರು ಇದರ ಅಧ್ಯಕ್ಷರು ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.

ಕೊಡಿಮರ ಸಮರ್ಪಣಾ ಮೆರವಣಿಗೆ ಕಾರ್ಯಕ್ರಮ ನೈನಾಡಿನ ಸ್ನೇಹಗಿರಿಯಿಂದ ಆರಂಭಗೊಂಡು ಕುತ್ತಿಲ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಮುಕ್ತಾಯವಾಯಿತು. 4 ಕಿ.ಮೀ. ಉದ್ದದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು 56 ಭಜನಾ ಮಂಡಳಿಯ ಸಾವಿರಾರು ನೃತ್ಯ ಭಜಕರು ಸೇರಿದಂತೆ ಕೊಂಬು ವಾಧ್ಯ ಚೆಂಡೆ ಬ್ಯಾಂಡು ಟ್ಯಾಬ್ಲೋ ವಿಶೇಷ ಆಕರ್ಷಣೆಯಾಗಿತ್ತು.

LEAVE A REPLY

Please enter your comment!
Please enter your name here