ಮಾ. 10: ಬೆಳಾಲು ಮಾಯ ದೇವಸ್ಥಾನದ ಜಾತ್ರೋತ್ಸವ ಪ್ರಾರಂಭ

0

ಬೆಳಾಲು: ಮಾಯ ಮಾಯ ಮಹಾದೇವ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಮಾ.10 ರಂದು ಪ್ರಾರಂಭಗೊಂಡು ಮಾ.೧೪ರವರೆಗೆ ಆಲಂಬಾಡಿ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ. ೧೦ರಂದು ಬೆಳಗ್ಗೆ ಗಣಹೋಮ, ಮಾಯ ಗುತ್ತಿನ ಮನೆಯಲ್ಲಿ ಶಾರಿ ಹಾಕಿ ಗೊನೆ ಕಡಿಯುವುದು, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಬಾಲೆ ಮೊಟ್ಟಿಕಲ್ಲು ಪಾದಪೂಜೆ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ತಂತ್ರಿವರ್ಯರಿಗೆ ಸ್ವಾಗತ, ದೇವಸ್ಥಾನದಲ್ಲಿ ತೋರಣ ಇಡುವುದು, ರಾತ್ರಿ ಧ್ವಜಾರೋಹಣ, ಉಗ್ರಾಣ ತುಂಬುವುದು, ಮಹಾ ಪೂಜೆ, ಬಲಿ ಉತ್ಸವ ನೆರವೇರಲಿದೆ. ಬಳಿಕ, ಮಾಯ ಭಜನಾ ಮಂಡಳಿ, ಮಹಿಳಾ ಭಜನಾ ತಂಡ, ಬೆಳಾಲು ಸರಸ್ವತಿ ಮಹಿಳಾ ಭಜನಾ ತಂಡಗಳಿಂದ ಭಜನೆ ನಡೆಯಲಿದೆ, ಆ ಬಳಿಕ, ಮಾಯ, ನಿಂತಿಕಲ್ಲು, ಬೆಳಾಲು ಅಂಗನವಾಡಿ ಮಕ್ಕಳಿಂದ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಂದ ಮತ್ತು ವೈಷ್ಣವಿ ಬಳಗ, ಉಷಾ ಮತ್ತು ಗೆಳೆಯರ ಬಳಗದಿಂದ ನೃತ್ಯ ವೈವಿಧ್ಯ ನಡೆಯಲಿದ್ದು, ರಾತ್ರಿ ಶ್ರೀ ಮಾಯ ಮಹಾದೇವ ಕಲಾ ತಂಡದ ಕಲಾವಿದರಿಂದ ಮಾಸ್ಟ್ರು ಮನಿಪುಜೆರ್ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ.ಮಾ. 11ರಂದು ಬೆಳಗ್ಗೆ ಗಣಹೋಮ, ಕಲಶ ಪೂಜೆ, ಕೊಲ್ಪಾಡಿ ಭಜನಾ ಮಂಡಳಿಯಿಂದ ಭಜನೆ ನಡೆದು ಬಳಿಕ ಮಹಾಪೂಜೆ ನಡೆಯಲಿದೆ. ಸಾಯಂಕಾಲ, ಮಾಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಸಂಜೆ ದುರ್ಗಾ ಪೂಜೆ, ರಾತ್ರಿ ಮಹಾಪೂಜೆ, ಬಲಿ ಉತ್ಸವ ನಡೆದು, ಕೊಲ್ಪಾಡಿ, ಬೇರಿಕೆ ಸುರುಳಿ ಅಂಗನವಾಡಿ ಮಕ್ಕಳಿಂದ ಹಾಗೂ ಬೆಳಾಲು ಈಶ ಕಲಾ ಪ್ರತಿಷ್ಠಾನದವರಿಂದ ನೃತ್ಯ ವೈವಿಧ್ಯ ನಡೆಯಲಿದೆ. ಬಳಿಕ, ರಾತ್ರಿ ತಲಕಳ ಮಕ್ಕಳ ಮೇಳದವರಿಂದ ಭೀಷ್ಮ ವಿಜಯ ಯಕ್ಷಗಾನ ಬಯಲಾಟ ಪ್ರದರ್ಶನಗೊಳ್ಳಲಿದೆ.

ಮಾ. 12 ರಂದು ಬೆಳಗ್ಗೆ ಗಣಹೋಮ, ಸೂಡರ ಬಲಿ ಉತ್ಸವ, ಅನಂತೋಡಿ ಭಜನಾ ಮಂಡಳಿಯ ಪುರುಷರ ಮತ್ತು ಮಹಿಳಾ ತಂಡದಿಂದ ಭಜನೆ, ಮಧ್ಯಾಹ್ನ ಮಹಾ ಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ಉಜಿರೆ ವಿನಾಯಕ ನಗರ ಶ್ರೀ ವಿನಾಯಕ ಭಜನಾ ಮಂಡಳಿಯಿಂದ ಭಜನೆ, ಬೆಳಾಲು ಎಸ್.ಡಿ.ಎಂ. ಪ್ರೌಢಶಾಲಾ ಮಕ್ಕಳಿಂದ ಶಶಿ ಪ್ರಭಾ ಪರಿಣಯ ಯಕ್ಷಗಾನ ಪ್ರದರ್ಶನ ಮತ್ತು ನೃತ್ಯ ಪ್ರದರ್ಶನ ನಡೆಯಲಿದೆ. ರಾತ್ರಿ ಚಂದ್ರಮಂಡಲ ಉತ್ಸವ, ವಸಂತ ಕಟ್ಟೆಪೂಜೆ ನಡೆದ ಬಳಿಕ ವಿಷ ಕಲಾವಿದೆರ್ ಮದ್ದಡ್ಕ ಇವರಿಂದ ಕಾಶಿ ತೀರ್ಥ ನಾಟಕ ಪ್ರದರ್ಶನಗೊಳ್ಳಲಿದೆ.
ಮಾ. 14ರಂದು ಬೆಳಗ್ಗೆ ಗಣಹೋಮ, ಕವಾಟೋದ್ಘಾಟನೆ, ಮಹಾಪೂಜೆ, ಸಂಜೆ ಅವಭೃತ, ಧ್ವಜಾವರೋಹಣ, ನಿತ್ಯಪೂಜೆ, ರಂಗಪೂಜೆ, ರಾತ್ರಿ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳಿಗೆ ನೇಮಬಲಿ, ಗುತ್ತಿನ ಮನೆಗೆ ಭಂಡಾರ ನಿರ್ಗಮನ. ಮಾ. ೧೫ರಂದು ಬೆಳಗ್ಗೆ ಗಣಹೋಮ, ದೇವಸ್ಥಾನದ ನಾಗಬನದಲ್ಲಿ ನಾಗ ತಂಬಿಲ ಸೇವೆ, ಸಂಪ್ರೋಕ್ಷಣೆ ನಡೆಯಲಿದೆ. ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್. ಪದ್ಮ ಗೌಡ ತಿಳಿಸಿದ್ದಾರೆ.

ಮಾ. 13: ರಥೋತ್ಸವ: ಮಾ. 12ರಂದು ಬೆಳಗ್ಗೆ ಗಣಹೋಮ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಪಲ್ಲಪೂಜೆ ನಡೆದ ಬಳಿಕ ಅನ್ನ ಸಂತರ್ಪಣೆ ನೆರವೇರಲಿದೆ. ಸಾಯಂಕಾಲ ಜನಾರ್ದನ ಪೆಲತ್ತಡಿ ಬಳಗದಿಂದ ಭಕ್ತಿಗಾನ ಸುಧೆ. ಮಾಯ ಗುತ್ತು ಮನೆಯಿಂದ ಕೊಡಮಣಿತ್ತಾಯ ಮತ್ತು ಪರಿವಾರ ದೈವಗಳ ಭಂಡಾರ ಆಗಮನ, ರಾತ್ರಿ ರಥೋತ್ಸವ, ಭೂತಬಲಿ ಶಯನೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here