

ಫೆ. 16ರಂದು ಉಜಿರೆ ಜನಾರ್ಧನ ದೇವಸ್ಥಾನದಲ್ಲಿ ಸ೦ಕಷ್ಟಹರ ಚತುರ್ಥಿಯ ಪ್ರಯುಕ್ತ ಸ೦ಜೆ ಗಂಟೆ 6.30 ರಿಂದ 7.30ರ ತನಕ ಉ೦ಡ್ಯಾಪು ನಗರದ ಸ೦ಗೀತ ಶಿಕ್ಷಕಿ ಸುಗುಣ ಎ೦.ಕೆ. ಆಚಾರ್ಯ ಹಾಗೂ ಇವರ ಶಿಷ್ಯರಿ೦ದ ಸ೦ಗೀತ ಕಾರ್ಯಕ್ರಮ ನಡೆಯಿತು.
ಗುರುರಾಜ ಭಟ್ ದೊ೦ಪದಪಲ್ಕೇ ವಯಲಿನ್ ನಲ್ಲಿ ಸಹಕರಿಸಿದರು. ಮಾ. ತಮನ್ ಭಟ್ ಮೃದಂಗದಲ್ಲಿ ಸಹಕರಿಸಿದರು. ಅಧಿತಿ, ಆದ್ಯ, ಅನ್ವಿತ, ಸುಮೇದ, ಭಾನ್ವಿ, ಸುಮೇದ ಶಬರಾಯ, ನಿಸ್ಕಲಾ, ಪ್ರಖ್ಯಾ, ಸಂಹಿತ, ಐಶಿ, ಅದ್ವಿಕ, ಪ್ರಿತೀಕ್ಷ, ಹಾಗೂ ಸಮೀಕ್ಷ ಆಚಾರ್ಯ ಹಾಡಿದರು. ಶರತ್ ಕೃಷ್ಣ ಪಡುವೆಟ್ನಾಯರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು.
ಮುರಳಿ ಕೃಷ್ಣ ಆಚಾರ್ಯ ಸ್ವಾಗತಿಸಿದರು. ಹರ್ಷಿಣಿ ವಂದನಾರ್ಪಣೆ ಮಾಡಿದರು.