ತೆಕ್ಕಾರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ ಭಟ್ರೆ ಬೈಲು ತೆಕ್ಕಾರು ಇದರ ಜೀರ್ಣೋದ್ದಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ರೂಪಾಯಿ ಎರಡು ಲಕ್ಷ ಐವತ್ತು ಸಾವಿರದ ಡಿ. ಡಿ. ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ತುಕರಾಮ ನಾಯಕ್, ಕಾರ್ಯದರ್ಶಿ ಸಂತೋಷ್ ಕಜೆಕೋಡಿ, ದೇವಸ್ಥಾನದ ಟ್ರಸ್ಟ್ ಗಳಾದ ಅನಂತ ಪ್ರಸಾದ್ ನೈತಡ್ಕ, ಸತೀಶ್ ಬೇನೆಪ್ಪು , ಬಾಲಕೃಷ್ಣ ಭಟ್ ನೈತಡ್ಕ, ಜಯಾನಂದ ಇಂತ್ರಿಬೆಟ್ಟು, ಜನಾರ್ಧನ್ ಕುಲಾಲ್ ಸುಜಿತ್ ಮರಮ, ಗೌತಮ್ ನಾರಾಯಣ್, ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ದಯಾನಂದ ಪೂಜಾರಿ ಪಿ., ತೆಕ್ಕಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಶಿವರಾಮ್, ಒಕ್ಕೂಟದ ಅಧ್ಯಕ್ಷ ಪದ್ಮನಾಭ ಕಜೆಕೊಡಿ, ಜನಜಾಗೃತಿ ಗ್ರಾಮ ಸಮಿತಿ ಅಧ್ಯಕ್ಷ ರಮೇಶ್ ಅನಲ್ಕೆ, ಮೊದಲಾದವರು ಉಪಸ್ಥಿತರಿದ್ದರು.