ಕರಾವಳಿ ಪ್ರದೇಶದ ಅಭಿವೃದ್ಧಿಗೆ ರೂ. 500 ಕೋಟಿ ಬಜೆಟ್ ನಲ್ಲಿ ಇಡಲು ಪ್ರಸ್ತಾವನೆ: ಐವನ್ ಡಿಸೋಜ – ಪತ್ರಿಕಾಗೋಷ್ಠಿ

0

ಬೆಳ್ತಂಗಡಿ: ದಕ್ಷಿಣ ಕನ್ನಡ ಕರಾವಳಿ ಪ್ರದೇಶದ ಮೂಲ ಭೂತ ಸೌಕರ್ಯಗಳಾದ ಪ್ರವಾಸೋದ್ಯಮ, ಬೀಚ್, ಮೀನೂಗರಿಕೆ ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಒತ್ತು ನೀಡಿ ಈ ವರ್ಷದ ಬಜೆಟ್ ನಲ್ಲಿ ರೂ. 500ಕೋಟಿ ಅನುದಾನಕ್ಕೆ ಬೇಡಿಕೆಯ ಪ್ರಸ್ತಾವನೆ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು. ಅವರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಫೆ. 28ರಂದು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ದ. ಕ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಬೀಚ್, ಮೂಲಕ ಜನಸಾಮಾನ್ಯರಿಗೆ ಆಕರ್ಷಣೆಗೆ ಒತ್ತು ನೀಡುವ ನೀಟ್ಟಿನಲ್ಲಿ ಕರಾವಳಿ ಪ್ರದೇಶಕ್ಕೆ ರೂ. 500 ಕೋಟಿ ಹಣ ಈ ವರ್ಷದ ಬಜೆಟ್ ನಲ್ಲಿ ಇಡಲು ಅಧಿವೇಶನದಲ್ಲಿ ಮಾತನಾಡಲಾಗುವುದು, ಜಿಲ್ಲಾ ರಸ್ತೆಗಳನ್ನು ರಾಜ್ಯ ರಸ್ತೆಗಳಾಗಿ ರಾಜ್ಯ ರಸ್ತೆಗಳನ್ನು ರಾಷ್ಟೀಯ ಹೆದ್ದಾರಿಯಾಗಿ ಮಾಡಲು ಯೋಜನೆ ಮಾಡಲಾಗುವುದು.

ಮಂಗಳೂರು ಎನ್. ಐ .ಟಿ ಕಾಲೇಜನ್ನು ಅಪ್ ಗ್ರೇಡ್ ಮಾಡಿ ಐ ಐ ಟಿ ಕಾಲೇಜು ಆಗಿ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡಲು ಸರಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಈ ಬಗ್ಗೆ ಯೋಜನೆ ಮಾಡಲಾಗುವುದು.

ಸರಕಾರದ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಯಾವುದೇ ತೊಂದರೆಯಾಗುತ್ತಿಲ್ಲ. ದ. ಕ. ಜಿಲ್ಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಉತ್ತಮ ಫಲಿತಾಂಶದೊಂದಿಗೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
ಗ್ಯಾರಂಟಿ ಯೋಜನೆಯಿಂದ ಕಟ್ಟ ಕಡೆಯ ಜನ ಸಾಮಾನ್ಯರಿಗೆ, ಎಲ್ಲಾ ಪಕ್ಷದವರಿಗೂ ಪ್ರಯೋಜನವಾಗಿದೆ

ಬಿ.ಪಿ.ಎಲ್ ಪಡಿತರ ಚೀಟಿ ರದ್ದು ಮಾಡಿದ ಬಗ್ಗೆ ಆರೋಪ ಸುಳ್ಳು ಅಂಕಿ ಅಂಶ ಪ್ರಕಾರ ಕೇವಲ 806 ಅರ್ಹ ಬಿಪಿಎಲ್ ಕಾರ್ಡ್ ರದ್ದಾಗಿದೆ ಇದರಲ್ಲಿ ನಿಜವಾದ ಅರ್ಹರಲ್ಲದವರ ಕಾರ್ಡ್ ರದ್ದಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು.

ಬೆಳ್ತಂಗಡಿ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಮುಂದಿನ ಬಜೆಟ್ ನಲ್ಲಿ ಹಣ ಇಡಲಾಗುವುದು.ಏಪ್ರಿಲ್ ತಿಂಗಳಿಂದ 5ಕೆ. ಜಿ ಅಕ್ಕಿಯ ಬದಲು 10ಕೆ. ಜಿ ನೀಡಲಾಗುವುದು ಎಂದು ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ. ಕಾಶಿಪಟ್ಣ, ನಾಗೇಶ್ ಕುಮಾರ್ ಗೌಡ, ಜಿ.ಪಂ. ಮಾಜಿ ಸದಸ್ಯ ಶೇಖರ ಕುಕ್ಕೇಡಿ, ಮಹಿಳಾ ಕಾಗ್ರೇಸ್ ಅಧ್ಯಕ್ಷರುಗಳಾದ ನಮಿತಾ ಕೆ. ತೋಟತ್ತಾಡಿ, ವಂದನಾ ಭಂಡಾರಿ, ಕೆಡಿಪಿ ಸದಸ್ಯ ಸಂತೋಷ್ ಬಿ. ಎಲ್, ಹಕೀಮ್ ಕೊಕ್ಕಡ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here