ಬೆಳ್ತಂಗಡಿ: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಚಿತ್ರದುರ್ಗದ ನವೋದಯ ಸಂಸ್ಥೆ ಸಂಘಟಿಸಿರುವ ಅಂತರಾಷ್ಟ್ರೀಯ ಮಟ್ಟದ ಡ್ರಾಯಿಂಗ್ ಪರೀಕ್ಷೆಯಲ್ಲಿ ಬೆದ್ರಮಾರ್ ನಿವಾಸಿ ಶಂಕರ ಶೆಟ್ಟಿ ಮತ್ತು ಶೈಲಜಾ ದಂಪತಿಯ ಪುತ್ರಿಯಾದ 8ನೇ ತರಗತಿಯ ಸಿಂಚನ ಎಸ್., ಇರ್ವತ್ತೂರು ಅಗಲೋಡಿ ನಿವಾಸಿ ರಮೇಶ್ ನಾಯ್ಕ್ ಮತ್ತು ಲತಾ ದಂಪತಿಯ ಪುತ್ರಿಯಾದ 5ನೇ ತರಗತಿಯ ರೇಶ್ಮಾ ನಾಯ್ಕ್ ರಾಷ್ಟ್ರಮಟ್ಟದಲ್ಲಿ ಪ್ರಥಮ, ಕಲಾ ಬಾಗಿಲು ನಿವಾಸಿ ಶಬೀರ್ ಅಹ್ಮದ್ ಮತ್ತು ಶಾಹಿದ ಬಾನು ದಂಪತಿಯ ಪುತ್ರನಾದ 6ನೇ ತರಗತಿಯ ಶಮನ್ ಅಹ್ಮದ್, ಇರ್ವತ್ತೂರು ಅಗಲೋಡಿ ನಿವಾಸಿ ರಮೇಶ್ ನಾಯ್ಕ್ ಮತ್ತು ಲತಾ ರವರ ಪುತ್ರಿಯಾದ 9ನೇ ತರಗತಿಯ ಹೇಮಂತ್ ಆರ್. ನಾಯ್ಕ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ, ನೇರಳಕಟ್ಟೆ ನಿವಾಸಿ ಅಬ್ದುಲ್ ಲತೀಫ್ ಮತ್ತು ಹಸೀನಾ ದಂಪತಿಯ ಪುತ್ರಿ 4ನೇ ತರಗತಿಯ ಸಿಂಬ್ರಾ ಫಾತಿಮಾ, ಅಂಕರ್ಜಾಲ್ ನಿವಾಸಿಯಾದ ಇಬ್ರಾಹಿಂ ಶಾಫಿ ಮತ್ತು ಝುಲೈಕ ಬಾನು ದಂಪತಿಯ ಪುತ್ರಿ 3ನೇ ತರಗತಿಯ ಫಾತಿಮಾ ಫರ್ಹಾ, ಕಲಾಬಾಗಿಲು ನಿವಾಸಿ ಮಹಮ್ಮದ್ ಮುಸ್ತಫಾ ಮತ್ತು ಶಂಶಾದ್ ಬೇಗಂ ದಂಪತಿಯ ಪುತ್ರಿಯಾದ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಭಾಗವಹಿಸಿದ ಇತರ ವಿದ್ಯಾರ್ಥಿಗಳು ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದಿರುತ್ತಾರೆ. ಬುರೂಜ್ ಶಾಲೆ ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉತ್ತಮ ಮುಖ್ಯ ಶಿಕ್ಷಕಿ ಮತ್ತು ಉತ್ತಮ ಸಂಘಟಕ ಪ್ರಶಸ್ತಿಯು ಲಭಿಸಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕ ವೃಂದ ಆಡಳಿತ ಮಂಡಳಿ, ಪೊಷಕರು ಶ್ಲಾಘಿಸಿದ್ದಾರೆ.