
ಸುಲ್ಕೇರಿಮೊಗ್ರು: ದೈವ ಕೊಡಮಣಿತ್ತಾಯ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಇದರ ವರ್ಷಾವದಿ ಜಾತ್ರೋತ್ಸವವು ಫೆ. 23 ಮತ್ತು 24ರಂದು ವಿಜ್ರಂಭಣೆಯಿಂದ ಜರುಗಿತು.

ತೆಲಿಕೆದ ಕಲಾವಿದೆರ್ ಕೊಯಿಲ ಇವರ ಗೆಂದಗಿಡಿ ನಾಟಕ ಪ್ರದರ್ಶನ ಹಾಗೂ ಸುಲ್ಕೇರಿಮೊಗ್ರು ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಸುಲ್ಕೇರಿಮೊಗ್ರು ಇವರು ನೂತನವಾಗಿ ನಿರ್ಮಿಸಿರುವ ಸೇವಾ ಕೌಂಟರಿನ ಉದ್ಘಾಟನಾ ಕಾರ್ಯಕ್ರಮ ಜರುಗಿತು. ಹರೀಶ್ ಹೆಬ್ಬಾರ್ ಮಾಳಿಗೆ, ಚಿತ್ತರಂಜನ್ ಹೆಗ್ಡೆ ಮುಗೇರಗುತ್ತು, ಗಂಗಾಧರ ಮಿತ್ತಮಾರು, ಸೋಮನಾಥ್ ಬಂಗೇರ ವರ್ಪಾಳೆ, ಬೇಬಿ ಬಂಗೇರ ಹುಂಬೆದಡ್ಕ, ಗುರುವಪ್ಪ ಪೂಜಾರಿ, ಪಟ್ಲ ರಾಮಪ್ಪ ಪೂಜಾರಿ, ಬ್ರಹ್ಮಶ್ರೀ ಗುರು ನಾರಾಯಣ ಸೇವಾ ಸಂಘ ಸುಲ್ಕೇರಿಮೊಗ್ರು ಇದರ ಅಧ್ಯಕ್ಷ ಸಂಕೇತ ಬಂಗೇರ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯ ಅಧ್ಯಕ್ಷ ಸಂದೀಪ್ ಪಟ್ಲ ಉಪಸ್ಥಿತರಿದ್ದರು.