ಮುಳಿಕ್ಕಾರು: ಧರ್ಮಸ್ಥಳ ಗ್ರಾಮದ ಮುಳಿಕ್ಕಾರು ಕಾನ ಎಂಬಲ್ಲಿ ಪುರಾತನ ಕಾಲದ ಅಜೀರ್ಣವಸ್ಥೆಯಲ್ಲಿರುವ ದೈವ ದೇವರ ಸಾನಿಧ್ಯದಲ್ಲಿ ಸ್ಥಳ ಪ್ರಶ್ನೆ ಕಾರ್ಯಕ್ರಮವು ನಡೆಯಿತು.
ಸಾವಿರಾರು ವರ್ಷಗಳ ಇತಿಹಾಸವಿರಬಹುದು ಎಂದು ನಂಬಲಾಗುವ ಈ ಪುರಾತನ ದೈವಸ್ಥಾನ ನಾಮವಶೇಷಗೊಂಡು ಸುಮಾರು 250 ವರ್ಷಗಳಿಗೂ ಹೆಚ್ಚಿನ ದೀರ್ಘ ಕಾಲದ ನಂತರ ನಡೆದ ಈ ಸ್ಥಳ ಪ್ರಶ್ನೆ ಕಾರ್ಯಕ್ರಮವನ್ನು
ನೆಲ್ಯಾಡಿಯ ದೈವಜ್ಞರಾದ ಶ್ರೀಧರ್ ಗೋರೆಯವರು ನೆರವೇರಿಸಿದ್ದು, ಗ್ರಾಮದಲ್ಲಿ ಕಂಡು ಬಂದ ಅನೇಕ ತರದ ಕಷ್ಟ,ನಷ್ಟ, ಅಕಾಲಿಕ ಮರಣ, ಇನ್ನಿತರ ಹಿನ್ನಡೆಗಳಿಗೆ ಸಾನಿಧ್ಯದಲ್ಲಿ ಅಜೀರ್ಣವಸ್ಥೆಯಲ್ಲಿರುವ ದೈವ ದೇವರ ಅವಕೃಪೆಯೇ ಕಾರಣ ವೆಂದು ತಿಳಿದು ಬಂದಿದ್ದು, ಸ್ಥಳ ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವಸ್ಥಾನ ಶಿಥಿಲಗೊಂಡು ನಾಮವಶೇಷ ವಾದ ಸ್ಥಳದಲ್ಲಿ ಉಳ್ಳಾಲ್ತಿ, ಉಳ್ಳಾಕ್ಳು ದೈವಗಳ ಸಾನಿಧ್ಯವಿದೆ.

ಹಾಗೂ ಪ್ರಸ್ತುತಕಲ್ಲಾಜೆ ಎಂಬಲ್ಲಿ ಆರಾದಿಸಿಕೊಂಡು ಬರುತ್ತಿರುವ ಗ್ರಾಮ ದೈವ ಪಿಲಿ ಚಾಮುಂಡಿ ದೈವದ ಮೂಲ ಸಾನಿಧ್ಯವೂ ಈ ಕಾನದ ಮಣ್ಣಿನಲ್ಲಿದೆ ಎಂದು ತಿಳಿದು ಬಂದಿದೆ.
ಅಲ್ಲದೇ ನಾಗ ಸಾನಿಧ್ಯ ದಲ್ಲಿ ನಾಗನ ಕಲ್ಲು ಭಗ್ನ ವಾಗಿರುವುದು ಕಂಡು ಬಂದಿದೆ. ಸಾನಿಧ್ಯದ ಹೊರ ಆವರಣದಲ್ಲಿ ಪಂಜುರ್ಲಿ, ಕಲ್ಲುರ್ಟಿ, ಗುಳಿಗ, ಪಿಲಿ ಚಾಮುಂಡಿ ದೈವಗಳ ಸಾನಿಧ್ಯ ವಿರುವುದು ಕಂಡು ಬಂದಿದೆ.
ಇದಕ್ಕೆ ಪರಿಹಾರವಾಗಿ ನಾಮವಶೇಷವಾದ ಸ್ಥಳದಲ್ಲಿ ಉಳ್ಳಾಲ್ತಿ ಉಳ್ಳಾಕ್ಳು ದೈವ ಗಳ ದೈವಸ್ಥಾನ ನಿರ್ಮಾಣ ಮಾಡಬೇಕು, ಪಿಲಿ ಚಾಮುಂಡಿ, ನಾಗದೇವರು ಹಾಗೂ ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ ಪ್ರತ್ಯೇಕ ಕಟ್ಟೆ ಸ್ಥಾಪನೆ ಮಾಡಬೇಕು.
ಹಾಗೂ ಸಾನಿಧ್ಯದಲ್ಲಿರುವ ಬ್ರಹ್ಮ ರಾಕ್ಷಶ, ಪ್ರೇತ ಗಳ ಉಚ್ಚಾ ಟ ನೆಯಾಗಬೇಕು ಹಾಗೂ ಮುಂದೆ ಮಾಡಬೇಕಾದ ಇನ್ನಿತರ ಹಲವಾರು ಪರಿಹಾರ ವಿಧಿಗಳು ಪ್ರಶ್ನೆಯಲ್ಲಿ ಕಂಡು ಬಂದಿದೆ.
ಶತ ಶತಮಾನಗಳು ಕಳೆದ ನಂತರದಲ್ಲಿ ಕಾಲ ಕೂಡಿ ಬಂದಾಗ ದೈವ ಪ್ರೇರಣೆಯಂತೆ ನಡೆದ ಸ್ಥಳ ಪ್ರಶ್ನೆಯ ಈ ಪವಿತ್ರಕಾರ್ಯ ದಲ್ಲಿ ಗ್ರಾಮದ ಗುತ್ತಿನಾರರು, ಸ್ಥಳೀಯ ಜನಪ್ರತಿನಿದಿಗಳು, ಊರ ಪರವೂರ ಮಹನೀಯರು,ಗ್ರಾಮಸ್ಥರು, ಬಂಧುಗಳು,ಊರಿನ ಹಿರಿಯರು, ವೃದ್ಧರು, ಕಿರಿಯರು, ಮಕ್ಕಳು ಎಲ್ಲರೂ ಭಾಗವಹಿಸಿ ಅನಾದಿ ಕಾಲದ ದೈವ ದೇವರ ಅಸ್ತಿತ್ವದ ಸ್ವಾರಸ್ಯ ತಿಳಿಯಲು ಕಾತರರಾಗಿ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. -ವರದಿ: ಶಶಿಧರ್ ಮುಳಿಕ್ಕಾರು