ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಕ್ರಿಯಗೊಳಿಸಿ: ಎಂ ಸಿ ವೇಣುಗೋಪಾಲ್

0

ಬೆಳ್ತಂಗಡಿ: ಬ್ಲಾಕ್ ಕಾಂಗ್ರೆಸ್ ಗೆ ಕೆಪಿಸಿಸಿ ಉಪಾಧ್ಯಕ್ಷರು, ಪಕ್ಷದ ಜಿಲ್ಲೆಯ ಉಸ್ತುವಾರಿ ಎಂ ಸಿ ವೇಣುಗೋಪಾಲ್ ಭೇಟಿ ನೀಡಿ ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಇದು ಕಾರ್ಯಕರ್ತರ ಚುನಾವಣೆ. ಇಂದಿನಿಂದಲೇ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಂಘಟಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಾಯಕರು, ಕಾರ್ಯಕರ್ತರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದರು. ಉಸ್ತುವಾರಿ ಎಂ ಸಿ ವೇಣುಗೋಪಾಲ್ ರವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ವಾಗತಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿಯ ಅಧ್ಯಕ್ಷರಾದ ಕೆ ಎಂ ನಾಗೇಶ್ ಕುಮಾರ್ ಗೌಡ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪದ್ಮನಾಭ ಸಾಲಿಯನ್ ಮಲಾಡಿ, ಜಿಲ್ಲಾ ಕೆಡಿಪಿ ಸದಸ್ಯ ಸಂತೋಷ್ ಕುಮಾರ್, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಹಕೀಮ್ ಕೊಕ್ಕಡ, ಉಪಾಧ್ಯಕ್ಷ ನವೀನ್ ಗೌಡ ಸವಣಾಲು, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಎಸ್.ಸಿ ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮೊಹಮದ್ ಹನೀಫ್ ಉಜಿರೆ, ಪಕ್ಷದ ಪ್ರಮುಖರಾದ ಬಿಕೆ ವಸಂತ್, ಲಕ್ಷ್ಮಣ್ ಗೌಡ ಬಂಗಾಡಿ, ಪ್ರವೀಣ್ ಹಳ್ಳಿ ಮನೆ, ಕಲಂದರ್ ಕೊಕ್ಕಡ, ಪ್ರಭಾಕರ್ ಶಾಂತಿ ಕೋಡಿ, ದಿನೇಶ್ ಮೂಲ್ಯ ಕೊಂಡೆಮಾರು, ಹರೀಶ್ ಕುಮಾರ್ ಗೇರುಕಟ್ಟೆ, ರಾಘವ ಗೇರುಕಟ್ಟೆ, ಗುರುರಾಜ್ ಗುರಿಪಳ್ಳ, ಹರಿಪ್ರಸಾದ್ ಇರುವತ್ರಾಯ, ಮಧುರ ರಾಘವ, ಪುಷ್ಪರಾಜ್‌ ನಾವರ, ಸದಾನಂದ ಬಳಂಜ, ಅಬ್ದುಲ್ ಸಮದ್ ಇಂದಬೆಟ್ಟು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here