ಪುಲಾಬೆ ಮಸ್ಜಿದ್‌ನಲ್ಲಿ ಸರ್ವಧರ್ಮೀಯರ ಸಂಗಮ; ಊರ ಹಿಂದೂ ಹಿರಿಯರಿಗೆ ಸನ್ಮಾನ – ಆಸ್ತಿಕಪ್ರಧಾನ ಭಾರತ ದೇಶದಲ್ಲಿ ಸೌಹಾರ್ದತೆ ಭದ್ರಗೊಳ್ಳಲಿ: ಡಾ. ಝೈನಿ ಕಾಮಿಲ್ ಸಖಾಫಿ

0

ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಸಂಗ್ರಾಮ ದೇಶದ ಸರ್ವ ಜನರ ಐಖ್ಯತೆಯ ಸಂಕೇತವಾಗಿತ್ತು. ಅದರ ಹಿಂದೆ ರಾಷ್ಟ್ರ ಕಟ್ಟುವ ಉದ್ದೇಶವಿತ್ತು. ನಮ್ಮ ದೇಶದ ಬಹುವಿಧ ಸಂಸ್ಕೃತಿ, ಆರಾಧನಾಲಯಗಳೇ ನಮ್ಮ ಶಕ್ತಿ. ಅವುಗಳು ಉಳಿಯಬೇಕು. ಆಸ್ತಿಕಪ್ರಧಾನ‌ವಾದ ಭಾರತದಲ್ಲಿ ಸೌಹಾರ್ದತೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಅಂತಾರಾಷ್ಟ್ರೀಯ ಖ್ಯಾತಿಯ ವಾಗ್ಮಿ ಡಾ. ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಅಲ್ ಕಾಮಿಲ್ ಸಖಾಫಿ ಹೇಳಿದರು.

ಹೊಸಂಗಡಿ ಗ್ರಾಮದ ಪುಲಾಬೆಯಲ್ಲಿ ನವೀಕೃತಗೊಂಡು ಉದ್ಘಾಟನೆಗೊಂಡ ಬದ್ರಿಯಾ ಮಸ್ಜಿದ್ ಮತ್ತು ಮದರಸ ಇದರ ಪ್ರಯುಕ್ತ ಫೆ. 9ರಂದು ನಡೆದ ಸರ್ವಧರ್ಮೀಯ ಸಂಗಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಇನ್ನೋರ್ವ ದಿಕ್ಸೂಚಿ ಭಾಷಣಗಾರ ಖ್ಯಾತ ಸಾಹಿತಿ ಅರವಿಂದ ಚೊಕ್ಕಾಡಿ ಮಾತನಾಡಿ, ಪ್ರತಿಯೊಂದು‌ ಧರ್ಮವೂ ಶ್ರೇಷ್ಠವೇ. ಆದರೆ ಅದರ ಜನರ ನಡವಳಿಕೆ ಶ್ರೇಷ್ಠವಾಗಬೇಕು. ಧರ್ಮದ ಬಗ್ಗೆ ಚರ್ಚೆ ಹೆಚ್ಚಿದ್ದರೂ ಸೌಹಾರ್ದತೆ ಮಾತ್ರ ಕೆಡುತ್ತಿದೆ. ಇದಕ್ಕೆ ಕಾರಣ ಧರ್ಮದ ಹೆಸರಿನಲ್ಲಿ ರಾಜಕೀಯ ಚರ್ಚೆ ನಡೆಯುತ್ತಿರುವುದು. ಪುಲಾಬೆಯಲ್ಲಿ ನಡೆದ ಸರ್ವಧರ್ಮ ಸಭೆಯಲ್ಲಿ ಸಾಕಷ್ಟು ಮಂದಿ ಹಿಂದೂ ಜೈನ ಬಾಂಧವರು ಸೇರಿರುವುದು ಸಂತೋಷ. ಊರ ಹಿಂದೂ ಧರ್ಮದ ಹಿರಿಯರಿಗೆ ಸನ್ಮಾನ ನಡೆಸಿರುವುದು ಮಾದರಿ ಎಂದರು.

ವಿಶೇಷ ಗೌರವ ಸ್ವೀಕರಿಸಿ ಮಾತನಾಡಿದ ಶ್ರೀ‌ಕ್ಷೇತ್ರ ಪಡ್ಯಾರಬೆಟ್ಟದ ಧರ್ಮದರ್ಶಿ ಜೀವಂಧರ್ ಕುಮಾರ್, ಈ ಮಸೀದಿಗೆ ಜಾಗ ನೀಡಿದ ಅಚ್ಚಬ್ಬ ಹಾಜಿ ಅವರ ಜೊತೆಗೆ ನಮಗೆಲ್ಲ ಅನ್ಯೋನ್ಯತೆ ಇತ್ತು.‌ ಜಾಗವನ್ನು ಕೊಡುಗೆ ನೀಡುವಂತೆ ನಾನೂ ಕೇಳಿಕೊಂಡಿದ್ದೆ. ಈಗಿನ ತಲೆಮಾರಿನಲ್ಲಿ‌ ನಮಗೆ ಅನ್ಯೋನ್ಯತೆ ಕಾಣಲು ಸಾಧ್ಯವಾಗುತ್ತಿಲ್ಲ. ಅದರ ಬಗ್ಗೆ ಚರ್ಚಿಸುವುದಿಲ್ಲ. ಇಲ್ಲಿ‌ ಊರಿನ ಹಿರಿಯ ಹಿಂದೂ ಬಾಂಧವರಿಗೂ ಸನ್ಮಾನ ಮಾಡಿರುವುದು ಇಲ್ಲಿನ‌ ದೊಡ್ಡ ಮನಸ್ಸು. ಇಲ್ಲಿ ಈ ಸೌಹಾರ್ದತೆ ಇನ್ನಷ್ಟು ಬೆಳೆಯಲಿ ಎಂದರು.

ಸಮಾಜದ ಹಿರಿಯ ಮುತ್ಸದ್ದಿಗಳಾದ ವೀರಪ್ಪ ಮಡಿವಾಳ, ಆನಂದ ಕೋಟ್ಯಾನ್, ಕೃಷ್ಣಪ್ಪ ಪೂಜಾರಿ, ಸಂಜೀವ ಮೂಲ್ಯ ಮತ್ತು ಡಾ. ರಾಮಕೃಷ್ಣ ಭಟ್ ಅವರನ್ನು ಸನ್ಮಾನಿಸಲಾಯಿತು.

ದ. ಕ ಮತ್ತು ಉಡುಪಿ ಜಿಲ್ಲಾ ಜಮೀಯತುಲ್ ಫಲಾಹ ಅಧ್ಯಕ್ಷ ಕೆ. ಕೆ. ಶಾಹುಲ್ ಹಮೀದ್ ಸಮಾರಂಭ ಉದ್ಘಾಟಿಸಿದರು. ಅಂಗರಕರಿಯ ಮಸೀದಿ ಅಧ್ಯಕ್ಷ ಹಾಜಿ ಜಿ. ಎಂ. ನಜೀಮುದ್ದೀನ್ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಸಚಿವ ಬಿ. ರಮಾನಾಥ ರೈ, ಉದ್ಯಮಿ ಜಿ. ಎಂ. ಶಾಹುಲ್ ಹಮೀದ್ ಗುರುಪುರ, ಪೆರಿಂಜೆರಾಜ್ಯ ಗುತ್ತು ಜಯರಾಜ್ ಕಂಬಳಿ, ಜಿ‌. ಪಂ. ಮಾಜಿ ಉಪಾಧ್ಯಕ್ಷ ಪಿ. ಧರಣೇಂದ್ರ ಕುಮಾರ್, ಕಾಶಿಪಟ್ಣ ಗ್ರಾ ಪಂ. ಅಧ್ಯಕ್ಷ ಸತೀಶ್ ಕೆ. ಬಂಗೇರ, ಹೊಸಂಗಡಿ ಗ್ರಾ. ಪಂ. ಅಧ್ಯಕ್ಷ ಜಗದೀಶ್ ಹೆಗ್ಡೆ, ಹನೀಫ್ ಹಾಜಿ ಗೋಳ್ತಮಜಲು, ಪತ್ರಕರ್ತ ಎಚ್. ಮುಹಮ್ಮದ್ ವೇಣೂರು, ತಾ| ಮುಸ್ಲಿಂ ಒಕ್ಕೂಟ ಅಧ್ಯಕ್ಷ ಬಿ. ಎ. ನಝೀರ್, ಪೆರಿಂಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ್ ರೈ, ನೂರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ, ಗೌರವ ಅಧ್ಯಕ್ಷ ಖಾಲಿದ್ ಪುಲಾಬೆ, ಪೆರಾಡಿ ಸಹಕಾರಿ ಸಂಘದ ಉಪಾಧ್ಯಕ್ಷ ಶ್ರೀಪತಿ ಉಪಾದ್ಯಾಯ, ಸತ್ಯ ಸಾರಮಣಿ ದೈವಸ್ಥಾನ ಕುರ್ಲೊಟ್ಟು ಅಧ್ಯಕ್ಷ ನಾಗೇಶ್ ಕುಮಾರ್ ಅಂಚನ್, ಹೊಸಂಗಡಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ಮುಚ್ಚುರು ಗ್ರಾ. ಪಂ. ಕಾರ್ಯದರ್ಶಿ ಎಂ. ಕೆ. ಸತೀಶ್, ಪ್ರಮುಖರಾದ ಅಬ್ಬೊನು ಮದ್ದಡ್ಕ, ಶೇಕುಂಞಿ ಬೆಳ್ತಂಗಡಿ, ವಿದ್ಯಾನಂದ ಜೈನ್ ಎರ್ಮೋಡಿ, ವಿಠ್ಠಲ ಸಿ. ಪೂಜಾರಿ, ಆನಂದ ಕುಲಾಲ್ ಪದೋಳಿ, ಕೆ. ಎಸ್. ಅಬೂಬಕ್ಕರ್, ಶೇಕ್ ಲತೀಫ್, ಪಂ. ಸದಸ್ಯ ಅಬ್ದುಲ್ ರಹಿಮಾನ್ ಪೆರಿಂಜೆ, ಇಸ್ಮಾಯಿಲ್ ಎಚ್. ಗಾಂಧಿನಗರ , ಹಮೀದ್ ಮುಂತಾದವರು ಉಪಸ್ಥಿತರಿದ್ದರು.

ಆಡಳಿತ ಸಮಿತಿ ಅಧ್ಯಕ್ಷ ಹೆಚ್ ಆಲಿಯಬ್ಬ ಪುಲಾಬೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ಖಾಲಿದ್ ಪುಲಾಬೆ ವಂದಿಸಿದರು.

LEAVE A REPLY

Please enter your comment!
Please enter your name here