

ಧರ್ಮಸ್ಥಳ: ಗ್ರಾಮದ ನಾರ್ಯ ಎರ್ಮುಂಜೆ ಬೈಲ್ ಇದರ ನೂತನ ಭಜನಾ ತಂಡವನ್ನು ಫೆ. 9ರಂದು ನಾರ್ಯ ಅಂಗನವಾಡಿ ವಠಾರದಲ್ಲಿ ನಾಗೇಶ್ ನೆರಿಯ ಇವರ ಮಾರ್ಗದರ್ಶನದಲ್ಲಿ ಉದ್ಘಾಟನೆಗೊಂಡಿತು.
ಸುಮಾರು 30ಕ್ಕೂ ಅಧಿಕ ಊರಿನ ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು. ನಾಗೇಶ್ ನೆರಿಯ ಮಾತನಾಡಿ ಸನಾತನ ಧರ್ಮದ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡಿ ಭಜನೆಯನ್ನು ಪ್ರಾರಂಭಿಸಿದರು.
ಕುಮಾರ್ ನೂಜಿಮಾರ್, ನರೇಶ್ ದೇವಾಡಿಗ, ಸುರೇಶ್ ಜೋಗಿನಾರ್ ಜೊತೆಗಿದ್ದರು.