

ಹೊಸಂಗಡಿ: ಭೀಮ್ ರಾವ್ ಆರ್ಮಿ ನೇತೃತ್ವದಲ್ಲಿ ಹರಿಪ್ರಸಾದ್ ಸ್ಮರಣಾರ್ಥ “ಹರಿ ಪ್ರೇರಣ ಜೀವರಕ್ಷಕ ಆಂಬುಲೆನ್ಸ್ ಸೇವೆ ಲೋಕಾರ್ಪಣೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಸಂತೃಪ್ತಿ ಸಭಾಭವನದಲ್ಲಿ ಫೆ. 9ರಂದು ಸಾರ್ವಜನಿಕ ಆಂಬುಲೆನ್ಸ್ ಲೋಕಾರ್ಪಣಾ ಕಾರ್ಯಕ್ರಮ ಕಾಶಿಪ ಗ್ರಾ. ಪಂ. ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ ಅಧ್ಯಕ್ಷತೆಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಧರ್ಮದರ್ಶಿ ಎ. ಜೀವಂಧರ್ ದೀಪ ಪ್ರಜ್ವಲನೆ ಮೂಲಕ ಉದ್ಘಾಟಿಸಿ, ಆಂಬುಲೆನ್ಸ್ ನ್ನು ಲೋಕಾರ್ಪಣೆ ಮಾಡಿ, ಆಂಬುಲೆನ್ಸ್ ನ್ನು ಸದಾ ಕಾಲ ಸುಸ್ಥಿಯಲ್ಲಿಟ್ಟು 24×7 ಸೇವೆ, ತುರ್ತು ಸ್ಪಂದನೆ ಇತ್ಯಾದಿ ಮತ್ತು ನಮ್ಮ ಕಡೆಯಿಂದ ಸದಾ ಸಹಕಾರ ಇದೆ ಎಂದು ಹೇಳಿ ಭೀಮ್ ರಾವ್ ಆರ್ಮಿ ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು.
ಹೊಸಂಗಡಿ ಗ್ರಾ. ಪಂ. ಅಧ್ಯಕ್ಷ ಜಗದೀಶ್ ಹೆಗ್ಡೆ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಉದ್ಯಮಿ, ಧನಲಕ್ಷ್ಮೀ ಕ್ಯಾಶ್ಯು ಇಂಡಸ್ಟ್ರೀಸ್ ಮಾಲಕ ಶ್ರೀಪತಿ ಭಟ್, ಆಳ್ವಾಸ್ ಹೆಲ್ತ್ ಸೆಂಟರ್ ಮೂಡಬಿದ್ರೆ ಮುಖ್ಯಸ್ಥ ಡಾ. ವಿನಯ ಆಳ್ವಾ, ಉದ್ಯಮಿ ವಿಕಾಸ್ ಜೈನ್ ಪಡ್ಯೋಡಿ ಗುತ್ತು, ಮೂಡಬಿದ್ರಿಯ ವಕೀಲ ನಾಗೇಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಮೂಡಬಿದ್ರಿ ಅಧ್ಯಕ್ಷ ಪ್ರವೀಣ್ ಜೈನ್ ಶಿರ್ತಾಡಿ, ಗ್ಯಾರಂಟಿ ಅನುಷ್ಠಾನ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ಹಾಲು ಉತ್ಪಾದಕ ಸಹಕಾರಿ ಸಂಘ ಪೆರಿಂಜೆ ಅಧ್ಯಕ್ಷ ಸೀತಾರಾಮ ರೈ, ಹೊಸಂಗಡಿ ಪಂ. ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ, ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಇಸ್ಮಾಯಿಲ್ ಕೆ. ಪೆರಿಂಜೆ, ರೊಟೇರಿಯನ್ ಶಿವಯ್ಯ ಎಸ್. ಎಲ್., ಶ್ರೀಪತಿ ಉಪಾಧ್ಯಾಯ, ಉಪಾಧ್ಯಕ್ಷರು ಪೆರಾಡಿ ಕೃಷಿಪತ್ತಿನ ಸಹಕಾರಿ ಸಂಘ, ಉದ್ಯಮಿಗಳಾದ ಸುಶಾಂತ್ ಕರ್ಕೇರ ಸುಹಾನ್ ಫ್ಲೋರಿಂಗ್ ಮಾಡಬಿದ್ರಿ, ಖಾಲಿದ್ ಹೊಸಂಗಡಿ, ಆರಂಬೋಡಿ ಪಂಚಾಯತ್ ಸದಸ್ಯ ಸುದರ್ಶನ್ ಹಕ್ಕೇರಿ, ತಾಲೂಕು ಪಂ. ಮಾಜಿ ಸದಸ್ಯ ಓಬಯ್ಯ ಆರಂಬೋಡಿ, ಕಾಂಗ್ರೆಸ್ ಬೆಳ್ತಂಗಡಿ ನಗರ ಘಟಕದ ಅಧ್ಯಕ್ಷೆ ವಂದನಾ ಭಂಡಾರಿ, ಶರ್ಮಿತ್ ಜೈನ್ ಬಡಕೋಡಿ ಸೇರಿದಂತೆ ದಿ. ಹರಿಪ್ರಸಾದ್ ಅಭಿಮಾನಿಗಳು, ಕುಟುಂಬಸ್ಥರು ಮತ್ತು ಮಿತ್ರರು ಉಪಸ್ಥಿತರಿದ್ದರು.ಭೀಮ್ ಆರ್ಮಿ ಅಧ್ಯಕ್ಷ ಗುರುಪ್ರಸಾದ್ ಪ್ರಾಸ್ತಾವಿಕವಾಗಿ ಮಾತಾಡಿ ಸ್ವಾಗತಿಸಿದರು. ಪ್ರವೀಣ್ ಬಡಕೋಡಿ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕಾರ್ಯದರ್ಶಿ ಶರತ್ ಧನ್ಯವಾದವಿತ್ತರು.