ಬೆಳಾಲು ಅನಂತೋಡಿಯಲ್ಲಿ ಉಜಿರೆ ಬದುಕು ಕಟ್ಟೋಣ ತಂಡ, ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭತ್ತ ಕಟಾವು

0

ಬೆಳಾಲು: ಇಂದಿನ ಯುವ ಪೀಳಿಗೆಗೆ ಅನ್ನದ ಮಹತ್ವ ತಿಳಿಸುವ ಕಾರ್ಯ ಅಗಬೇಕಿದೆ. ಬದುಕು ಕಟ್ಟೋಣ ತಂಡ ಮತ್ತು ವಿವಿಧ ಸಂಘ ಸಂಸ್ಥೆಗಳು ವಿದ್ಯಾರ್ಥಿ ಸಮುದಾಯಕ್ಕೆ ಭತ್ತದ ನಾಟಿ, ಕಟಾವು ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಅರ್ಥಪೂರ್ಣ ಕಾರ್ಯಕ್ರಮ ನೆರೆ ಸಂದರ್ಭದಲ್ಲಿ ನೊಂದವರ ಸೇವೆಗೆಂದೇ ಹುಟ್ಟಿದ ಬದುಕುಕಟ್ಟೋಣ ತಂಡ ನಿರಂತರ ಸಾವಿರಾರು ಕುಟುಂಬದ ಬದುಕು ಕಟ್ಟುವ ಕಾರ್ಯದ ಜೊತೆ ಅನ್ನಬ್ರಹ್ಮನ ಸೇವೆ ಮಾಡುತ್ತಿದೆ ಎಂದು ಧರ್ಮಸ್ಥಳ ಡಾ. ಹೇಮಾವತಿ ವಿ. ಹೆಗ್ಗಡೆ ಹೇಳಿದರು. ಫೆ. 9ರಂದು ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ ಇವರ ನೇತೃತ್ವದಲ್ಲಿ ಶ್ರೀ ಧ. ಮಂ. ಕಾಲೇಜು (ಸ್ವಾಯತ್ತ), ಶ್ರೀ ಧ. ಮಂ. ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಉಜಿರೆ, ಶ್ರೀ ಧ. ಮಂ. ಸ್ಟೋಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ, ವ್ಯವಸ್ಥಾಪನಾ ಸಮಿತಿ ಅನಂತಪದ್ಮನಾಭ ದೇವಸ್ಥಾನ, ಅನಂತೋಡಿ, ಬೆಳಾಲು ಇದರ ಸಹಯೋಗದಲ್ಲಿ ಬೆಳಾಲು ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ವಠಾರದಲ್ಲಿ ಯುವಸಿರಿ ರೈತ ಭಾರತದ ಐಸಿರಿ ಕಲ್ಪನೆಯಂತೆ ಸುಮಾರು 2000ಕ್ಕೂ ಮಿಕ್ಕಿ ಯುವ ಜನತೆಯಿಂದ ಏಕಕಾಲದಲ್ಲಿ ಭತ್ತದ ಕೃಷಿಯ ಕಟಾವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಹಿಂದಿನ ಪದ್ಧತಿ, ಆಚಾರವಿಚಾರಗಳನ್ನು ಯುವಸಮುದಾಯ ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಸೋನಿಯಾ ಯಶೋವರ್ಮ ಉದ್ಘಾಟಿಸಿ ಮಾತನಾಡಿ ನೇಜಿ ನಾಟಿ, ಭತ್ತದ ಕಟಾವು ಕಾರ್ಯಕ್ರಮ ಅಚ್ಚಳಿಯದೆ ಉಳಿಯುವ ಕಾರ್ಯಕ್ರಮ. ಮಕ್ಕಳಿಗೆ ಕುತೂಹಲ, ಆಸಕ್ತಿ ಇದೆ ಆದರೆ ಅವಕಾಶ ಸಿಗುವುದಿಲ್ಲ. ಇಂದು ಬದುಕು ಕಟ್ಟೋಣ ತಂಡ ಭತ್ತದ ಬೆಳೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಮಾಡುತ್ತಿದೆ ಎಂದರು.

ಅನ್ನದ ಮಹತ್ವ ತಿಳಿಯಿರಿ ಅನ್ನ ಬಿಸಾಡಬೇಡಿ ಎಂದರು. ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಮತ್ತು ರಾಜ್ಯ ಯುವಜನ ಸಬಲೀಕರಣ ಕ್ರೀಡಾ ಇಲಾಖೆಯ ಸಮನ್ವಯ ಅದಿಕಾರಿ ಪ್ರಶಾಂತ್ ಲಿಂಗಯ್ಯ ಮಾತನಾಡಿ ಭತ್ತದ ಬೆಳೆಯ ಮಾಹಿತಿ ಕಾರ್ಯಕ್ರಮ ರಾಷ್ಟ್ರೀಯ ಸೇವಾ ಕಾರ್ಯಕ್ರಮಳಿಗೆ ಅಗತ್ಯ ಕಾರ್ಯಕ್ರಮ ಇದರ ಬಗ್ಗೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹನಾಯಕ್ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶೀಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ, ಎಸ್. ಡಿ. ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ ಎಸ್., ,ರುಡ್ ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಿ. ಪಿ. ವಿಜಯಕುಮಾರ್, ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಬಿ. ಎ. ಕುಮಾರ್ ಹೆಗ್ಡೆ , ಉಜಿರೆ ಎಸ್. ಡಿ. ಎಂ ಆಸ್ಪತ್ರೆಯ ಆಡಳಿತ ನಿರ್ದೇಶಕ ಜನಾರ್ದನ್, ಸಿರಿ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎಸ್. ಜನಾರ್ಧನ್, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ. ಪೂರನ್‌ವರ್ಮ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ, ಬೆಳ್ತಂಗಡಿ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ, ಬದುಕು ಕಟ್ಟೋಣ ಬನ್ನಿ ಸೇವಾ ಟ್ಟಸ್ಟ್ ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಬೆಳಾಲು ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ದುರ್ಗಾ ಪ್ರಸಾದ್, ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಉಪನ್ಯಾಸಕ ಮಹೇಶ್ ಶೆಟ್ಟಿ, ಕ್ರೀಡಾ ಇಲಾಖೆಯವರು ಉಪಸ್ಥಿತರಿದ್ದರು.

ಬದುಕು ಕಟ್ಟೋಣ ಸಂಘದ ಸಂಚಾಲಕರಾದ ಮೋಹನ್ ಕುಮಾರ್, ರಾಜೇಶ್ ಪೈ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಸಾವಿರಕ್ಕೂ ಅಧಿಕ ಯುವಜನತೆ ಭಾಗವಹಿಸಿದರು.

ಧನಂಜಯ ಕುಮಾರು ಸ್ವಾಗತಿಸಿದರು. ತಿಮ್ಮಯ್ಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಸ್ಮಿತೇಶ್ ಬಾರ್ಯ,ಅನಿಶ್ ವೇಣೂರು ಸಹಕರಿಸಿದರು. ಬದುಕು ಕಟ್ಟೋಣ ತಂಡ ಮತ್ತು 4 ಸಂಸ್ಥೆಗಳಿಗೆ ಗೊಲ್ಡನ್ ಬುಕ್ ಅಫ್ ರೆಕಾರ್ಡ್ ಏಕಕಾಲದಲ್ಲಿ 4.30 ಎಕರೆ ಗದ್ದೆಯಲ್ಲಿ 735 ಮಂದಿಯಿಂದ ನಡೆದ ನೇಜಿ ನಾಟಿ ಕಾರ್ಯಕ್ರಮಕ್ಕೆ ಬದುಕು ಕಟ್ಟೋಣ ತಂಡಕ್ಕೆ ಗೋಲ್ಡನ್ ಬುಕ್ ವರ್ಲ್ಡ್ ರೇಖಾರ್ಡ್ ಪ್ರಶಸ್ತಿ ಪತ್ರ ಲಬಿಸಿದ್ದು ಇದಕ್ಕೆ ಸಹಕರಿಸಿದ ರೋಟರಿ ಕ್ಲಬ್ ಬೆಳ್ತಂಗಡಿ, ಎಸ್. ಡಿ. ಎಂ ಸ್ಪೋರ್ಟ್ಸ್ ಕ್ಲಬ್ ಉಜಿರೆ, ಎಸ್. ಡಿ. ಎಂ ರಾಷ್ಟ್ರೀಯ ಸೇವಾ ಘಟಕ, ಪತ್ರಕರ್ತರ ಸಂಘ ರಿ ಬೆಳ್ತಂಗಡಿ ಈ ಗಿನ್ನಿಸ್ ದಾಖಲೆ ಗೌರವಕ್ಕೆ ಭಾಜನವಾಯಿತು.

ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ್ ಕುಮಾರ್ ವೈಯುಕ್ತಿಕ ಸಾಧನೆಗೆ ಗಿನ್ನಿಸ್ ದಾಖಲೆ ಗೌರವ ಪಡೆದರು. ಭತ್ತ ಕಟಾವು ಮಾಡಲು ಬಂದ ಯುವ ಸಮುದಾಯ ಸೇರಿ ಮಂದಿಗೆ ಮುಟ್ಟಾಲೆ ಮತ್ತು ಭತ್ತ ಕಟಾವು ಕತ್ತಿಯನ್ನು ನೀಡಲಾಯಿತು.

LEAVE A REPLY

Please enter your comment!
Please enter your name here