ಧರ್ಮಸ್ಥಳ: ಮುಳಿಕ್ಕಾರು ಕಾನ ಸಾನಿಧ್ಯದಲ್ಲಿ ಶ್ರಮದಾನ

0

ಮುಳಿಕ್ಕಾರು: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳಿಕ್ಕಾರು ಗ್ರಾಮದ ಕಾನ ಎಂಬಲ್ಲಿರುವ ಅಜೀರ್ಣವಸ್ಥೆಯಲ್ಲಿರುವ ಅತೀ ಪುರಾತನವಾದ ದೈವ ದೇವರ ಸಾನಿಧ್ಯದಲ್ಲಿ, ಸ್ಥಳ ಪ್ರಶ್ನೆ ನಡೆಯಲಿರುವ ಹಿನ್ನಲೆಯಲ್ಲಿ ಸಾನಿಧ್ಯದ ಆವರಣದ ಸ್ವಚ್ಛತೆ ಮತ್ತು ಚಪ್ಪರ ಹಾಕುವ ಐತಿಹಾಸಿಕವಾದ ಶ್ರಮದಾನಕ್ಕೆ ಫೆ. 9ರಂದು ಚಾಲನೆ ನೀಡಲಾಯಿತು.

250 ವರ್ಷಗಳಿಗೂ ಹೆಚ್ಚಿನ ದೀರ್ಘ ಕಾಲದ ನಂತರ ದೈವ ಪ್ರೇರಣೆ ಯಂತೆ ದೈವ ದೇವರ ಸಾನಿಧ್ಯ ಗಳ ಜೀರ್ಣೋದ್ದಾರ ಮಾಡುವ ಸಂಕಲ್ಪದೊಂದಿಗೆ ಸ್ಥಳ ಪ್ರಶ್ನೆ ನಡೆಸುವ ಹಿನ್ನೆಲೆಯಲ್ಲಿ ಹಮ್ಮಿಕೊಂಡ ಈ ಶ್ರಮದಾನದ ಮೊದಲಿಗೆ ಸಾನಿಧ್ಯದ ದೈವ ದೇವರುಗಳಿಗೆ ಸರ್ವರ ಉಪಸ್ಥಿತಿಯಲ್ಲಿ ಪ್ರಾರ್ಥಿಸಲಾಯಿತು.

ಗ್ರಾಮದ ಗುತ್ತಿನಾರುಗಳಾದ ಧನಕೀರ್ತಿ ಅರಿಗರವರು ಶ್ರಮದಾನಕ್ಕೆ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಸದಸ್ಯ ಮುರಳಿಧರ ದಾಸ್, ವಕೀಲ ಕೇಶವ ಗೌಡ ಬೆಳಾಲು, ದೈವಾರಾಧ ಕರು ಹಾಗೂ ಸಮಾಜ ಸೇವಕರಾದ ನಂದೀಶ್ ಸೋಮಂತಡ್ಕ, ಪುರುಷೋತ್ತಮ ಮೂಡಂಗಲ್, ಹಿರಿಯರಾದ ಗುಮ್ಮಣ್ಣ ಕಲ್ಲಾಜೆ, ವೀರಪ್ಪ ಪಟ್ಟೋಡಿ, ಮುಂತಾದವರು ಶ್ರಮದಾನಕ್ಕೆ ಜೊತೆಯಾಗಿ ಚಾಲನೆ ನೀಡಿದರು.

ಶ್ರಮದಾನದಲ್ಲಿ ಗ್ರಾಮದ ಮತ್ತು ಪರವೂರಿನ ಭಕ್ತರು ಭಾಗವಹಿಸಿ, ಪುರಾತನ ದೈವ ದೇವರ ಸಾನಿಧ್ಯದ ಜೀರ್ಣೋದ್ದಾರದ ಪೂರ್ವದ ಶ್ರಮದಾನದಲ್ಲಿ ಧನ್ಯತೆಯನ್ನು ಮೆರೆದರು.ಶ್ರಮದಾನದಲ್ಲಿ ಪುರುಷರೊಂದಿಗೆ ಶಾಲಾ ಮಕ್ಕಳು, ಮಹಿಳೆಯರು, ಹಿರಿಯರು ಕೂಡ ಭಾಗವಹಿಸಿದರು.

LEAVE A REPLY

Please enter your comment!
Please enter your name here