

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ವಿವಿಧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಳ್ತಂಗಡಿಯ ಅಭಿನಂದನ್ ಹರೀಶ್ ಕುಮಾರ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ರಾಜ್ಯದ ಯುವ ಕಾಂಗ್ರೆಸ್ ಸದಸ್ಯರು ಮತ ಚಲಾಯಿಸಿ ಅಭಿನಂದನ್ ಹರೀಶ್ ರ ಗೆಲುವಿಗೆ ಕಾರಣವಾಗಿದ್ದಾರೆ.
ಈ ಮೂಲಕ ತಾಲೂಕಿನ ಯುವ ನಾಯಕ ಈಗ ರಾಜ್ಯದ ಜವಾಬ್ದಾರಿವಹಿಸಿಕೊಂಡಂತಾಗಿದೆ.