ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯ ದಿಂದ ಡಾಮರ್ ರಸ್ತೆ ನಿರ್ಮಾಣ ವಿಚಾರ ಸಂಕಿರಣ

0

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಎಂಬ ರಾಜ್ಯ ಮಟ್ಟದ ವಿಚಾರ ಸಂಕಿರಣದ 2ನೇ ದಿನದ ತರಬೇತಿಯನ್ನು ಫೆ.7ರಂದು ಉಜಿರೆಯ ಎಂ. ಆರ್. ಎಫ್ ಘಟಕದಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ಹಮ್ಮಿಕೊಳ್ಳಲಾಯಿತು.

ತರಬೇತಿ ಮೊದಲ ಹಂತದಲ್ಲಿ ಎಂ. ಆರ್. ಎಫ್ ಘಟಕದ ಪ್ರಕ್ರಿಯೆ ಬಗ್ಗೆ ಮಾಹಿತಿಯನ್ನು ಘಟಕದ ಆಪರೇಟರ್ ಸುದೇಶ್ ಕಿಣಿ ನೀಡಿದರು. ತದನಂತರ ಮಿಕ್ಸಿಂಗ್ ಪ್ಲಾಂಟ್ ನಲ್ಲಿ ಬಿಟುಮಿನ್ ಪ್ಲಾಸ್ಟಿಕ್ ಮಿಕ್ಸಿಂಗ್ ಬಗ್ಗೆ ಪಂಚಾಯತ್ ರಾಜ್ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿತಿನ್ ಮಾಹಿತಿ ನೀಡಿದರು.

ಮಲ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಭೇಟಿ ನೀಡಿ ಮಲ ತ್ಯಾಜ್ಯ ನಿರ್ವಹಣೆ ಪ್ರಕ್ರಿಯೆ ಕುರಿತು ಮಾಹಿತಿ ಪಡೆಯಲಾಯಿತು. ಸ್ವಚ್ಛ ಸಂಕೀರ್ಣದಲ್ಲಿ ಸಂಗ್ರಹವಾಗುವ ಕಸಗಳಲ್ಲಿ ಮಿಶ್ರಿತವಾಗಿ ಬಂದಿರುವಂತಹ ಗಾಜಿನ ಬಳೆಗಳು, ಎಲೆಕ್ಟ್ರಾನಿಕ್ ವಸ್ತುಗಳು, ಉಡುಪುಗಳು, ಗಾಜಿನ ಬಾಟಲಿಗಳು ಹೀಗೆ ದಿನನಿತ್ಯ ಬಳಕೆ ಆದಂತಹ ವಸ್ತುಗಳು ಕಸವಾಗಿ ಬಂದಿರುವ ಈ ಎಲ್ಲ ವಸ್ತುಗಳನ್ನು ಪ್ರತ್ಯೇಕವಾಗಿ ತ್ಯಾಜ್ಯ ಸಂಪನ್ಮೂಲ ಕೇಂದ್ರವನ್ನು ಸ್ಥಾಪಿಸಿ ಅಲ್ಲಿ ಪ್ರದರ್ಶನಕ್ಕೆ ಇರಿಸಲಾದ ವಸ್ತುಗಳನ್ನು ವೀಕ್ಷಿಸಲಾಯಿತು.

ಅಲ್ಲೇ ಇನ್ನೊಂದು ಘಟಕದಲ್ಲಿ ಸಂಗ್ರಹವಾದಂತ ಪ್ಲಾಸ್ಟಿಕ್ ನಿಂದ ಟೈಲ್ಸ್ ಗಳನ್ನು ಕೂಡ ಮಾಡಲಾಗುತ್ತಿದ್ದು ಅದರ ಒಂದು ಕಾರ್ಯವೈಖರಿಯನ್ನು ಅಲ್ಲಿನ ಮೇಲ್ವಿಚಾರಕರು ವಿವರಿಸಿದರು.

ತರಬೇತಿಯ ಮುಂದುವರಿದ ಭಾಗವಾಗಿ ಎಂ. ಆರ್. ಎಫ್ ಘಟಕದ ಮುಂಭಾಗದಲ್ಲಿ ಸಂಪರ್ಕಿಸುವ ರಸ್ತೆಗೆ ಬಿಟುಮಿನ್ ಹಾಕುವ ಮೂಲಕ ನೇರ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು. ದ. ಕ ಜಿ. ಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ ರಾಯಕೋಡ. ಕೆ.ಎ.ಎಸ್, ಬೆಳ್ತಂಗಡಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರು ವೇಣುಗೋಪಾಲ್. ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರರು ರಘುನಾಥ್, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಬೆಳ್ತಂಗಡಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಜಗದೀಪ್ ಶೆಟ್, ಪಂಚಾಯತ್ ರಾಜ್ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ, ಅಭಿಯಂತರರಾದ ಭರತ್, ಕರ್ನಾಟಕ ರಾಜ್ಯದ ಎಲ್ಲಾ ಎಸ್. ಬಿ. ಎಂ (ಗ್ರಾ) ನೋಡಲ್ ಅಧಿಕಾರಿಗಳು, ಜಿಲ್ಲೆಯ ಉಪಕಾರ್ಯದರ್ಶಿಗಳು, ಯೋಜನಾಧಿಕಾರಿಗಳು, ಕಾರ್ಯಪಾಲಕ ಅಭಿಯಂತರರು, ಕಾರ್ಯಕಾರಿ ಅಭಿಯಂತರರು, ರಾಜ್ಯ ಸಮಾಲೋಚಕರು, ಜಿಲ್ಲಾ ಪಂಚಾಯತ್ ಎಸ್. ಜಿ. ಎಂ. ಬಿ ಜಿಲ್ಲಾ ಸಮಾಲೋಚಕರು, ಉಜಿರೆ ಗ್ರಾಮ ಪಂಚಾಯತ್ ನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು, ಆಳ್ವಾಸ್ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here