

ಬೆಳ್ತಂಗಡಿ: ಸಂತೆಕಟ್ಟೆ ಹೆರಾಜೆ ಕಾಂಪ್ಲೆಕ್ಸ್ ನಲ್ಲಿ ಪ್ರಾರಂಭಗೊಂಡ ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಉದ್ಘಾಟನೆಯನ್ನು ಸಂಸದ ಬ್ರಿಜೇಶ್ ಚೌಟರವರು ಫೆ. 8ರಂದು ನೇರವೇರಿಸಿದರು.

ವಿಧಾನ ಪರಿಷತ್ತಿನ ಮಾನ್ಯ ಶಾಸಕ ಪ್ರತಾಪ್ ಸಿಂಹ ನಾಯಕ್, ಬೆಳ್ತಂಗಡಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್, ಬೆಳ್ತಂಗಡಿ ಪಟ್ಟಣ ಪಂಚಾಯತಿನ ಅಧ್ಯಕ್ಷ ಜಯಾನಂದ ಗೌಡ, ಡಾ. ವಿನಯ್ ಶಾಮ್, ಕಟ್ಟಡದ ಮಾಲಕ ಜಯರಾಮ್ ಬಂಗೇರ, ಕೇಂದ್ರದ ಮಾಲಕಿ ಉಷಾ ಶ್ರೀಧರ ಭಂಡಾರಿ ಹಾಗೂ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ಕರ್ನಾಟಕ ರಾಜ್ಯದ ಮಾಜಿ ನೋಡಲ್ ಅಧಿಕಾರಿ ಡಾ ಅನಿಲ ದೀಪಕ್ ಶೆಟ್ಟಿಯವರು ಉಪಸ್ಥಿತರಿದ್ದರು.

Cardiology at Door steps – CAD ಫೌಂಡೇಶನ್ ವತಿಯಿಂದ, ಖ್ಯಾತ ಹೃದ್ರೋಗ ವೈದ್ಯರಾದ ಡಾ. ಪದ್ಮನಾಭ ಕಾಮತ್ ರವರ ಮೂಲಕ ನೀಡಿದ ಉಚಿತ ಇಸಿಜಿ ಯಂತ್ರವನ್ನು ಸಂಸದರು ಉದ್ಘಾಟಿಸಿ ಸೇವೆಗೆ ಲಭ್ಯ ಗೊಳಿಸಿದರು. ಜೊತೆಗೆ ಉಚಿತ ಮಧುಮೇಹ ಶಿಬಿರವನ್ನು ಸ್ವತ: ತಾವೇ ಮಧುಮೇಹ ಪರೀಕ್ಷೆ ನಡೆಸುವುದರ ಮೂಲಕ ಉದ್ಘಾಟಿಸಿದರು.

ಜನೌಷಧಿ ಕೇಂದ್ರದ ಮಾಲಕರು ಶ್ರೀಮತಿ ಉಷಾ ಶ್ರೀಧರ ಭಂಡಾರಿ ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿದರು.