

ಉಜಿರೆ: ಫೆ. 4ರಂದು ಬೆಳಿಗ್ಗೆ 9:15ಕ್ಕೆ ಉಜಿರೆ ಬಸ್ ನಿಲ್ದಾಣದಿಂದ ಉಜಿರೆ ಅತ್ತಾಜೆಯ ಸಂಜೀವ ಇವರ ಮಗುವನ್ನು ಐಲ್ಯಾಂಡ್ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ, ಉಜಿರೆಯಲ್ಲಿ ಕೆ. ಎಸ್. ಆರ್. ಟಿ. ಸಿ ಬಸ್ ಹತ್ತುವ ವೇಳೆ ನೂಕುನುಗ್ಗಲು ಇದ್ದು ಬಸ್ಸನ್ನು ಹತ್ತುವಾಗ ಯಾರು ಕಳ್ಳರು ಕಿಸೆಗೆ ಕೈ ಹಾಕಿದ ಹಾಗೆ ಅನಿಸಿದ್ದು ಬಸ್ಸಿನಲ್ಲಿ ಕುಳಿತು ಕಿಸೆಯನ್ನು ನೋಡಿದಾಗ ಮಗುವಿನ ಆಸ್ಪತ್ರೆಗೆಂದು ಕಿಸೆಯಲ್ಲಿಟ್ಟಿದ್ದ 50,000 ಹಣವನ್ನು ಕಳ್ಳರು ಕಳವು ಮಾಡಿರುತ್ತಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳಾದ ಫೈಸಲ್(35) ಹಮೀದ್ (45) ಪೋಲಿಸರು ವಶಕ್ಕೆ ಪಡೆದಿದ್ದಾರೆ.