ಫೆ.೬ರಂದು ಬಾರ್ಯದಲ್ಲಿ, ಫೆ.೧೧ರಂದು ಸವಣಾಲುನಲ್ಲಿ ಉಬಾರ್ ಗಯಾಪದ ಕಲಾವಿದರಿಂದ ನಾಗಮಾಣಿಕ್ಯ ತುಳು ಚಾರಿತ್ರಿಕ ಪೌರಾಣಿಕ ನಾಟಕ

0

ಬೆಳ್ತಂಗಡಿ: ಬಾರ್ಯ ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಪರಿಹಾರ ದೈವಗಳ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಹಾಗೂ ನೇಮೋತ್ಸವದ ಪ್ರಯುಕ್ತ ಫೆ.೬ರಂದು ರಾತ್ರಿ ಗಂಟೆ ೯ರಿಂದ ಮತ್ತು ಸವಣಾಲು ಶ್ರೀ ದುರ್ಗಾ ಕಾಳಿಕಾಂಬಾ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಫೆ.೧೧ರಂದು ರಾತ್ರಿ ೯ರಿಂದ ಗಯಾಪದ ಕಲಾವಿದೆರ್ ಉಬಾರ್ ಇವರ ಅಭಿನಯದ ನಾಗ ಮಾಣಿಕ್ಯ ತುಳು ಚಾರಿತ್ರಿಕ ಪೌರಾಣಿಕ ನಾಟಕ ಮೂಡಿ ಬರಲಿದೆ.

ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಇವರ ಸಾರಥ್ಯದ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ ನಾಗ ಮಾಣಿಕ್ಯ ಚಾರಿತ್ರಿಕ ತುಳು ನಾಟಕ ಹಲವು ಪ್ರದರ್ಶನದ ಮೂಲಕ ತುಳುರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದೆ. ವಿನೂತನ ಶೈಲಿಯ ಅದ್ದೂರಿ ರಂಗವಿನ್ಯಾಸ, ಅನೇಕ ವಿಶೇಷತೆಗಳ ಜೊತೆಗೆ ಸಂಪೂರ್ಣ ಧ್ವನಿ ಮುದ್ರಿತ ನಾಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಯಾಪದ ಕಲಾವಿದೆರ್ ಉಬಾರ್ ತಂಡದ ಹೊಸ ಪ್ರಯತ್ನವಾಗಿದೆ. ತುಳು ರಂಗಭೂಮಿಯಲ್ಲಿ ಸಂಚಲನ ಮೂಡಿಸಿ ಹಲವಾರು ಪ್ರದರ್ಶನಗಳತ್ತ ಮುಂದಡಿ ಇಡುತ್ತಿರುವ ನಾಗಮಾಣಿಕ್ಯ ನಾಟಕ ತುಳುನಾಡ ಕಲಾತಪಸ್ವಿ ರವಿಶಂಕರ ಶಾಸ್ತ್ರಿ ಪುಣಚ ಅವರ ಪರಿಕಲ್ಪನೆ, ರಚನೆ, ನಿರ್ದೇಶನ ಮತ್ತು ಅಭಿನಯದಲ್ಲಿ ಮೂಡಿ ಬಂದಿದೆ.

ಸಂಗೀತ ಮಾಂತ್ರಿಕ ಕಾರ್ತಿಕ್ ಶಾಸ್ತ್ರಿ ಮಣಿಲ ಅವರ ಸಂಗೀತ, ಉದಯ್ ಆರ್. ಪುತ್ತೂರು ಇವರ ಸಾಹಿತ್ಯ, ಸಂಧ್ಯಾಶ್ರೀ ಹಿರೇಬಂಡಾಡಿ ಅವರ ನೃತ್ಯ ಸಂಯೋಜನೆ, ರಾಜೇಶ್ ಶಾಂತಿನಗರ ಅವರ ಸಂಪೂರ್ಣ ಸಲಹೆ ಸಹಕಾರದೊಂದಿಗೆ ಪ್ರದರ್ಶನಗೊಳ್ಳಲಿರುವ ನಾಗಮಾಣಿಕ್ಯ ನಾಟಕಕ್ಕೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆಯನ್ನು ಲಿತು ಸೌಂಡ್ಸ್ ಮತ್ತು ಲೈಟ್ಸ್‌ನ ಕೃಷ್ಣ ಮುಂಡ್ಯ, ಸಿದ್ದು ಬೆದ್ರ ಮತ್ತು ವಿಜಯ ಶಾಂತಿನಗರ ನೀಡಿದ್ದಾರೆ. ಹರ್ಷ ಶಾಂತಿನಗರರವರ ಕೈ ಚಳಕ, ಪ್ರದೀಪ್ ಕಾವುರವರ ಮುಖವರ್ಣಿಕೆ ಹಾಗೂ ಗುಣಕರ ಅಗ್ನಡಿಯವರ ಸಹಕಾರದೊಂದಿಗೆ ನಾಟಕ ಪ್ರದರ್ಶನಗೊಳ್ಳಲಿದೆ.

ತಂಡದ ಕಲಾವಿದರುಗಳಾಗಿ ಕಿಶೋರ್ ಜೋಗಿ ಉಬಾರ್, ದಿವಾಕರ್ ಸುರ್ಯ, ಸತೀಶ್ ಶೆಟ್ಟಿ ಹೆನ್ನಾಳ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ, ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರೀ ಹಿರೇಬಂಡಾಡಿ, ಸುನಿಲ್ ಪೆರ್ನೆ, ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಉದಯ್. ಆರ್. ಪುತ್ತೂರು, ಅನೀಶ್ ಉಬಾರ್, ಎ.ಎನ್. ಕೊಳಂಬೆ ರಾಮಕುಂಜ, ಭರತ್ ಕುಮಾರ್ ಶಾಂತಿನಗರ, ಲಿತಿನ್ ಶಾಂತಿನಗರ, ಹರ್ಷ ಶಾಂತಿನಗರ, ಹೃತೀಕಾ ಕೆ. ಬೆಳ್ಳಿಪ್ಪಾಡಿ, ವಿಲಾಸಿನಿ ಶಾಂತಿನಗರ, ಮನ್ವಿತ್ ಬೆಳ್ಳಿಪ್ಪಾಡಿ, ಪ್ರಣೀತಾ ಶಾಂತಿನಗರ ಭಾಗವಹಿಸಲಿದ್ದಾರೆ. ನಾಟಕ ಪ್ರದರ್ಶನದ ಬುಕಿಂಗ್‌ಗೆ ೯೯೦೨೫೪೩೨೭೩, ೮೦೭೩೬೪೧೦೭೧, ೯೦೦೮೧೩೬೩೩೦ ಅಥವಾ ೯೯೮೦೩೮೯೦೧೬ ನಂಬರ್ ಸಂಪರ್ಕಿಸಬಹುದು ಎಂದು ತಂಡದ ಸಂಚಾಲಕ ಕಿಶೋರ್ ಜೋಗಿ ಉಬಾರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here