ಕೊಕ್ಕಡ: ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಚಲಚಿತ್ರ ನಟ ದೇವರಾಜ್ ಕುಟುಂಬ ಸಮೇತ ಫೆ. 6ರಂದು ಬೆಳಿಗ್ಗೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ನಟ ಪ್ರಣಮ್ ದೇವರಾಜ್ ನಟನೆಯ ಸನ್ ಆಫ್ ಮುತ್ತಣ್ಣ ಸಿನಿಮಾ ಮುಂದಿನ ತಿಂಗಳು ಮಾರ್ಚ್ ನಲ್ಲಿ ರಿಲೀಸ್ ಅಗಲಿದ್ದು. ಇದಕ್ಕಾಗಿ ಕುಟುಂಬ ಜೊತೆ ವಿವಿಧ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಿರುವುದಾಗಿ ನಿರ್ಮಾಪಕ ಹರಿಪ್ರಸಾದ್ ಮಾಹಿತಿ ನೀಡಿದರು. ನಟ ದೇವರಾಜ್, ಪತ್ನಿ, ಪುತ್ರ ನಟ ಪ್ರಜ್ವಲ್ ದೇವರಾಜ್, ಪತ್ನಿ ರಾಗಿಣಿ ಪ್ರಜ್ವಲ್ ದೇವರಾಜ್, ಪುತ್ರ ನಟ ಪ್ರಣಮ್ ದೇವರಾಜ್, ನಿರ್ಮಾಪಕ ಹರಿಪ್ರಸಾದ್ ಜೊತೆಯಲ್ಲಿದ್ದರು.