ಎಸ್. ಡಿ. ಎಂ ಪಾಲಿಟೆಕ್ನಿಕ್ ನಲ್ಲಿ ಪ್ರೌಢ ಶಾಲಾ ಶಿಕ್ಷಕರಿಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆಯ ಕುರಿತಾದ ಕಾರ್ಯಗಾರ

0

ಉಜಿರೆ: ಫೆ. 5ರಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ತಾಂತ್ರಿಕ ಶಿಕ್ಷಣದ ಅಗತ್ಯತೆಗಳನ್ನು ತಿಳಿಸಿ ಕೊಡುವ ಉದ್ದೇಶದಿಂದ ಆಯೋಜನೆ ಮಾಡಿದ ತಾಂತ್ರಿಕ ಶಿಕ್ಷಣ ಕಾರ್ಯಾಗಾರ ಯಶಸ್ವಿಯಾಗಿ ನಡೆಸಲಾಯಿತು. ಈ ಕಾರ್ಯಕ್ರಮ ಗಣ್ಯ ಅತಿಥಿಗಳು ಹಾಗೂ ಉಪನ್ಯಾಸಕರ ಉಪಸ್ಥಿತಿಯಲ್ಲಿ ಬೆಳ್ತಂಗಡಿಯ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿರವರಿಂದ ಉದ್ಘಾಟನೆಗೊಂಡಿತು. ಈ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾಡಿದ ಮಾನ್ಯರು ತಾಂತ್ರಿಕ ಶಿಕ್ಷಣದ ಮಹತ್ವ ಮತ್ತು ಅವಕಾಶಗಳು ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಈ ಕಾರ್ಯಾಗಾರದ ಉದ್ದೇಶ ಯಶಸ್ವಿಯಾಗಲೆಂದು ಶುಭ ಹಾರೈಸಿದರು.

ವಿಶೇಷ ಕಾರ್ಯಾಗಾರದ ಸಂಪನ್ಯೂಲ ವ್ಯಕ್ತಿಯಾಗಿ ಆಗಮಿಸಿದ ಜೆ.ಸಿ.ಐ ಭಾರತದ ರಾಷ್ಟ್ರೀಯ ತರಬೇತುದಾರರಾದ ಸತೀಶ್ ಭಟ್ ಬಿಳಿನೆಲೆ ಅವರು ತಾಂತ್ರಿಕ ಶಿಕ್ಷಣದ ಪ್ರಾಮುಖ್ಯತೆ ಹಾಗೂ ಆಧುನಿಕ ಯುಗದಲ್ಲಿ ಅದರ ಅವಶ್ಯಕತೆ ಬಗ್ಗೆ ಪ್ರಭಾವಶಾಲಿ ತರಬೇತಿ ನೀಡಿದರು. ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಅಮರೇಶ್ ಹೆಬ್ಬಾರ್ ಇವರು ವಹಿಸಿದ್ದರು. ವೇದಿಕೆಯ ಮೇಲೆ ಕಾರ್ಯಾಗಾರದ ಸಂಯೋಜಕ ಮಿಥುನ್ ಕುಮಾರ್ ಬಿ. ಉಪಸ್ಥಿತರಿದ್ದರು. ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ಬಿ. ಸೋಮಶೇಖರ್ ಶೆಟ್ಟಿ ಹಾಗೂ ಕಾಲೇಜಿನ ಮ್ಯಾನೇಜರ್ ಚಂದ್ರನಾಥ್ ಜೈನ್ ಮತ್ತು ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ಸಂಪತ್ ಕುಮಾರ್ ನಿರೂಪಣೆ ಮಾಡಿದರು.

ಒಂದು ದಿನದ ಈ ವಿಶೇಷ ಕಾರ್ಯಾಗಾರದಲ್ಲಿ ಬೆಳಗ್ಗೆ ತಾಂತ್ರಿಕ ಶಿಕ್ಷಣದ ಅವಶ್ಯಕತೆ – ಸತೀಶ್ ಭಟ್ ಅವರಿಂದ ತಾಂತ್ರಿಕ ಶಿಕ್ಷಣದ ಮಹತ್ವದ ಕುರಿತು ವಿಸ್ತೃತ ಮಾಹಿತಿ. ಮದ್ಯಾಹ್ನದ ನಂತರ ಗೂಗಲ್ ಡ್ರೈವ್ ವೈಶಿಷ್ಟ್ಯಗಳು ಮತ್ತು ಉಪಯೋಗಗಳು – ಅಮರೇಶ್ ಹೆಬ್ಬಾರ್ ಉಪನ್ಯಾಸಕರು ಎಸ್. ಡಿ. ಎಂ ಪಾಲಿಟೆಕ್ನಿಕ್ ಮತ್ತು ವರದರಾಜ್ ಬಲ್ಲಾಳ್ ಇವರಿಂದ ಮಾಹಿತಿ
ತದನಂತರ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಸಂಪತ್ ಕುಮಾರ್ ಉಪನ್ಯಾಸಕರು ಪಾಲಿಟೆಕ್ನಿಕ್ ಅವರು ವಿದ್ಯಾರ್ಥಿಗಳಿಗೆ ಭವಿಷ್ಯದ ವೃತ್ತಿ ಯೋಜನೆ ಬಗ್ಗೆ ಮಾರ್ಗದರ್ಶನ ನೀಡಿದರು.

ಈ ಕಾರ್ಯಾಗಾರದಲ್ಲಿ ಬೆಳ್ತಂಗಡಿ ತಾಲೂಕಿನ 40ಕ್ಕೂ ಹೆಚ್ಚಿನ ಪ್ರೌಢ ಶಾಲಾ ಶಿಕ್ಷಕರು ಭಾಗವಹಿಸಿ ಸಾರ್ಥಕ ಪ್ರಯೋಜನ ಪಡೆದುಕೊಂಡರು. ಉಪನ್ಯಾಸಕ ಶಿವರಾಜ್ ವಂದನಾರ್ಪಣೆ ಸಲ್ಲಿಸಿದರು.

LEAVE A REPLY

Please enter your comment!
Please enter your name here