ಬಂದಾರಿನಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಆರೋಪಿಗೆ 14 ದಿನ ನ್ಯಾಯಾಂಗ ಬಂಧನ

0

ಬೆಳ್ತಂಗಡಿ: ಕೌಟುಂಬಿಕ ಕಲಹವೊಂದರಲ್ಲಿ ಎರಡು ಕುಟುಂಬಗಳ ನಡುವೆ ಪರಸ್ಪರ ಕತ್ತಿ, ದೊಣ್ಣೆ ಮತ್ತಿತರ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆದಿದ್ದು ಮಾರಣಾಂತಿಕ ಹೊಡೆದಾಟದಲ್ಲಿ ಗಂಭೀರ ಗಾಯಗೊಂಡು ಎರಡೂ ಕುಟುಂಬಗಳಿಗೆ ಸೇರಿದವರು ಬೇರೆ ಬೇರೆ ಆಸ್ಪತ್ರೆಗಳಿಗೆ ದಾಖಲಾದ ಘಟನೆ ಜ.29 ರಂದು ಬಂದಾರು ಗ್ರಾಮದಲ್ಲಿ ನಡೆದಿತ್ತು.

ಬಂದಾರು ಗ್ರಾಮದ ಓಜಾಳಿ ಎಂಬಲ್ಲಿನ ನಿವಾಸಿಗಳಾದ ನೆರೆಹೊರೆಯ ಜಾರಪ್ಪ ಗೌಡ ಮತ್ತು ಕುಟುಂಬದವರು, ಎಲ್ಯಣ್ಣ ಗೌಡ ಕುಟುಂಬದವರು ಮಧ್ಯೆ ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಟ ನಡೆದಿದೆ.
ಕ್ಷುಲ್ಲಕ ಕಾರಣಕ್ಕಾಗಿ ಮತ್ತು ಸೋದರ ಸಂಬಂಧಿಗಳಾದ ಎರಡು ಕುಟುಂಗಳ ಮಧ್ಯೆ ಅಪಾರ್ಥದಿಂದ ಕೌಟುಂಬಿಕ ಕಲಹ ಉಂಟಾಗಿದ್ದು ಎರಡು ದಿನಗಳ ಹಿಂದೆ ಮಾರಣಾಂತಿಕ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಜಾರಪ್ಪ ಗೌಡ (47) ಎಂಬವರ ತಲೆಗೆ ಗಂಭೀರ ಗಾಯವಾಗಿದ್ದು ಪತ್ನಿ ಸುನಂದ ಎಂಬವರ ಸೊಂಟಕ್ಕೆ ಏಟು ಬಿದ್ದಿದೆ ಎಂದು ತಿಳಿದು ಬಂದಿದೆ.

ಮಾರಣಾಂತಿಕ ಹಲ್ಲೆಯಲ್ಲಿ ಭಾಗಿಯಾಗಿ ಘಟನೆ ನಂತರ ತಲೆ ಮರೆಸಿಕೊಂಡಿದ್ದ ಆರೋಪಿ ಜಿತೇಂದ್ರ ಎಂಬಾತನನ್ನು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಫೆ. 1ರಂದು ಬೆಳ್ತಂಗಡಿ ನ್ಯಾಯಾಲಯವು ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here