ಬೆಳ್ತಂಗಡಿ: ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಚಂದ್ರಶೇಖರ್ ನಾಯ್ಕ ಎಂಬವರ ತೋಟದ ಕರೆಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಕೊಳೆತ ಸ್ಥಿತಿಯಲ್ಲಿ 22/10/24 ರಂದು ಪತ್ತೆಯಾಗಿತ್ತು. ಈ ಪ್ರಕರಣದ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು.
ಮೃತದೇಹವನ್ನು ಸ್ಥಳದಲ್ಲೇ ಮಂಗಳೂರು ಕೆ.ಎಸ್.ಹೆಗ್ಡೆ ಆಸ್ಪತ್ರೆಯ ವೈದ್ಯರಿಂದ ಶವಪರೀಕ್ಷೆ ನಡೆಸಿ 23-10-2024 ರಂದು ಕಳಿಯ ಗ್ರಾಮ ಪಂಚಾಯತ್ ಸರ್ವಜನಿಕ ದಫನ ಭೂಮಿಯಲ್ಲಿ ಇಲಾಖೆಯ ಸಮ್ಮುಖದಲ್ಲಿ ಧಪನ ಕಾರ್ಯ ಮಾಡಿದ್ದರು.
ಈ ಸಂಬಂಧ ಬೆಳ್ತಂಗಡಿ ಇನ್ಸೆಕ್ಟರ್ ಸುಬ್ಬಪೂರ್ ಮಟ್ ನೇತೃತ್ವದ ಪೊಲೀಸರು ಮೃತದೇಹದ ಗುರುತನ್ನು 3 ತಿಂಗಳ ಬಳಿಕ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾದ ಬಳಿಕ ಗೇರುಕಟ್ಟೆಯ ಉಮರ್ ಫಾರೂಕ್ ಕುಟುಂಬಸ್ಥರಿಗೆ ಕರೆ ಮಾಡಿದೆ ಹಾಗೂ ಮನೆಗೆ ಬಾರದೆ ಕಳೆದ ಎರಡು ತಿಂಗಳಿಂದ ನಾಪತ್ತೆಯಾಗಿದ್ದ ಈ ಬಗ್ಗೆ ಮನೆಯವರಿಗೆ ಸ್ವಲ್ಪ ಮಟ್ಟಿಗೆ ಅನುಮಾನ ಬಂದು ಶವ ಪರಿಶೀಲನೆ ಮಾಡಿದ್ದರು.
ಮೃತದೇಹದ ಬಟ್ಟೆ ನೋಡಿದಾಗ ಉಮರ್ ಫಾರೂಕ್ ಇರಬಹುದು ಎಂದು ಪೊಲೀಸರಿಗೆ ತಿಳಿಸಿದ್ದರು. ಉಮರ್ ಫಾರೂಕ್ ತಾಯಿ ಜೊಹರಬಿ ಅವರ ಮನವಿ ಮೇರೆಗೆ ಬೆಳ್ತಂಗಡಿ ಪೊಲೀಸರು ಡಿ.ಎನ್.ಎ ಮಾಡಲು ಬೆಳ್ತಂಗಡಿ ಕೋರ್ಟ್ ನಿಂದ ಅನುಮತಿ ಪಡೆದು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ 20-11-2023 ರಂದು ಜೊಹರಬಿಯ ರಕ್ತವನ್ನು ಸಂಗ್ರಹಿಸಿ ಬೆಂಗಳೂರು ಮಡಿವಾಳದಲ್ಲಿರುವ ಎಫ್.ಎಸ್.ಎಲ್ ಕಚೇರಿಯ ಡಿ.ಎನ್. ಸೆಂಟರ್ ಗೆ ಮೃತದೇಹದ ಸ್ಯಾಂಪಲ್ ಕೂಡ ಜೊತೆಯಲ್ಲಿ ಕಳುಹಿಸಿದ್ದರು.
ಇದೀಗ ಡಿ.ಎನ್.ಎ ವರದಿ ಬೆಳ್ತಂಗಡಿ ಪೊಲೀಸರಿಗೆ ಕಳುಹಿಸಿದ್ದಾರೆ. ಡಿ.ಎನ್.ಎ ಮಾಡಿದ ಎಫ್.ಎಸ್.ಎಲ್ ವಿಭಾಗದ ಡಿ.ಎನ್.ಎ ಸೆಂಟರ್ ಅಧಿಕಾರಿಗಳು ಇಬ್ಬರದ್ದು ಒಂದೇ ರಕ್ತ ಅಗಿದ್ದು. ಜೊಹರಬಿ ಅವರ ಮಗ ಉಮರ್ ಫಾರೂಕ್ ಅವರದ್ದೆ ಮೃತದೇಹ ಎಂದು ವರದಿಯನ್ನು ನೀಡಿದ್ದಾರೆ.
ಜ. 27 ರಂದು ಕುಟುಂಬ ಸದಸ್ಯರು ಪುತ್ತೂರು ಎ.ಸಿ. ಕಚೇರಿಗೆ ದಫನ ಮಾಡಿದ ಶವ ಮೇಲಕ್ಕೆತ್ತಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮಸೀದಿಗೆ ತೆಗೆದುಕೊಂಡು ಹೋಗಿ ದಫನ ಮಾಡಲುಅವಕಾಶ ನೀಡಬೇಕಾಗಿ ಅರ್ಜಿ ಸಲ್ಲಿಸಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸರ ಸಮ್ಮುಖದಲ್ಲಿ ಶವ ತೆಗೆದು ಕುಟುಂಬಸ್ಥರಿಗೆ ಮುಂದಿನ ದಿನಗಳಲ್ಲಿ ಹಸ್ತಾಂತರಿಸಲಿದ್ದಾರೆ. ಗಾಂಜಾ ವ್ಯಸನಿಯಾಗಿದ್ದ ಫಾರೂಕ್ ಮಾರಾಟ ಕೂಡ ಮಾಡುತ್ತಿದ್ದ.
ಈತ ಗಾಂಜಾ ನಶೆಯಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಬಚ್ಚಿಡಲು ಹೋಗಿ ದಾರಿ ತಪ್ಪಿ ಹೋಗಿ ಕೆರೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೂವರನ್ನು ಮದುವೆಯಾಗಿದ್ದಾನೆ. ಮೊದಲ ಹೆಂಡತಿ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಕನ್ನಡಿಕಟ್ಟೆ ನಿವಾಸಿ ಝರೀನಾ ಳನ್ನು ಮದುವೆಯಾಗಿ ಎರಡು ಹೆಣ್ಣು ಮಕ್ಕಳನ್ನು ಹೊಂದಿದ್ದಾನೆ. ಬಳಿಕ ಆಕೆಯನ್ನು ಬಿಟ್ಟು ಮಂಗಳೂರು ಫರಂಗಿಪೇಟೆ ನಿವಾಸಿ ಸುಮಯ್ಯಳನ್ನು 2ನೇ ಮದುವೆಯಾಗಿ 1 ಗಂಡು ಮಗು ಇದೆ. ಬಳಿಕ ಆಕೆಯನ್ನು ಬಿಟ್ಟು 3ನೇ ಪತ್ನಿ ಪುತ್ತೂರಿನ ತಯಾಳನ್ನು ಮದುವೆಯಾಗಿ 1 ಗಂಡು ಮತ್ತು 1 ಹೆಣ್ಣು ಮಗು ಇದೆ. ಮನೆಯಲ್ಲಿ ಗಾಂಜಾ ದಸ್ತಾನು ಮಾಡಿದ್ದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿಸಿದ್ದಾಗಿ ಅನುಮಾನದಲ್ಲಿ 3ನೇ ಪತ್ನಿ ತಯಾಳನ್ನು ಮನೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಗೇರುಕಟ್ಟೆ ಕಜೆ ನಿವಾಸಿ ಕೆ.ಎ.ಅಬ್ದುಲಾ ಮತ್ತು ಜೋಹರಬಿ ದಂಪತಿಗಳ ಆರನೇ ಪುತ್ರ ಉಮರ್ ಫಾರೂಕ್.ಕೆ.ಎ (41) ರೌಡಿಶೀಟರ್ ಅಗಿದ್ದು ಇತನ 3ನೇ ಪತ್ನಿಯ ಕೊಲೆ, ಗಾಂಜಾ ಪ್ರಕರಣ ಸೇರಿದಂತೆ ಸುಮಾರು 12 ಪ್ರಕರಣ ಇದೆ.
ಈತ 2020 ರಲ್ಲಿ ತನ್ನ 3ನೇ ಪತ್ನಿ ತಯಾಳನ್ನು ಗೇರುಕಟ್ಟೆ ಮನೆಯಲ್ಲಿ ಕೊಲೆ ಮಾಡಿ ಜೈಲು ಶಿಕ್ಷೆ ಅನುಭವಿಸಿದ್ದ ಬಳಿಕ ಸಾಕ್ಷ್ಯಧಾರ ಕೊರತೆಯಿಂದ ಕೊಲೆ ಪ್ರಕರಣ ಖುಲಾಷೆಯಾಗಿತ್ತು.