ಉಜಿರೆ: ಉಜಿರೆಯಿಂದ ಬೆಳ್ತಂಗಡಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ನ ಹಿಂಬದಿಯ ಟಯರ್ ಕಳಚಿಬಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ ಜ. 30 ರಂದು ನಡೆದಿದೆ.
ಜ. 29 ರಂದು ಉಜಿರೆ ಸರ್ಕಲ್ ಬಳಿ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಮುಖ್ಯ ರಸ್ತೆಯಲ್ಲಿ ಸರಕಾರಿ ಬಸ್ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಸಂಚಾರಕ್ಕೆ ಸಮರ್ಪಕವಾಗಿಲ್ಲದ ಬಸ್ ಗಳನ್ನು ನಿಯೋಜಿಸದಂತೆ ಹಾಗೂ ಉತ್ತಮವಾಗಿ ಇರುವ ಬಸ್ ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಪ್ರತಿಭಟನೆಯಲ್ಲಿ ಆಗ್ರಹಿಸಿದ್ದರು.
ಆದರೆ ಸಂಬಂಧ ಪಟ್ಟವರು ಈ ಬಗ್ಗೆ ಗಮನಹರಿಸದೇ ಮತ್ತೆ ಅಂತಹ ಘಟನೆ ನಡೆದಿದೆ. ಬಸ್ಸಿನಲ್ಲಿ ಕಡಿಮೆ ಜನ ಇದ್ದ ಕಾರಣ ಯಾವುದೇ ಗಂಭೀರ ಅಪಾಯವಾಗಿಲ್ಲ ಇದೇ ಬಸ್ ಶಾಲೆ ಕಾಲೇಜು ಬಿಡುವ ಸಮಯದಲ್ಲಿ ಬರುತ್ತಿದ್ದಲ್ಲಿ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುವ ಅನಿವಾರ್ಯತೆ ಇತ್ತು ಹೀಗಾಗುತಿದ್ದಲ್ಲಿ ಗಂಭೀರ ಪ್ರಮಾಣದ ಅವಘಡಗಳು ಸಂಭವಿಸುವ ಸಾಧ್ಯತೆ ಇತ್ತು.
ಕೆಲವು ಮೂಲಗಳ ಪ್ರಕಾರ ಈ ಬಸ್ ಉಜಿರೆಯಿಂದ ಬೆಳ್ತಂಗಡಿಗೆ ಹೋಗಿ ನಂತರ ಬಂಗಾಡಿ ಕೊಲ್ಲಿಗೆ ಸಂಚರಿಸುವ ಬಸ್ ಎಂದು ಹೇಳುತ್ತಿದ್ದು ಬೆಳ್ತಂಗಡಿ ತಲುಪುವ ಮೊದಲೇ ಉಜಿರೆಯ ಟಿಬಿ ಕ್ರಾಸ್ ಬಳಿ ಚಕ್ರಕಳಚಿ ಅವಘಡ ಸಂಭವಿಸಿದ್ದು ಎನ್ನಲಾಗಿದೆ.