ಬಂದಾರಿನಲ್ಲಿ ಎರಡು ಕುಟುಂಬಗಳ ನಡುವೆ ಮಾರಾಮಾರಿ – ಎರಡೂ ಕಡೆಯವರು ಆಸ್ಪತ್ರೆಗೆ ದಾಖಲು

0

ಬಂದಾರು: ಓಜಾಲಿಯ ಎರಡು ಕುಟುಂಬಗಳ ನಡುವೆ ಜ. 29 ರಂದು ರಾತ್ರಿ ಮಾರಾಮಾರಿ ನಡೆದಿದ್ದು, ಎರಡೂ ಕುಟುಂಬಗಳ ಸದಸ್ಯರೂ ಗಾಯಗೊಂಡಿರುವುದಾಗಿ ಮಾಹಿತಿ ಲಭಿಸಿದೆ. ಓಜಾಲಿನ ಎಲ್ಯಣ್ಣ ಗೌಡ ಮತ್ತು ಜಾರಪ್ಪ ಗೌಡರ ಕುಟುಂಬದ ನಡುವೆ ಇದ್ದ ವೈಮನಸ್ಸು ಮಾರಾಮಾರಿಗೆ ಕಾರಣ ಎನ್ನಲಾಗಿದೆ. ಮತ್ತೊಂದೆಡೆ, ಅಕ್ರಮ ಸಂಬಂಧದ ಶಂಕೆಯೇ ಗಲಾಟೆ ಕಾರಣ ಎನ್ನಲಾಗುತ್ತಿದೆ. ಈ ಕುರಿತು ಜ. 29 ರಂದು ಬೆಳಗ್ಗೆಯೇ ಮಾತಿನ ಚಕಮಕಿ ನಡೆದಿತ್ತು, ರಾತ್ರಿ ಅದುವೇ ಮಾರಾಮಾರಿಗೆ ಕಾರಣವಾಗಿದೆ ಎನ್ನಲಾಗಿದೆ.

ತೀವ್ರ ಗಾಯಗೊಂಡವರನ್ನು ಮಂಗಳೂರಿನ ಕೆ. ಎಂ. ಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮತ್ತೊಂದು ತಂಡ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

LEAVE A REPLY

Please enter your comment!
Please enter your name here