ಬೆಳ್ತಂಗಡಿ: ಸಂವಿಧಾನ ಜಾರಿ ಆದ 76 ನೇ ವರ್ಷದ ಸಂಭ್ರಮಾಚರಣೆಯನ್ನು ಸತ್ಯ ಶೋಧಕ ವೇದಿಕೆ ಇದರ ವತಿಯಿಂದ ಮಾಲಾಡಿ ಗ್ರಾಮದ ಪುರಿಯ ತನಿಯಪ್ಪ ಮನೆಯ ಪರಿಸರದಲ್ಲಿ ಸಾಂಕೇತಿಕವಾಗಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಮೊದಲಿಗೆ ಕಾರ್ಯದರ್ಶಿ ಗಿರೀಶ್ ನೆರೆದಿರುವ ಎಲ್ಲರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಹಿರಿಯ ಮುಖಂಡರಾದ ತನಿಯಪ್ಪ ಉಪಸ್ಥಿತಿರಿದ್ದು, ತಂಡಕ್ಕೆ ಶುಭಹಾರೈಸಿದರು.
ಅದೇ ರೀತಿ ತಂಡದ ಸದಸ್ಯ ನಯನ ರಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸತ್ಯ ಶೋಧಕ ವೇದಿಕೆಯ ಅಧ್ಯಕ್ಷರಾದ ಸುಕೇಶ್ ಕೆ. ಸಂವಿಧಾನದ ಆಶಯಗಳಿಗುಣವಾಗಿ ಸರ್ವರಿಗೂ ಸಮಬಾಳು ಸಮಪಾಲು ಎಂಬಂತೆ ನಮ್ಮಲ್ಲಿ ಇದ್ದದರಲ್ಲಿ ಇಲ್ಲದವರಿಗೆ ಸಹಾಯಹಸ್ತ ನೀಡಿ ಅವರನ್ನು ಸಮಾನವಾಗಿ ತರುವಲ್ಲಿ ಎಲ್ಲರೂ ಕೈ ಜೋಡಿಸೋಣ ಎಂದರು.\
ಬಂದಿರುವ ಎಲ್ಲರಿಗೆ ಕಾರ್ಯಕಾರಿ ಸಮಿತಿ ಸದಸ್ಯ ಸತೀಶ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಪುರಿಯದ ಕಡುಬಡತನದಲ್ಲಿ ಜೀವಿಸುತ್ತಿರುವ ಜಾನಕಿ ಇವರ ಮೊಮ್ಮಗು ಎಂಡೋಸಲ್ಪಾನ್ ನಿಂದ ಬಳಲುತ್ತಿದ್ದು, ವಿವರ ಮನೆಗೆ ಭೇಟಿ ನೀಡಿ ಮಗುವಿನ ಅಗತ್ಯಕ್ಕೆ ಬೇಕಾಗುವ ವಸ್ತುಗಳು ಹಾಗೂ ಅವರ ಮನೆಗೆ ಸುಮಾರು 3 ತಿಂಗಳಿಗಾಗುವಷ್ಟು ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಯೋಗೀಶ್ ಪಣಕಜೆ, ಹರೀಶ್ ಪಣಕಜೆ, ಸತೀಶ್ ಮಾರಿಗುಡಿ, ಚರಣ್ ಕುಕ್ಕೇಡಿ, ಶೀನ ಕುಲ್ಲಂಜ, ಬಾಬಿ ಮಾಲಾಡಿ, ರಮೇಶ್ ಮಡಂತ್ಯಾರ್, ವಿಠಲ ಪುರಿಯ, ರಮೇಶ್ ಪುರಿಯ, ಆನಂದ ಪುರಿಯ ಇವರುಗಳು ಉಪಸ್ಥಿತರಿದ್ದರು.