ಬೆಳ್ತಂಗಡಿ: ಸೇವಾಭಾರತಿ-ಸೇವಾಧಾಮ, ಉತ್ತರ ಕನ್ನಡ ಜಿಲ್ಲೆ ಇದರ ಆಶ್ರಯದಲ್ಲಿ ಕೆನರಾ ಹೆಲ್ತ್ ಕೇರ್ ಸೆಂಟರ್, ಕುಮಟಾ ಮತ್ತು ಲಯನ್ಸ್ ಕ್ಲಬ್ ಕುಮಟಾ ಇವುಗಳ ಸಹಯೋಗದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದವರಿಗಾಗಿ ವಸತಿಯುತ 28ನೇ ಉಚಿತ ಆರೋಗ್ಯ ತಪಾಸಣೆ ಹಾಗೂ ಜಾಗೃತಿ ಶಿಬಿರದ ಉದ್ಘಾಟನಾ ಸಮಾರಂಭವು ಜ. 24 ರಂದು ಕೆನರಾ ಹೆಲ್ತ್ ಕೇರ್ ಸೆಂಟರ್ ಕುಮಟಾದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕುಮಟಾ ಮತ್ತು ಹೊನ್ನಾವರ ತಾಲೂಕಿನ ಮಾನ್ಯ ಶಾಸಕ ದಿನಕರ ಕೆ. ಶೆಟ್ಟಿ ಉದ್ಘಾಟಿಸಿ, ಸೇವಾಧಾಮ ಮಾಡುವ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಮತ್ತು ಡಾಕ್ಟರ್ಸ್ ಗಳಿಂದ ಸಂಪೂರ್ಣ ಸಹಕಾರವನ್ನು ನೀಡುವ ಹಾಗೆ ಮಾಡುತ್ತೇನೆ ಎಂದು ಉದ್ಘಾಟಕರ ನುಡಿಗಳನ್ನಾಡಿದರು.
ಕನ್ಯಾಡಿ, ಸೇವಾಭಾರತಿ ಅಧ್ಯಕ್ಷೆ ಸ್ವರ್ಣಗೌರಿ ಮಾತನಾಡಿ ಕೆನರಾ ಹೆಲ್ತ್ ಕೇರ್ ಸೆಂಟರ್ ನಲ್ಲಿ 3 ವರ್ಷಗಳಿಂದ ನಮಗೆ ಉಚಿತವಾಗಿ ಶಿಬಿರವನ್ನು ನಡೆಸಿಕೊಡಲು ನಮಗೆ ಸಂಪೂರ್ಣ ಸಹಕಾರವನ್ನು ಮಾಡಿಕೊಟ್ಟಿದ್ದೀರಾ ಎಂದು ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕುಮಟಾ ಕೆನರಾ ಹೆಲ್ತ್ ಕೇರ್ ಸೆಂಟರ್ ಅಧ್ಯಕ್ಷ ಗಣೇಶ್ ಗಣಪತಿ ಹೆಗ್ಡೆ, ಲಯನ್ಸ್ ಕ್ಲಬ್ ಕುಮಟಾ ಅಧ್ಯಕ್ಷ ಮಂಗಳ ಬಿ. ನಾಯಕ್, ಕೆನರಾ ಹೆಲ್ತ್ ಕೇರ್ ಸೆಂಟರ್ ನ ಜನರಲ್ ಸರ್ಜನ್ ಡಾ. ಸಚ್ಚಿದಾನಂದ ನಾಯಕ್, ಕುಮಟಾ ಡೆಂಟಲ್ ಸರ್ಜನ್ ಡಾ.ಸುರೇಶ ಹೆಗ್ಡೆ, ಕಾರವಾರ, ಸೇವಾಭಾರತಿಯ ಶಿರಸಿ ವಿಭಾಗ ಪ್ರಮುಖರಾದ ಮೋಹನ್ ಗುನಗಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೆಲ್ಫ್ ಕೇರ್ ಮತ್ತು ಮೆಡಿಕಲ್ ಕಿಟ್ ಅನ್ನು ಒದಗಿಸುವ ಬಗ್ಗೆ, ಮಾಸಾಸನ ರೂ. 5,000/- ಕ್ಕೆ ಹೆಚ್ಚಿಸುವಂತೆ, ಚೈತನ್ಯ ಗಾಲಿಕುರ್ಚಿಯನ್ನು ಒದಗಿಸುವಂತೆ ಮತ್ತು ಆರೈಕೆದಾರರಿಗೆ ಭತ್ಯೆ ನೀಡುವ ಹಾಗೆ ಆಯಾ ಇಲಾಖೆಗಳಿಗೆ ಶಿಫಾರಸ್ಸು ಮಾಡಬೇಕೆಂದು ಕುಮಟಾ ಮತ್ತು ಹೊನ್ನಾವರ ತಾಲೂಕಿನ ಮಾನ್ಯ ಶಾಸಕ ದಿನಕರ ಕೆ. ಶೆಟ್ಟಿರವರಿಗೆ ಮನವಿಯನ್ನು ಮಾಡಲಾಯಿತು. ಒಟ್ಟು 13 ಮಂದಿ ಶಿಬಿರಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಸೇವಾಧಾಮ ಸಂಸ್ಥೆಯ ಸಂಸ್ಥಾಪಕ ಕೆ. ವಿನಾಯಕ ರಾವ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉತ್ತರ ಕನ್ನಡ ಜಿಲ್ಲೆಯ ಕ್ಷೇತ್ರ ಸಂಯೋಜಕ ಸುಧಾಕರ್ ಸ್ವಾಗತಿಸಿ, ಹಿರಿಯ ಪ್ರಬಂಧಕ ಚರಣ್ ಕುಮಾರ್ ಎಂ. ಕಾರ್ಯಕ್ರಮವನ್ನು ನಿರೂಪಿಸಿ, ಉಡುಪಿ ಜಿಲ್ಲೆಯ ಕ್ಷೇತ್ರ ಸಂಯೋಜಕ ಮನೋಜ್ ಶೆಟ್ಟಿ ಧನ್ಯವಾದವಿತ್ತರು.