ಮೇಲಂತಬೆಟ್ಟು: ದಿ. ಲಕ್ಷ್ಮಣ ಸಪಲ್ಯ ಮತ್ತು ಲೋಕಮ್ಮ ದಂಪತಿಯ ಪುತ್ರ ಪೈಂಟರ್ ಆಗಿದ್ದು, ಇತ್ತೀಚೆಗೆ ಅನ್ವೇಷನ ಎಂಬ ಸಂಸ್ಥೆಯ ಮೂಲಕ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದ ಯಶೋದರ (45ವ) ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇವರು ಜ. 22 ರಂದು ಬೆಳ್ತಂಗಡಿಯಲ್ಲಿ ಕಾಂಟ್ರಾಕ್ಟ್ ಮತ್ತು ಸರ್ವಿಸ್ ಮಾಡುವ ಉದ್ದೇಶ ಹೊಂದಿರುವ ಅನ್ವೇಷನಾ ಎಂಬ ಸಂಸ್ಥೆಯನ್ನು ಕಟ್ಟಿದ್ದು, ಉದ್ಘಾಟನೆಗೊಂಡಿತ್ತು.
ಹೃದಯಾಘಾತವಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದು, ಇವರು ಇಬ್ಬರು ಸಹೋದರರು ಹಾಗೂ ಮಡದಿ, ಪುತ್ರಿಯನ್ನು ಅಗಲಿದ್ದಾರೆ.