ಬೆಳ್ತಂಗಡಿ: 2024 ರ ಡಿ. 14 ರಂದು ಮೈಸೂರಿನ ಜಯಮ್ಮ (72 ವ) ಯಾರಿಗೂ ತಿಳಿಸದೆ ಮನೆಯಿಂದ ಹೋದವರು ಇದುವರೆಗೂ ಹಿಂತಿರುಗದೆ ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಬಗ್ಗೆ ಕುವೆಂಪು ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 4.9 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ದುಂಡು ಮುಖ, ಬಿಳಿ ತಲೆ ಕೂದಲು ಹೊಂದಿರುವ ಇವರು ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾರೆ. ಕಾಣೆಯಾಗುವ ವೇಳೆ ನೇರಳೆ ಬಣ್ಣದ ಸೀರೆ ಧರಿಸಿದ್ದರು. ಮುಖದಲ್ಲಿ ಬಂಗಿನ ಕಲೆ ಮತ್ತು ಹೊಟ್ಟೆಯ ಮೇಲೆ ಬಿಳಿ ಮಚ್ಚೆ ಇರುತ್ತದೆ.
ಹೃದಯದ ತೊಂದರೆಯಿಂದ ಬಳಲುತ್ತಿರುವ ಇವರ ಕುರಿತು ಮಾಹಿತಿ ದೊರೆತಲ್ಲಿ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ಇಲ್ಲವೇ ದೂರವಾಣಿ ಸಂಖ್ಯೆ: 8147206233 ಅಥವಾ 9591407325, 8951624274 ಗೆ ಸಂಪರ್ಕಿಸಿ ಮಾಹಿತಿ ನೀಡಲು ಮನವಿ. ಎ. ಆರ್. ರಂಗಸ್ವಾಮಿ ಎ- 5 ಸದ್ಗುರು ನಿಲಯ, ಕುವೆಂಪು ನಗರ ಮೈಸೂರು.