ಕಳೆಂಜ: ಶ್ರೀ ಕ್ಷೇತ್ರದ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಿ. ವೀರೇಂದ್ರ ಹೆಗ್ಗಡೆ ಕಳೆಂಜ ಸದಾಶಿವೇಶ್ವರ ದೇವಸ್ಥಾನದ ಸಭಾಭವನದ ರಚನೆಗೆ ಮಂಜೂರು ಮಾಡಿರುವ ರೂ. 2 ಲಕ್ಷ ಮೊತ್ತದ ಮಂಜೂರಾತಿ ಪತ್ರವನ್ನು ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಆಡಳಿತ ಸಮಿತಿಯ ಅಧ್ಯಕ್ಷ ಕೆ. ಶ್ರೀಧರ್ ರಾವ್ ರವರಿಗೆ ಪ್ರಮುಖರು ಹಾಗೂ ಒಕ್ಕೂಟದ ಪದಾಧಿಕಾರಿಗಳ ಸಮ್ಮುಖದಲ್ಲಿ ಹತ್ತಾಂತರಿಸಲಾಯಿತು.
ಈ ಸಂದರ್ಭ ಆಡಳಿತ ಮಂಡಳಿಯ ಕಾರ್ಯದರ್ಶಿ ಕುಸುಮಾಕರ, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ಕೇಶವ ಗೌಡ ಮಲ್ಲಜಾಲು, ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಬರಮೇಲು, ಆಡಳಿತ ಮಂಡಳಿಯ ಸದಸ್ಯ ನೀಲಯ್ಯ ಗೌಡ, ಹಿರಿಯರಾದ ಬಾಲಣ್ಣ ಗೌಡ ಬದಿಮಾರು, ರಾಮಚಂದ್ರಗೌಡ ಕೊಲಂಬೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಬರಮೇಲು, ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರೇಮ ಬಿ. ಎಸ್., ರುಕ್ಮಯ್ಯಗೌಡ ಬರಮೇಲು, ಗೀತಾ ಕಜೆತಕೊಡಿ, ಉಮೇಶ್ ರೈ, ಮೇಲ್ವಿಚಾರಕ ರವೀಂದ್ರ, ತಾಲೂಕಿನ ಕೃಷಿ ಅಧಿಕಾರಿ ರಾಮ್ ಕುಮಾರ್ ಉಪಸ್ಥಿತರಿದ್ದರು.