ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕ್ರೀಡಾ ವಿಭಾಗ ಆಯೋಜಿಸಿದ ಎಸ್. ಡಿ. ಎಂ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ – ಬಾಲಕಿಯರ ಕ್ರೀಡಾಕೂಟವು ಡಿ. 31 ರಂದು ಇಂದ್ರಪ್ರಸ್ಥ ಕ್ರೀಡಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್. ಡಿ. ಎಂ ಶಿಕ್ಷಣ ಸಂಸ್ಥೆ ಉಜಿರೆಯ ಕಾರ್ಯದರ್ಶಿಯಾದ ಡಾ. ಸತೀಶ್ ಚಂದ್ರ ಎಸ್. ಹಾಗೂ ಮುಖ್ಯ ಅತಿಥಿಯಾಗಿ ಎಸ್. ಡಿ. ಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಎ. ಕುಮಾರ್ ಹೆಗ್ಡೆ ದೀಪ ಪ್ರಜ್ವಲಿಸಿ, ಕ್ರೀಡಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿತ ಮಾತುಗಳನ್ನು ಆಡಿದರು. ಎಸ್. ಡಿ. ಎಮ್ ಸಂಸ್ಥೆಯ ಕ್ಷೇಮಪಾಲನ ಅಧಿಕಾರಿಯಾದ ಧನ್ಯ ಕುಮಾರ್, ಕ್ರೀಡಾ ವಿಭಾಗದ ಕಾರ್ಯದರ್ಶಿಯಾದ ರಮೇಶ್ ಹೆಚ್. ಉಪಸ್ಥಿತರಿದ್ದರು.
ಪಂದ್ಯಾಟದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಎಸ್. ಡಿ. ಎಂ ಶಿಕ್ಷಣ ಸಂಸ್ಥೆ ಉಜಿರೆಯ ಕಾರ್ಯದರ್ಶಿಯಾದ ಸತೀಶ್ಚಂದ್ರ ಎಸ್. ಹಾಗೂ ಎಸ್. ಡಿ. ಎಮ್ ಮಲ್ಟಿ – ಸ್ಪೆಷಾಲಿಟಿ ಹಾಸ್ಪಿಟಲ್ ಉಜಿರೆ ಇದರ ಚೀಫ್ ಮೆಡಿಕಲ್ ಆಫೀಸರ್ ಡಾ. ಸಾತ್ವಿಕ್ ಜೈನ್ ಇವರು ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರಶಂಸೆಪಟ್ಟರು.
ಈ ಸಂದರ್ಭದಲ್ಲಿ ಎಸ್. ಡಿ. ಎಮ್ ಕ್ರೀಡಾ ವಿಭಾಗದ ಕಾರ್ಯದರ್ಶಿ ಹಾಗೂ ಎಸ್. ಡಿ. ಎಂ ಕಾಲೇಜಿನ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಎಸ್. ಡಿ. ಎಂ ಜನಾರ್ಧನ ಪ್ರೌಢಶಾಲಾ ದೈಹಿಕ ಶಿಕ್ಷಕ ಗಿರೀಶ್ ನೆರವೇರಿಸಿದರು.
ಸ್ವಾಗತವನ್ನು ಕ್ರೀಡಾ ಕಾರ್ಯದರ್ಶಿ ರಮೇಶ್ ಹೆಚ್. ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ ಪೂಂಜ ಧನ್ಯವಾದವಿತ್ತರು.