ವೇಣೂರು: ಕ್ರಿಸ್ತ ರಾಜ ದೇವಾಲಯದಲ್ಲಿ ಕ್ರಿಸ್ ಮಸ್ ಪ್ರಯುಕ್ತ ಕ್ರಿಸ್ ಮಸ್ ಸೌಹಾರ್ದ ಕೂಟ ಧರ್ಮ ಗುರುಗಳಾದ ವಂ. ಪೀಟರ್ ಅರಾನ್ಹ ರವರ ಅಧ್ಯಕ್ಷತೆಯಲ್ಲಿ ಡಿ. 29 ರಂದು ವೇಣೂರು ಗಾರ್ಡನ್ ವ್ಯೂ ಸಭಾಂಗಣದಲ್ಲಿ ಜರಗಿತು.
ವಂ. ಜೆರೋಮ್ ಡಿ’ಸೋಜಾ, ಧರ್ಮ ಗುರುಗಳು ನಾರಾವಿ ಮತ್ತು ವಿಶ್ರಾಂತ ಪ್ರಾಂಶುಪಾಲರು, ಸೆಕ್ರೆಟ್ ಹಾರ್ಟ್ ಕಾಲೇಜು ಮಡಂತ್ಯಾರು ಕಾರ್ಯಕ್ರಮವನ್ನು ಉದ್ಘಾಟಿಸಿ, ಕ್ರಿಸ್ ಮಸ್ ಸಂದೇಶ ನೀಡಿದರು.
ಯೋಗೇಶ್ ಕೈರೋಡಿ ಕನ್ನಡ ವಿಭಾಗ ಮುಖ್ಯಸ್ಥರು ಆಳ್ವಾಸ್ ಕಾಲೇಜ್ ಮೂಡಬಿದ್ರೆ, ಮಹಮದ್ ಸದಾಕತ್ ಪ್ರಾಂಶುಪಾಲರು ಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡಬಿದ್ರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿ ಕ್ರಿಸ್ ಮಸ್ ಸೌಹಾರ್ದ ಕೂಟವನ್ನು ಆಯೋಜಿಸಿದ ಕ್ರಿಸ್ತ ಬಾಂಧವರನ್ನು ಅಭಿನಂದಿಸಿದರು.
ವೇಣೂರು ಚರ್ಚ್ ಪಾಲನ ಮಂಡಳಿಯ ಉಪಾಧ್ಯಕ್ಷ ಡೇನಿಸ್ ಸಿಕ್ವೇರಾ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಕ್ರಿಸ್ತ ಜಯಂತಿಯ ಪ್ರಯುಕ್ತ ರೂಪಕ ಹಾಗೂ ಗೀತಾ ನೃತ್ಯ ಪ್ರದರ್ಶನ ಜರುಗಿತು. ಈ ಸಭೆಯಲ್ಲಿ ಬಹುಸಂಖ್ಯೆಯಲ್ಲಿ ಸರ್ವಧರ್ಮೀಯರು ಉಪಸ್ಥಿತರಿದ್ದರು. ವಿನೋದ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು. ಹೆನಿಡ್ರಿ ಮೋರಸ್ ಧನ್ಯವಾದ ಸಲ್ಲಿಸಿದರು.