ಬೆಳ್ತಂಗಡಿ: ಮಂಜುಶ್ರೀ ಜೇಸಿ ಸಪ್ತಾಹ ಸಮಾರೋಪ

0

p>

ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಕ್ಜಿದಾಗ ಮತ್ತು ಯುವ ಮನಸ್ಸಿನಲ್ಲಿ ವ್ಯಕ್ತಿತ್ವ ಬೆಳೆದಾಗ ದೇಶದ ಸಂಪತ್ತು ಬೆಳೆದಂತೆ. ಜೆಸಿಐ ಸಂಸ್ಥೆಯು ವ್ಯಕ್ತಿತ್ವವನ್ನು ಬೆಳೆಸುವ ಮೂಲಕ ದೇಶದ ಸಂಪತ್ತನ್ನು ಬೆಳೆಸುತ್ತದೆ ಎಂದು ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅದ್ಯಕ್ಷ ಸುಮಂತ್ ಕುಮಾರ್ ಜೈನ್ ಹೇಳಿದರು. ಅವರು ಡಿ. 20ರಂದು ಬೆಳ್ತಂಗಡಿ ಶ್ರಿ ಗುರುನಾರಾಯಣ ಸಂಕೀರ್ಣದ ಸಭಾಭವನದಲ್ಲಿ ಡಿ. 14 ರಿಂದ ನಡೆದ ಮಂಜುಶ್ರಿ ಜೇಸಿಐ ಬೆಳ್ತಂಗಡಿ ಇದರ ಜೇಸಿ ಸಪ್ತಾಹ 2024 ಸುಧಾಮ ಸ್ನೇಹ- ಸಾಧನೆ- ಸಮ್ನಿಲನ ಕಾರ್ಯಕ್ರಮದ ಸಮಾರೋಪದಲ್ಲಿ ಜೇಸಿಐ ವತಿಯಿಂದ ಅತ್ಯುತ್ತಮ ಯುವ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ನಾಯಕತ್ವ ಗುಣವನ್ನು ಕಲಿಸುವ ಜೇಸಿಐ ಸಾವಿರಾರು ಯುವಕರಿಗೆ ದಾರಿದೀಪವಾಗಿದೆ. ಯಾರಾದರು ಸಾಧನೆ ಮಾಡಬೇಕಾದರೆ ಇನ್ನೊಬ್ಬರ ಸಾಧನೆಯನ್ನು ನೋಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ವೈದ್ಯರಾಗಬೇಕು, ಉತ್ತಮ ಇಂಜಿನಿಯರಿಯ ಆಗಬೇಕು ಎಂದು ಕನಸು ಕಂಡು ಎಕ್ಸೆಲ್ ಕಾಲೇಜು ಪ್ರಾರಂಭಿಸಿದೆ. ಇದಕ್ಕೆ ಪ್ರೇರಣೆ ಶ್ರಿ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುವ ರತ್ನಮಾನಸ, ಸಿದ್ದವನದ ಶಿಕ್ಷಣ. ಇಲ್ಲಿಯ ಶಿಸ್ತು ಮತ್ತು ಶಿಕ್ಣಣ ಈ ಮಟ್ಟಕ್ಕೆ ಬೆಳೆಸಿದೆ.

ಮೂಡಬಿದ್ರೆಯ ಡಾ. ಎಂ.ಮೋಹನ್ ಆಳ್ವರ ಆಳ್ವಾಸ್ ಕಾಲೇಜಿನಲ್ಲಿ ವೃತ್ತಿ ಮಾಡುವ ಭಾಗ್ಯ ಸಿಕ್ಕಿರುವುದು. ಇವರ ಸಾಧನೆಯೇ ನಮಗೆ ಪ್ರೇರಣೆ. ಇಂದು ಎಕ್ಸೆಲ್ ಕಾಲೇಜಿನಲ್ಲಿ ಮೂರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದರೆ ಐನೂರಕ್ಕೂ ಅಧಿಕ ಸಿಬ್ಬಂದಿ ವರ್ಗ ಇದ್ದಾರೆ. ನಮ್ಮ ವಿದ್ಯಾರ್ಥಿಗಳು ತಂದೆ ತಾಯಿಗೆ ಉತ್ತಮ ಮಕ್ಕಳಾಗಬೇಕು ಮತ್ತು ದೇಶದ ಉತ್ತಮ ಪ್ರಜೆಗಳಾಗಬೇಕು ಎಂಬುದೇ ಉದ್ದೇಶವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಜಿರೆ ಲಕ್ಷ್ಮೀ ಗ್ರುಪ್ ನ ಮಾಲಕ ಉಜಿರೆ ಬದುಕು ಕಟ್ಟೋಣ ತಂಡದ ಸಂಚಾಲಕ ಕೆ.ಮೋಹನ್ ಕುಮಾರ್ ಮಾತನಾಡಿ ಯುವ ಸಮಾಜವನ್ನು ಆದರ್ಶವಾಗಿ ಬೆಳೆಸುವ ಸಂಸ್ಥೆ ಜೇಸಿಐ. ಇಂತಹ ಸಂಸ್ಥೆಯ ಜೊತೆ ಇರುವುದೇ ಭಾಗ್ಯವಾಗಿದೆ. ನಮ್ಮ ಬದುಕು ಕಟ್ಟೋಣ ತಂಡ ಸರಕಾರಿ ಶಾಲಾ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮತ್ತು ಶಾಲಾ ಕಟ್ಟಡಗಳ ನವೀಕರಣ ಕಾರ್ಯ ಮಾಡುತ್ತಿದೆ. ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಸಿಗಬೇಕು. ಕ್ರೀಡೆಗಳಲ್ಲಿ ಉತ್ತಮ ಅವಕಾಶ ಸಿಗಬೇಕು ಎಂದು ಶ್ರಮಿಸುತ್ತಿದೆ .ಇತ್ತೀಚೆಗೆ ವಿದ್ಯಾರ್ಥಿಗಳಿಗೆ ಭತ್ತದ ಬೆಳೆಯ ಬಗ್ಗೆ ಮಾಹಿತಿ ನೀಡುವ ಕಾರ್ಯ ಮಾಡುತ್ತಿದೆ ಎಂದರು.

ಜೇಸಿಐ ವಲಾಯಾದ್ಯಕ್ಷ ಗಿರೀಶ್ ಎಸ್. ಪಿ. ಮಾತನಾಡಿ ಬೆಳ್ತಂಗಡಿ ಜೇಸಿಐ ಘಟಕಕ್ಕೆ ಅತ್ಯುತ್ತಮ ಘಟಕ ಎಂಬ ಹೆಸರಿದೆ. ಈ ವರ್ಷವಂತು ಅತ್ಯುತ್ತಮ ಸಾಧನೆ ಮಾಡಿ ದಾಖಲೆಯಾಗಿ ಪ್ರಶಸ್ತಿ ಪಡೆದಿದೆ. ಅಧ್ಯಕ್ಷ ರಂಜಿತ್ ರವರ ಶ್ರಮ ಇಡೀ ಜೇಸಿಐ ಘಟಕಗಳಿಗೆ ಮಾದರಿ ಎಂದರು. ಬೆಳ್ತಂಗಡಿ ಜೇಸಿಐ ಅದ್ಯಕ್ಷ ರಂಜಿತ್ ಹೆಚ್. ಡಿ. ಅದ್ಯಕ್ಷತೆ ವಹಿಸಿ ಮಾತನಾಡಿ ಗ್ರಾಮೀಣ ಭಾಗಗಳಲ್ಲಿ ಜೇಸಿಐ ಸಂಸ್ಥೆ ಬೆಳೆಯಬೇಕು ಎಂಬ ಕಲ್ಪನೆಯಿಂದ ಈ ವರ್ಷ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಂತಹ ಕಾರ್ಯದಿಂದ ಅತ್ಯುತ್ತಮ ಘಟಕ ಎಂಬ ಹೆಸರು ಬಂದಿದೆ. ಇದಕ್ಕೆ ಇಡೀ ಜೇಸಿಐ ಬಳಗದ ಸಹಕಾರವೇ ಕಾರಣ. ಒಗ್ಗೂಡಿಸುವ ಮನೋಭಾವ, ಸಾದಿಸುವ ಛಲ, ತಾಳ್ಮೆ ಇದ್ದರೆ ಗೆಲುವು ಸಾದ್ಯ ಎಂಬುದನ್ನು ಬೆಳ್ತಂಗಡಿ ಜೇಸಿಐ ಘಟಕ ತೋರಿಸಿದೆ ಎಂದರು.

ಇದೇ ಸಂದರ್ಭದಲ್ಲಿ ಬೆಳ್ತಂಗಡಿ ಶ್ರಿ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘಕ್ಕೆ ಸೇವಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಪ್ತಾಹ ಪ್ರಯುಕ್ತ ನಡೆಸಿದ ವಿವಿದ ಸ್ಪರ್ದಾ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮ ಪ್ರಾಯೋಜಕರಿಗೆ, ಶ್ರಮಿಸಿದ ಜೇಸಿಐನ ಎಲ್ಲರನ್ನು ಗೌರವಿಸಲಾಯಿತು. ಮುಳಿಯ ಸಮೂಹ ಸಂಸ್ಥೆನ್ನು ಗೌರವಿಸಲಾಯಿತು. ಉಜಿರೆ ಎಸ್ ಡಿ ಎಂ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್ , ಬೆಳ್ತಂಗಡಿ ಶ್ರಿ ಗುರುನಾರಾಯಣ ಸ್ವಾಮಿ ಸೇವಾಸಂಘದ ಅದ್ಯಕ್ಷ ಜಯವಿಕ್ರಮ ಕಲ್ಲಾಪು, ಜೇಸಿಐ ಪೂರ್ವ ವಲಯಾದ್ಯಕ್ಷ ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನಾದ ಅಧ್ಯಕ್ಷ ಸಂಪತ್ ಸುವರ್ಣ, ಜೇಸಿಐ ನಿಕಟ ಪೂರ್ವಾದ್ಯಕ್ಷ ಶಂಕರ್ ರಾವ್, ಕಾರ್ಯದರ್ಶಿ ಅನುದೀಪ್ ಜೈನ್, ಸಪ್ತಾಹ ಸಂಯೋಜಕಿ ಹೇಮಾವತಿ ಕೆ, ಜೇಸಿ ಸಂಯೋಜಕಿ ಶ್ರುತಿ ರಂಜಿತ್, ಕೋಶಾದಿಕಾರಿ ಮಮಿತ ಸುದೀರ್, ಜೂನಿಯರ್ ಜೇಸಿ ಅದ್ಯಕ್ಷ ಸಮನ್ವಿತ್ ಕುಮಾರ್, ಸಪ್ತಾಹದ ಸಹ ಸಂಯೋಜಕ ರಕ್ಷಿತ್ ಅಂಡಿಂಜೆ, ಮಾಜಿ ಅದ್ಯಕ್ಷ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಪೂರ್ವಾಧ್ಯಕ್ಷ ಸಂತೋಷ್ ಪಿ. ಕೋಟ್ಯಾನ್ ವೇದಿಕೆಗೆ ಆಹ್ವಾನಿಸಿದರು . ರಂಜಿತ್ ಹೆಚ್ ಡಿ ಸ್ವಾಗತಿಸಿದರು. ಅಮೃತಾ ಎಸ್. ಕೋಟ್ಯಾನ್ ಜೇಸಿ ವಾಣಿ ವಾಚಿದರು. ಜೇಸಿ ಪದಾಧಿಕಾರಿಗಳು, ಪೂರ್ವ ಅಧ್ಯಕ್ಷರುಗಳು ಸಹಕರಿಸಿದರು. ಬಳಿಕ ನಾಟಕ ಪ್ರದರ್ಶನ ಗೊಂಡಿತು.

p>

LEAVE A REPLY

Please enter your comment!
Please enter your name here