p>
ಮಡಂತ್ಯಾರ್: ಹರಿದಾಸಾಶ್ರಮ ಟ್ರಸ್ಟ್ ಪಾರೆಂಕಿ ವತಿಯಿಂದ ನಡೆಯುವ ನಾದತರಂಗ ಕಾರ್ಯಕ್ರಮದ ಅಂಗವಾಗಿ ಡಿ. 22 ರಂದು ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನೀ ಸಭಾಂಗಣದಲ್ಲಿ ಬೆಳಗ್ಗೆ 10.30 ಕ್ಕೆ ರಾಷ್ಟ್ರಿಯ ಮಟ್ಟದ ಕಲಾವಿದೆ ವಿಧುಷಿ ವೈ. ಜಿ. ಶ್ರೀಲತಾ ಬೆಂಗಳೂರು ಇವರಿಂದ ವೀಣಾವಾದನ ಕಾರ್ಯಕ್ರಮ ನಡೆಯಲಿದೆ. ಸಹ ಕಲಾವಿದರಾಗಿ ಮೃದಂಗ ಪವನ್, ತಬಲಾ ಕಾರ್ತಿಕ್ ಭಟ್, ಕಂಜಿರಾ ಮಾಸ್ಟರ್ ವರ್ಚಸ್, ಘಟಂ ಮಾಸ್ಟರ್ ತಮನ್ ಭಾವಗವಹಿಸಲಿದ್ದಾರೆ.
ಸಂಗೀತ ಆಸಕ್ತರು ಹಾಗೂ ಕಲಾಭಿಮಾನಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಟ್ರಸ್ಟ್ ನ ಕಾರ್ಯಧ್ಯಕ್ಷರಾದ ಪೇಜಾವರ ಟಿ. ವಿ. ಶ್ರೀಧರ ರಾವ್ ತಿಳಿಸಿದ್ದಾರೆ.
p>