ಕೊಕ್ರಾಡಿ: ಶಾಲಿಪುರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ. 7 ರಂದು ಷಷ್ಠಿ ಮಹೋತ್ಸವವು ನಡೆಯಿತು. ಡಿ. 5 ರಂದು 12 ಕಾಯಿ ಶ್ರೀ ಗಣಪತಿ ಹೋಮ, ಗಣಪತಿ ದೇವರಿಗೆ ಪಂಚಾಮೃತ ಅಭಿಷೇಕ, ಅಪೂಪ ಸೇವೆ, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ಈ ರಂಗಪೂಜೆ. ಡಿ. 6 ರಂದು ಶ್ರೀ ದೇವರಿಗೆ ಪಂಚಾಮೃತ, ಶ್ರೀ ರುದ್ರಾಭಿಷೇಕ, 25 ಕಲಶ ಪ್ರತಿಷ್ಠೆ, ಬೆಳಿಗ್ಗೆ 9 ರಿಂದ ನಾಗಬನದಲ್ಲಿ ಆಶ್ಲೇಷಾಬಲಿ ಸೇವೆ, ಆದಿವಾಸ ಹೋಮ, ಕಲಶಾಭಿಷೇಕ, ಅನ್ನಸಂತರ್ಪಣೆ, ಸಂಜೆ ಹೂವಿನ ಪೂಜೆ, ರಂಗಪೂಜೆ.
ಡಿ.7 ರಂದು ಪಂಚಾಮೃತ, ಸೀಯಾಳ ಅಭಿಷೇಕ, ಶ್ರೀ ರುದ್ರಾಭಿಷೇಕ, ಸಹಸ್ರ ಪುಷ್ಪಾರ್ಚನೆ,ಬೆಳಿಗ್ಗೆ ಶ್ರೀ ಶಂಕರ ಪ್ರತಿಷ್ಠಾನ ಪುರುಷ ಭಜನಾ ಮಂಡಳಿ ಕಾರ್ಕಳ ಇವರಿಂದ ಭಜನೆ, ಮಹಾಪೂಜೆ, ಉತ್ಸವ ಬಲಿ, ಪಲ್ಲಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಸಂಜೆ ಹೂವಿನ ಪೂಜೆ, ಮಹಾಗಣಪತಿ ದೇವರಿಗೆ ರಂಗಪೂಜೆ, ಮಹಾರಂಗ ಪೂಜೆ, ಉತ್ಸವ ಬಲಿ, ವಸಂತ ಕಟ್ಟೆಯಲ್ಲಿ ಪೂಜೆ, ಮಂತ್ರಾಕ್ಷತೆ ನಡೆಯಿತು. ಧರ್ಮದರ್ಶಿಗಳು, ಅರ್ಚಕ ವೃಂದ, ಅನುವಂಶಿಕ ಆಡಳಿತ ಮೊಕ್ತೇಸರರು, ಊರ ಪರಊರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಗಂಧ ಪ್ರಸಾದ ಸ್ವೀಕರಿಸಿದರು.