ಶಿಬರಾಜೆ: ಜೆ ಸಿ ಐ ಕೊಕ್ಕಡ ಕಪಿಲಾ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದಲ್ಲಿ ಮಹಾಪೂಜೆಯ ಸಮಯದಲ್ಲಿ ಆಮಂತ್ರಣ ಪತ್ರಿಕೆಯನ್ನು ದೇವರಿಗೆ ಇಟ್ಟು ಪ್ರಾರ್ಥನೆ ಮಾಡಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ 2024 ನೇ ಸಾಲಿನ ಜೆ ಸಿ ಐ ಕಪಿಲಾ ಘಟಕದ ಅಧ್ಯಕ್ಷರಾದ ಸಂತೋಷ್ ಜೈನ್,ಕಾರ್ಯದರ್ಶಿ ಅಕ್ಷತ್ ರೈ, ಶ್ರೀಧರ್ ರಾವ್, ಜೆ ಸಿ ಐ ನೂತನ ಅಧ್ಯಕ್ಷೆ ಡಾ.ಶೋಭಾ ಪಿ, ಜೋಸೆಫ್ ಪಿರೇರ, ಜಿತೇಶ್ ಪಿರೇರ, ಪ್ರಿಯಾ ಜೆ ಆಮೀನ್, ಶ್ರವಣ್, ಆದ್ಯ, ದಕ್ಷ, ಉಪಸ್ಥಿತರಿದ್ದರು.
ಡಿ 22.ರಂದು ಪದಗ್ರಹಣ ಸಮಾರಂಭ: ಜೆಸಿಐ ಕಪಿಲಾ ಘಟಕದ 2025ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಎಸ್ ಡಿ ಎಂ ಐ ಟಿ ಇದರ ಮ್ಯಾಥಮೇಟಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ವಿದ್ಯಾ ಕೆ, ವಲಯ ಉಪಾಧ್ಯಕ್ಷರಾದ ಸುಹಾಸ್ ಎ ಪಿ ಎಸ್ ಮರಿಕೆ ಆಗಮಿಸಲಿದ್ದು ಸಮಾರಂಭದಲ್ಲಿ ಸಾಧಕರಾದ ನಿವೃತ ಕೃಷಿ ಅಧಿಕಾರಿ ಚಿದಾನಂದ ಹೂಗಾರ್, ಸಮಾಜ ಸೇವಕರಾದ ರೈಮಂಡ್ ಗಲ್ವಂವೋ ಕೊಕ್ಕಡ, ಉರಗ ತಜ್ಞರಾದ ರಜನಿಕಾಂತ್ ಕೊಕ್ಕಡ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಜೆ ಸಿ ಐ ಮಾಧ್ಯಮ ಸಂಯೋಜಕರಾದ ಅಕ್ಷತ್ ರೈ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.