ಬೆಳ್ತಂಗಡಿ: ಮಂಗಳೂರು ವಿದ್ಯುಚ್ಚಕ್ತಿ ಸರಬರಾಜು ಕಂಪನಿ ಮಂಗಳೂರು ಇದರ ವತಿಯಿಂದ ಬೆಳ್ತಂಗಡಿ ಮತ್ತು ಉಜಿರೆ ಉಪ ವಿಭಾಗ ಕಚೇರಿಯ ವಿದ್ಯುತ್ ಬಳಕೆದಾರರ ಜನ ಸಂಪರ್ಕ ಸಭೆ ಡಿ. 7ರಂದು ಬೆಳ್ತಂಗಡಿ ಉಪ ವಿಭಾಗ ಕಚೇರಿಯಲ್ಲಿ ನಡೆಯಿತು.
ಮೆಸ್ಕಾಂ ಮಂಗಳೂರು ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ತಾಲೂಕಿನ ಲೋಡ್ ಸಮಸ್ಯೆಗೆ ಎಲ್ಲಾ ಉಪ ವಿಭಾಗದಲ್ಲಿ ಹೆಚ್ಚುವರಿ ವಿದ್ಯುತ್ ಒದಗಿಸಿ ಅಪ್ ಗ್ರೇಡ್ ಮಾಡಿಸಲಾಗಿದೆ. ನಿನ್ನಿಕಲ್ ನಲ್ಲಿ ಸಬ್ ಸ್ಟೇಷನ್ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭ ಆಗಲಿದೆ. ಬೆಳಾಲಿನಲ್ಲಿ ಸಬ್ ಸ್ಟೇಷನ್ ಆರಂಭಕ್ಕೆ ನಿಗದಿ ಪಡಿಸಿದ ಜಾಗದಲ್ಲಿ ಅರಣ್ಯ ಇಲಾಖೆಯ ಜಾಗ ಎಂದು ಆಕ್ಷೇಪ ಇದ್ದು, ಬೇರೆ ಜಾಗ ಇದ್ದಲ್ಲಿ ತಹಸೀಲ್ದಾರ್ ರನ್ನು ಸಂಪರ್ಕ ಮಾಡಿ ಜಾಗ ಮಂಜೂರಾದರೆ ಅಲ್ಲಿ 110 ವಿ ಕೆ ಸಬ್ ಸ್ಟೇಷನ್ ಪ್ರಾರಂಭ ಮಾಡಲಾಗುವುದು.
ಸರಕಾರದ ಯೋಜನೆ ಮನೆಯ ಮೇಲ್ಚಾವಣಿಯಲ್ಲಿ ಸೋಲಾರ್ ಸಿಸ್ಟಮ್ ಅಳವಡಿಸಿ ಸೌರ ಶಕ್ತಿಯಿಂದ ವಿದ್ಯುತ್ ಉಪಯೋಗ ಮಾಡಿದರೆ ಸರ್ಕಾರದಿಂದ ಗರಿಷ್ಠ 78 ಸಾವಿರ ಸಬ್ಸಿಡಿ ಪಡೆಯಬಹುದು. ಇದರಿಂದ ಹೆಚ್ಚುವರಿ ವಿದ್ಯುತ್ ಮೆಸ್ಕಾಂ ಖರೀದಿ ಮಾಡುತ್ತದೆ ಎಂದರು. ಮೆಸ್ಕಾಂ ಬಳಕೆದಾರರಿಂದ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದರು.
ಬಂಟ್ವಾಳ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವೆಂಕಟೇಶ್ ಡಿ. ಹೆಚ್, ಉಜಿರೆ ಉಪ ವಿಭಾಗದ ಸಹಾಯಕ ಕಾರ್ಯನಿವಾಹಕ ಇಂಜಿನಿಯರ್ ಪ್ರವೀಣ್ ಬಿ. ಎನ್., ಬಂಟ್ವಾಳ ವಿಭಾಗದ ಲೆಕ್ಕಾಧಿಕಾರಿ ಚಂದ್ರಶೇಖರ್, ತಾಲೂಕಿನ ವಿವಿಧ ಉಪ ವಿಭಾಗದ ಸಹಾಯಕ ಇಂಜಿನಿಯರ್, ಸಿಬ್ಬಂದಿಗಳು, ವಿದ್ಯುತ್ ಬಳಕೆದಾರರು ಹಾಜರಿದ್ದರು. ವಿದ್ಯುತ್ ಗ್ರಾಹಕರು ಸಮಸ್ಯೆಯ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಇಂಜಿನಿಯರ್ ನಂದಿನಿ ಎಂ. ಸ್ವಾಗತಿಸಿ, ಬೆಳ್ತಂಗಡಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜೆನಿಯರ್ ಕ್ಲೇಮೆಂಟ್ ಬೆಂಜಮಿನ್ ಬ್ರಾಗ್ಸ್ ವಂದಿಸಿದರು.