ಉಜಿರೆ: ಶ್ರೀ ಧ. ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ನ. 25 ರಂದು ಎಸ್. ಡಿ. ಎಂ. ಎಜುಕೇಶನಲ್ ಸೊಸೈಟಿಯ ಅಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ. ಎನ್. ಜನಾರ್ದನ್ ಕಾರ್ಯಕ್ರಮ ಉದ್ಘಾಟಿಸಿ, ಹೆಗ್ಗಡೆ ಜೀವನ ಶೈಲಿ, ಭಕ್ತರ ಮೇಲಿರುವ ಪ್ರೀತಿ, ಕಾಳಜಿ, ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಗ್ರಾಮಾಭಿವೃಧ್ಧಿ ಯೋಜನೆಯ ಪರಿಕಲ್ಪನೆ, ಸ್ವಚ್ಛತೆಗೆ ಕೊಡುವ ಮಹತ್ವ, ಸರಳತೆ ಕುರಿತು ತಿಳಿಸಿದರು.
ಮುಖ್ಯೋಪಾಧ್ಯಾಯ ಸುರೇಶ್. ಕೆ. ಹೆಗ್ಗಡೆಯವರ ಆದರ್ಶಪೂರ್ಣ ವ್ಯಕ್ತಿತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿ ಸುಮಂತ್ ಹೆಗ್ಗಡೆಯವರ ಅಭಿವೃದ್ಧಿ ನಡೆಯ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳು ಹೆಗ್ಗಡೆಯವರ ವ್ಯಕ್ತಿತ್ವದ ಬಗ್ಗೆ ಭಿತ್ತಿಪತ್ರಿಕೆ ರಚಿಸಿ ಪ್ರದರ್ಶಿಸಿದರು. ಅವರ ಜೀವನದ ವಿವಿಧ ಪ್ರಗತಿಯ ತುಣುಕುಗಳ ವೀಡಿಯೋ ಪ್ರದರ್ಶನ ಮಾಡಲಾಯಿತು. ದೂರದರ್ಶಿ ಯೋಜನೆಗಳ ಬಗ್ಗೆ ತಿಳಿಸವ ‘ವಿಶನ್ ಟು ಮಿಶನ್’ ಚಾರ್ಟ್ ಅನಾವರಣಗೊಳಿಸಲಾಯಿತು.
10ನೇ ತರಗತಿ ವಿದ್ಯಾರ್ಥಿನಿಯರು ಹುಟ್ಟುಹಬ್ಬ ಕುರಿತು ಹಾಡು ಹಾಡಿದರು. ವಿದ್ಯಾರ್ಥಿಗಳಿಗೆ ಹೆಗ್ಗಡೆಯವರ ಭಾವಚಿತ್ರ ರಚನೆ, ಸ್ವರಚಿತ ಕವನ, ಭಾಷಣ ಸ್ಪರ್ಧೆ ಏರ್ಪಡಿಸಲಾಯಿತು. 10ನೇ ತರಗತಿ ವಿದ್ಯಾರ್ಥಿ ಜೀವಿತ್ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶೌರ್ಯ ಅತಿಥಿ ಪರಿಚಯ ನೀಡಿದರು. ಸಮೀಕ್ಷಾ ಸ್ವಾಗತಿಸಿದರು. ತುಳಸಿ ಧನ್ಯವಾದ ಸಮರ್ಪಿಸಿದರು. ಧನ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.