ಬೆಳ್ತಂಗಡಿ: ನ. 26 ರಂದು ಕಪುಚಿನ್ ಕೃಷಿಕ್ ಸೇವಾ ಕೇಂದ್ರದ ಅಂಗ ಸಂಸ್ಥೆಯಾದ ದಯಾ ವಿಶೇಷ ಶಾಲೆಯಲ್ಲಿ ಸಂವಿಧಾನ ದಿನ ಆಚರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಹಾಗೂ ನಿರ್ದೇಶಕ ವಂದನೀಯ ಫಾದರ್ ನಿನೋದ್ ಮಸ್ಕರೇನ್ಹಸ್, ಸಹ ನಿರ್ದೇಶಕ ವಂದನೀಯ ಫಾದರ್ ರೋಹನ್ ಲೋಬೋ, ಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಶಾಲೆಯ ಎಲ್ಲಾ ವಿಶೇಷ ಚೇತನ ಮಕ್ಕಳು ಭಾಗವಹಿಸಿದ್ದರು.
ವಂದನೀಯ ಫಾದರ್ ನಿನೋದ್ ಮಸ್ಕರೇನ್ಹಸ್ ಮಾತನಾಡಿ 1949 ನ. 26 ರಂದು ಭಾರತದ ಸಂವಿಧಾನ ಅಂಗೀಕಾರವಾಯಿತು. 1950 ರ ಜ. 26 ರಂದು ಅಸ್ತಿತ್ವಕ್ಕೆ ಬಂದಿದ್ದನ್ನು ನಾವು ಕಾಣುತ್ತೇವೆ. ನ. 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯೆವಸ್ಥೆಯಲ್ಲಿ ಮಹತ್ವದ ದಿನವಾಗಿದೆ. ನಾವು 1949ರ ನ. 26 ರ ದಿನವನ್ನು ಭಾರತದ ಸಂವಿಧಾನ ದಿನವನ್ನಾಗಿ ಆಚರಣೆ ಮಾಡುತ್ತೇವೆ.
ನಮ್ಮ ಸಂವಿಧಾನ ದೇಶದ ಜನರನ್ನು ಶಸಕ್ತಗೊಳಿಸಿದೆ, ಸರ್ವರಿಗೂ ಸಮಾನತೆಯೊದಗಿಸಿದೆ. ಸಂವಿಧಾನವನ್ನು ರಚಿಸುವ ಸಂದರ್ಭದಲ್ಲಿ ಮಹಿಳೆಯರು ಕೂಡ ಸಂವಿಧಾನ ರಚನೆ ಮಾಡುವಲ್ಲಿ ಪಾಲ್ಗೊಂಡಿದ್ದರು. ಅಲ್ಲಿ ಸಮಾನತೆ ಹಕ್ಕನ್ನು ತೋರಿಸುತ್ತದೆ. ಸಂವಿಧಾನವು ಮೂಲಭೂತ ಹಕ್ಕಗಳು, ಕರ್ತವ್ಯವನ್ನು ನಮಗೆ ನೀಡಿದೆ.
ಹಿಂದುಳಿದ ವರ್ಗದ ಜನರು, ಶೋಷಿತ ಮಹಿಳೆಯರು ಹಾಗೂ ಮಕ್ಕಳು ಸಂವಿಧಾನದಿಂದ ತಮ್ಮ ಹಕ್ಕು ಪಡೆಯುವಲ್ಲಿ ಯಶಸ್ವಿಯಾಗಬೇಕು. ಸಂವಿಧಾನವನ್ನು ಪಾಲಿಸುವ ನಮ್ಮೆಲ್ಲರ ಮನಸ್ಥಿತಿ ಒಳ್ಳೆಯದಾಗಿದ್ದರೆ ಎಲ್ಲವೂ ಒಳ್ಳೆಯದಾಗಿ ನಡೆಯುತ್ತದೆ. ಅಗ ಸಮಾಜದಲ್ಲಿ ಶಿಸ್ತು, ಶಾಂತಿ, ಅಭಿವೃದ್ಧಿ ಸದಾ ಅಗುತ್ತದೆ.
ಭಾರತಕ್ಕೆ ಸಂವಿಧಾನವೇ ದೊಡ್ಡ ಬಲ. ಭಾರತ ದೇಶದಲ್ಲಿ ಶ್ರೇಷ್ಠವಾದ ಸಂವಿಧಾನವಿದೆ ಆದರೆ ಅದನ್ನು ಪಾಲಿಸುವವರು ಹೇಗೆ ಅದನ್ನು ಜಾರಿಗೊಳಿಸುವವರು, ಹೇಗೆ ಅದರ ಮೇಲೆ ದೇಶದ ಒಳಿತು ಹೊಂದಿಕೊಂಡಿದೆ, ನಾವೆಲ್ಲರೂ ಸಂವಿಧಾನವನ್ನು ಅರ್ಥಮಾಡಿಕೊಂಡು ನಾವೆಲ್ಲಾ ಒಳ್ಳೆಯ ಜನರಾಗೊಣ ಹಾಗೆ ಸಮಾಜಕ್ಕೆ ಒಳಿತನ್ನು ಮಾಡೋಣ ಎಂದು ವಂದನೀಯ ಫಾದರ್ ನಿನೋದ್ ಮಸ್ಕರೇನ್ಹಸ್ ಕರೆ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯ ಶಿಕ್ಷಕಿ ದಿವ್ಯ. ಟಿ. ವಿ., ವಂದನಾರ್ಪಣೆಯನ್ನು, ಸಹ ಶಿಕ್ಷಕ ರಮೇಶ್. ಹೆಚ್. ಕೆ ನೆರವೇರಿಸಿದರು.