ಕುಕ್ಕೇಡಿ: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಮಿತಿ ಕುಂಡದಬೆಟ್ಟು ಕುಕ್ಕೇಡಿ ನಿಟ್ಟಡೆ, ಯುವಬಿಲ್ಲವ ವೇದಿಕೆ, ಬಿಲ್ಲವ ಮಹಿಳಾವೇದಿಕೆ, ಯುವವಾಹಿನಿ ಸಂಚಲನಾ ಸಮಿತಿ ಕುಂಡದಬೆಟ್ಟು ಕುಕ್ಕೇಡಿ ನಿಟ್ಟಡೆ ಇವುಗಳ ಜಂಟಿ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಗುರುಜಯಂತಿ ಕಾರ್ಯಕ್ರಮ ನ.17 ರಂದು ಸಂಘದ ನಿವೇಶನ ಗೋಳಿಯಂಗಡಿಯಲ್ಲಿ ಜರಗಿತು. ಯೋಗೀಶ್ ಶಾಂತಿ ಸೊರಗೆದಡಿ ಇವರ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ದೇವರ ಪೂಜೆ, ಗುರುಪೂಜೆ ನಡೆಯಿತು.
ಮುಖ್ಯ ಅತಿಥಿಗಳಾಗಿ ತಾಲೂಕು ಯುವಬಿಲ್ಲವ ವೇದಿಕೆಯ ಅಧ್ಯಕ್ಷ ಎಂ.ಕೆ. ಪ್ರಸಾದ್ ಭಾಗವಹಿಸಿ ನಾರಾಯಣ ಗುರುಗಳ ತತ್ವ ಸಂದೇಶ, ಸಾಮಾಜಿಕ ಬದಲಾವಣೆಯ ಕುರಿತು ಧಾರ್ಮಿಕ ಭಾಷಣ ಮಾಡಿದರು. ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರುಗಳಾದ ರವೀಂದ್ರ ಅಮೀನ್, ಗುರುರಾಜ್ ಗುರಿಪಳ್ಳ, ವಿಶ್ವನಾಥ ಪೂಜಾರಿ ದಡ್ಡಲ್ ಪಲ್ಕೆ, ಅರ್ಚಕ ಯೋಗೀಶ್ ಶಾಂತಿ, ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷ ಶುಭಕರ ಪೂಜಾರಿ ಸಾವ್ಯ, ವೇಣೂರು ವಲಯ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಸಂತೋಷ್ ಮಂಜಲೊಕ್ಕು, ನವೀನ್ ಅಮೈ, ಹರಿಣಾಕ್ಷಿ ಪಾಲ್ಡ್ರೋಡಿ, ಸಂತೋಷ್ ಹಚ್ಚೇವು ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 80% ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರಿ ಸಂಘದ ನೂತನ ನಿರ್ದೇಶಕರಾಗಿ ಆಯ್ಕೆಯಾದ ಗುಣವತಿ ದಯಾನಂದ ಹಾಗೂ ಮೂರ್ತೆದಾರರ ಸೇವಾ ಸಹಕಾರಿ ಸಂಘ ವೇಣೂರು ನೂತನ ನಿರ್ದೇಶಕರಾಗಿ ಆಯ್ಕೆಯಾದ ಸಂತೋಷ್ ಮಂಜಲೋಕ್ಕು ಇವರನ್ನು ಸನ್ಮಾನಿಸಲಾಯಿತು.
ಅನ್ನಸಂತರ್ಪಣೆಗೆ ಸಂಪೂರ್ಣ ಸಹಕಾರ ನೀಡಿದ ರಾಧಾಕೃಷ್ಣ ಕೊಡಿಕೊಡಂಗೆ ಯವರ ಪತ್ನಿ ಶಿಲ್ಪಾ ಹಾಗೂ ವಿದ್ಯಾರ್ಥಿವೇತನಕ್ಕೆ ಧನಸಹಾಯದ ಕೊಡುಗೆ ನೀಡಿದ ಆನಂದ ಪೂಜಾರಿ ಅಮೈ ಇವರ ಮನೆಯವರ ಪರವಾಗಿ ಮಗಳಾದ ರೇಖಾರನ್ನು ಗೌರವಿಸಲಾಯಿತು. ಶೃತಿ ಹಾಗೂ ದಿಶಾ ರವರ ಪ್ರಾರ್ಥನೆಯೊಂದಿಗೆ ಆರಂಭವಾದ ಸಭಾಕಾರ್ಯಕ್ರಮ ನಿತೀಶ್ ಎಚ್. ಸ್ವಾಗತಿಸಿದರು, ರಾಜೇಂದ್ರ ಕೆ.ವರದಿ ವಾಚಿಸಿದರು. ಯುವವಾಹಿನಿ ವೇಣೂರು ಘಟಕದ ಮಾಜಿ ಅಧ್ಯಕ್ಷರು, ಉಪನ್ಯಾಸಕ ಅರುಣ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಪಡ್ಯೋಡಿ ವಂದಿಸಿದರು.