ಕೊಕ್ಕಡ: ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರಿನ ಓಣಿತ್ತಾರು ಟ್ರೇಡರ್ಸ್ ಬಾಳೆಕಾಯಿ ಮತ್ತು ಅಡಿಕೆ ವ್ಯಾಪಾರಿಯವರ ಅಂಗಡಿಯಿಂದ ರೂ. 2 ಲಕ್ಷ ಹಣ ಲಪಟಾಯಿಸಿದ ಘಟನೆ ನ.15ರಂದು ನಡೆದಿದೆ.
ಮಧ್ಯಾಹ್ನದ ಹೊತ್ತಲ್ಲಿ ಅಂಗಡಿಗೆ ಬಾಳೆಹಣ್ಣು ಖರೀದಿ ನೆಪದಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವಂಚಕರು ಮಾಲಕ ಇಸುಬುರವರು ಒಳಗಿನಿಂದ ಬಾಳೆಗೊನೆ ತರಲು ತೆರಳಿದ ಸಂದರ್ಭದಲ್ಲಿ ಟೇಬಲ್ ನಲ್ಲಿದ್ದ ಹಣವನ್ನು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಕ್ಕಡ ಪರಿಸರದಲ್ಲಿ ಹಾಡಹಾಗಲೇ ಕಳ್ಳತನಗಳು ನಡೆಯುತ್ತಲೇ ಇದ್ದು ಇದರಿಂದ ಕೊಕ್ಕಡ ಪರಿಸರದ ಜನರು ಜಾಗೃತೆ ವಹಿಸುವಂತೆ ತಿಳಿಸಲಾಗಿದೆ. ಯಾರಿಗಾದರೂ ಇದರ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ
9845705315 ನಂಬರನ್ನು ಸಂಪರ್ಕಿಸಲು ತಿಳಿಸಲಾಗಿದೆ.
p>