ಬೆಳ್ತಂಗಡಿ: ಉಜಿರೆ – ಧರ್ಮಸ್ಥಳ – ಪೆರಿಯಶಾಂತಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸ್ಪರ್ ರಸ್ತೆ ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಿಂದ ಈ ಕುರಿತು ಎರಡನೇ ಅಧಿಸೂಚನೆ ಪ್ರಕಟಗೊಂಡಿದ್ದು, 103 ಜಮೀನುಗಳಿಗೆ ಸಂಬಂಧಿಸಿದ ಸರ್ವೇ ನಂಬರ್, ಜಮೀನುಗಳ ವಿಸ್ತೀರ್ಣ ಪ್ರಕಟಿಸಲಾಗಿದೆ.
ಮಂಗಳೂರು – ತುಮಕೂರು ನಡುವಿನ ರಾಷ್ಟ್ರೀಯ ಹೆದ್ದಾರಿ 73ರಿಂದ ಉಜಿರೆಯಲ್ಲಿ ಬಲಕ್ಕೆ ಧರ್ಮಸ್ಥಳ ಮಾರ್ಗವಾಗಿ ಪೆರಿಯಶಾಂತಿಗೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ನ್ನು ಸಂಪರ್ಕಿಸುವ 28.49 ಕಿಮೀ. ಉದ್ದದ ಸ್ಪರ್ ರಸ್ತೆ ಇದಾಗಿದೆ. ಈಗ ಸಚಿವಾಲಯವು ಪ್ರಕಟಿಸಿರುವ ಭೂಸ್ವಾಧೀನ ಅಧಿಸೂಚನೆಯು ಎರಡನೆಯ (3ಎ) ಹಂತದ್ದಾಗಿದ್ದು, ಭೂಮಾಲೀಕರ ಅಹವಾಲು ಪರಿಶೀಲನೆಯ ಬಳಿಕ ಅಂತಿಮ ಅಧಿಸೂಚನೆಯನ್ನು (3ಡಿ) ಸಚಿವಾಲಯವು ಪ್ರಕಟಿಸಲಿದೆ.
ಏನಿದೆ ಅಧಿಸೂಚನೆಯಲ್ಲಿ?: ರಸ್ತೆ ನಿರ್ಮಾಣ – ಅಗಲೀಕರಣ ಯೋಜನೆಗೆ ಸಂಬಂಧಿಸಿ ಕಟ್ಟಡ ಸಹಿತ ಹಾಗೂ ಕಟ್ಟಡ ರಹಿತ ಸರಕಾರಿ ಮತ್ತು ಖಾಸಗಿ ಭೂಮಿಗಳ ಸ್ವಾಧೀನಕ್ಕಾಗಿ ಅಕ್ಟೋಬರ್ 22ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956ರ 48)ರ ಪ್ರಕಾರ ನಿಯಮ 3ಎ ಉಪನಿಯಮ(1)ರಲ್ಲಿ ದತ್ತವಾದ ಅಧಿಕಾರವನ್ನು ಚಲಾಯಿಸಿ ಜಮೀನುಗಳ ಭೂಸ್ವಾಧೀನಕ್ಕೆ ಸೂಚನೆ ನೀಡಲಾಗಿದೆ. ಜಮೀನುಗಳ ಮಾಲೀಕರು ಅಥವಾ ಸಂಬಂಧಪಟ್ಟವರು ಪ್ರಕಟಣೆಯ 21 ದಿನಗಳೊಳಗೆ ಕಾಯ್ದೆಯ ಕಲಂ 3ಸಿ(1)ರಂತೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶವಿದೆ.
ವಿಶೇಷ ಭೂಸ್ವಾಧೀನಾಧಿಕಾರಿ ಮತ್ತು ಸಕ್ಷಮ ಪ್ರಾಧಿಕಾರಿ, ರಾಷ್ಟ್ರೀಯ ಹೆದ್ದಾರಿಗಳು -73 ಮತ್ತು 275, ವಿಠಲ್ ಆರ್ಕೇಡ್ ಒಂದನೇ ಮಹಡಿ, ಕೊಟ್ಟಾರ ಚೌಕಿ, ಅಶೋಕ ನಗರ, ಮಂಗಳೂರು – 575006 ಇಲ್ಲಿಗೆ ಲಿಖಿತವಾಗಿ ಸಕಾರಣಗಳೊಂದಿಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸಬಹುದು. ಸಕ್ಷಮ ಪ್ರಾಧಿಕಾರಿಗಳು ಆಕ್ಷೇಪಣೆ ಸಲ್ಲಿಸಿದವರನ್ನು ಅಥವಾ ಅವರ ವಕೀಲರ ಮೂಲಕ ವಿಚಾರಣೆ ನಡೆಸಿ ಪರಿಶೀಲನೆ ನಡೆಸುತ್ತಾರೆ. ಕಾಯ್ದೆಯ ಕಲಂ 3(ಸಿ)(2)ರ ಅನ್ವಯ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಸಕ್ಷಮ ಪ್ರಾಧಿಕಾರಿ ವಿಚಾರಣೆ ನಡೆಸಿ ಹೊರಡಿಸುವ ಆದೇಶವು ಅಂತಿಮವಾಗಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮಾರಾಟ ಮಾಡುವಂತಿಲ್ಲ: ಹೆದ್ದಾರಿ ಸಚಿವಾಲಯವು ಪ್ರಕಟಿಸಿರುವ ಅಧಿಸೂಚನೆಯಲ್ಲಿ ಒಳಗೊಂಡಿರುವ ಜಮೀನುಗಳನ್ನು ಮಾರುವಂತಿಲ್ಲ ಅಥವಾ ಲೀಸ್‌ಗೆ ನೀಡುವಂತಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮೊದಲ ಅಧಿಸೂಚನೆ: ಈ ರಸ್ತೆಯ ಕುರಿತು ಮಾರ್ಚ್ 12ರಂದು ಮೊದಲ ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಸುಮಾರು 14 ಹೆಕ್ಟೇರ್ (ಸುಮಾರು 35 ಎಕರೆ) ಜಾಗವನ್ನು ಸೇರ್ಪಡೆಗೊಳಿಸಲಾಗಿತ್ತು. ಆದರೆ, ಈಗ ಪ್ರಕಟಗೊಂಡಿರುವ ಅಧಿಸೂಚನೆಯಲ್ಲಿ 11.92 ಎಕರೆಯನ್ನು ಮಾತ್ರ ಕಾಣಿಸಲಾಗಿದೆ. ಅಂತಿಮ ಅಧಿಸೂಚನೆ (3ಡಿ) ಪ್ರಕಟವಾಗುವ ಹೊತ್ತಿಗೆ ಇನ್ನಷ್ಟು ಜಮೀನು ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಈಗ ಪ್ರಕಟಗೊಂಡಿರುವ ಅಧಿಸೂಚನೆಯ ಪ್ರಕಾರ ಒಳಗೊಂಡಿರುವ ಜಮೀನುಗಳ ವಿವರ ಗ್ರಾಮವಾರು ಈ ಕೆಳಗೆ ನೀಡಲಾಗಿದೆ.
ಉಜಿರೆ ಗ್ರಾಮ: ಸರ್ವೇ ನಂಬರ್ 250/3ಬಿ1ಎ1, ಸಾಮಾನ್ಯ ಜಮೀನು, 323.76 ಚ.ಮೀ. * 251/1, ಸರಕಾರಿ ಜಮೀನು, 202.35 ಚ.ಮೀ. * ೨೫೧/೨, ಖಾಸಗಿ ಜಮೀನು, 10.1175 ಚ.ಮೀ. *251/3, ಖಾಸಗಿ, 10.1175 * 252/8, ಖಾಸಗಿ, 131.5275 * 453/2ಎ1, ಖಾಸಗಿ, 60.705 ಚ.ಮೀ.
ಧರ್ಮಸ್ಥಳ ಗ್ರಾಮ: ಸರ್ವೇ ನಂಬರ್ 156/1ಬಿ1, ಖಾಸಗಿ, 20.235 ಚ.ಮೀ. * 156/4, ಖಾಸಗಿ, 10.1175 ಚ.ಮೀ. * 156/5, ಖಾಸಗಿ, ೧೦.೧೧೭೫ ಚ.ಮೀ. * ೧೫೬/೬, ಖಾಸಗಿ, ೧೦.೧೧೭೫ ಚ.ಮೀ. * ೨೬೫/೧ಎ೧ಎ೧, ಸಾಮಾನ್ಯ (ಸರಕಾರಿ/ಖಾಸಗಿ), ೭೨೦೩.೬೬ ಚ.ಮೀ. * ೨೬೫/೧ಎ೧ಎ೧, ಸಾಮಾನ್ಯ (ಸರಕಾರಿ/ಖಾಸಗಿ), ೮೯೦.೩೪ ಚ.ಮೀ. * ೨೬೬/೨, ಖಾಸಗಿ, ೩೦.೩೫೨ ಚ.ಮೀ. * ೨೬೬/೭, ಖಾಸಗಿ, ೨೦.೨೩೫ ಚ.ಮೀ. * ೨೮೮/೧, ಖಾಸಗಿ, ೧೦೧.೧೭೫ ಚ.ಮೀ. * ೨೮೮/೧, ಖಾಸಗಿ, ೨೭೩.೧೭೨೫ ಚ.ಮೀ. * ೨೯೭/೩ಎ, ಸರಕಾರಿ, ೪೪೧೧.೨೩ ಚ.ಮೀ. * ೨೯೭/೪ಎ೧, ಸಾಮಾನ್ಯ (ಸರಕಾರಿ/ಖಾಸಗಿ), ೧೦೧.೧೭೫ ಚ.ಮೀ. * ೫೪/೧ಎ೧, ಸಾಮಾನ್ಯ (ಸರಕಾರಿ/ಖಾಸಗಿ), ೩೮೦೪.೧೮ ಚ.ಮೀ. * ೫೬/೪ಎ೩, ಖಾಸಗಿ, ೩೯೪.೫೮೨೫ ಚ.ಮೀ. * ೫೬/೬ಬಿ, ಖಾಸಗಿ, ೬೩೭.೪೦೨೫ ಚ.ಮೀ. * ೫೬/೬ಸಿ, ಖಾಸಗಿ, ೬೧೭.೧೬೭೫ ಚ.ಮೀ. * ೬೧/೨, ಸರಕಾರಿ, ೧೨೯೫.೧೪ ಚ.ಮೀ. * ೭೪/೫ಎ೧, ಖಾಸಗಿ, ೧೦.೧೧೭೫ ಚ.ಮೀ. * ೭೪/೫ಎ೨, ಖಾಸಗಿ, ೨೦.೨೩೫ ಚ.ಮೀ. * ೭೪/೫ಬಿ, ಖಾಸಗಿ, ೨೦.೨೩೫ ಚ.ಮೀ. * ೭೪/೫ಸಿ೨, ಖಾಸಗಿ, ೪೦.೪೭ ಚ.ಮೀ. * ೭೪/೫ಸಿ೩, ಖಾಸಗಿ, ೩೦.೩೫೨೫ ಚ.ಮೀ. * ೮೯/೧, ಖಾಸಗಿ, ೯೧.೦೫೭೫ ಚ.ಮೀ. * ೮೯/೧೦, ಖಾಸಗಿ, ೧೬೧.೮೮ ಚ.ಮೀ.
ನಿಡ್ಲೆ ಗ್ರಾಮ: ಸರ್ವೇ ನಂಬರ್ ೧೧೩/೧೦, ಖಾಸಗಿ, ೪೪೫.೧೭ ಚ.ಮೀ. * ೧೧೩/೧೪, ಖಾಸಗಿ, ೧೪೧.೬೪೫ ಚ.ಮೀ. * ೧೧೩/೧೭, ಖಾಸಗಿ, ೫೫೬.೪೬೨೫ ಚ.ಮೀ. * ೧೧೩/೯, ಖಾಸಗಿ, ೧೭೧.೯೯೭೫ ಚ.ಮೀ. * ೧೧೪/೨ಸಿ೧, ಸಾಮಾನ್ಯ (ಸರಕಾರಿ/ಖಾಸಗಿ), ೨೧೨.೪೬೭೫ ಚ.ಮೀ. * ೧೧೪/೨ಸಿ೨, ಖಾಸಗಿ, ೧೨೧.೪೧ ಚ.ಮೀ. * ೧೧೪/೩ಎ೧, ಸಾಮಾನ್ಯ (ಸರಕಾರಿ/ಖಾಸಗಿ), ೪೨೧೮.೯೯೭೫ ಚ.ಮೀ. * ೧೨೨/೪, ಖಾಸಗಿ, ೨೬೩.೦೫೫ ಚ.ಮೀ. * ೧೨೨/೫ಎ೨, ಖಾಸಗಿ, ೭೦.೮೨೨೫ ಚ.ಮೀ. * ೧೨೨/೫ಸಿ೧, ಖಾಸಗಿ, ೨೦.೨೩೫ ಚ.ಮೀ. * ೧೨೨/೫ಸಿ೨, ಖಾಸಗಿ, ೧೮೨.೧೧೫ ಚ.ಮೀ. * ೧೨೨/೯, ಖಾಸಗಿ, ೧೦೧.೧೭೫ ಚ.ಮೀ. * ೧೨೩/೨ಬಿ, ಖಾಸಗಿ, ೪೦.೪೭ ಚ.ಮೀ. * ೧೨೪/೨, ಖಾಸಗಿ, ೧೨೧.೪೧ ಚ.ಮೀ. * ೧೨೮/೧, ಖಾಸಗಿ, ೩೧೩.೬೪೨೫ ಚ.ಮೀ. * ೧೮೭/೧೦, ಖಾಸಗಿ, ೬೮೭.೯೯ ಚ.ಮೀ. * ೧೮೭/೧೨, ಖಾಸಗಿ, ೪೦೪.೭ ಚ.ಮೀ. * ೧೮೭/೧೩, ಖಾಸಗಿ, ೪೪೫.೧೭ ಚ.ಮೀ. * ೧೮೮, ಸಾಮಾನ್ಯ (ಸರಕಾರಿ/ಖಾಸಗಿ), ೨೦.೨೩೫ ಚ.ಮೀ. * ೨೦೯/೧ಬಿ, ಸಾಮಾನ್ಯ (ಸರಕಾರಿ/ಖಾಸಗಿ), ೪೦.೪೭ ಚ.ಮೀ. * ೨೦೯/೧ಸಿ, ಸಾಮಾನ್ಯ (ಸರಕಾರಿ/ಖಾಸಗಿ), ೩೦.೩೫೨೫ ಚ.ಮೀ. * ೨೧೦/೧ಎ, ಖಾಸಗಿ, ೬೫೭.೬೩೭೫ ಚ.ಮೀ. * ೨೧೮/೨ಎ೧, ಸರಕಾರಿ, ೨೩೨೭.೦೨೫ ಚ.ಮೀ. * ೨೩೪/೩, ಖಾಸಗಿ, ೧೨೧೪.೧ ಚ.ಮೀ. * ೨೫೨/೧ಬಿ, ಖಾಸಗಿ, ೭೪೮.೬೯೫ ಚ.ಮೀ. * ೨೭೭/೨ಎ೨, ಖಾಸಗಿ, ೯೨೦.೬೯೨೫ ಚ.ಮೀ. * ೨೭೭/೨ಬಿ೨, ಖಾಸಗಿ, ೨೦.೨೩೫ ಚ.ಮೀ. * ೨೯೨/೨, ಖಾಸಗಿ, ೧೬೧.೮೮ ಚ.ಮೀ. * ೩೨೯/೨, ಖಾಸಗಿ, ೭೨೮.೪೬ ಚ.ಮೀ, ೩೨೯/೩, ಖಾಸಗಿ, ೨೮೩೨.೯ ಚ.ಮೀ. * ೩೩೦/೮, ಖಾಸಗಿ, ೬೦.೭೦೫ ಚ.ಮೀ. * ೩೩೦/೯, ಖಾಸಗಿ, ೬೦.೭೦೫ ಚ.ಮೀ.
ಕೊಕ್ಕಡ ಗ್ರಾಮ: ಸರ್ವೇ ನಂಬರ್ ೧೭/೯, ಸಾಮಾನ್ಯ (ಸರಕಾರಿ/ಖಾಸಗಿ), ೪೦.೪೭ ಚ.ಮೀ. * ೧೮೮/೧, ಸಾಮಾನ್ಯ (ಸರಕಾರಿ/ಖಾಸಗಿ), ೫೦.೫೮೭೫ ಚ.ಮೀ. * ೧೯೬/೪ಎ, ಖಾಸಗಿ, ೧೬೧.೮೮ ಚ.ಮೀ. * ೨೦೨/೧ಎ೧, ಸರಕಾರಿ, ೧೬೧.೮೮ ಚ.ಮೀ. * ೨೦೨/೧ಎ೨, ಖಾಸಗಿ, ೪೩೫.೦೫೨೫ ಚ.ಮೀ. * ೨೦೨/೧ಎ೩, ಖಾಸಗಿ, ೧೦.೧೧೭೫ ಚ.ಮೀ. * ೨೪೨/೧, ಖಾಸಗಿ, ೨೦.೨೩೫ ಚ.ಮೀ. * ೨೪೨/೨, ಖಾಸಗಿ, ೧೦೧.೧೭೫ ಚ.ಮೀ. * ೨೪೨/೪, ಖಾಸಗಿ, ೪೦.೪೭ ಚ.ಮೀ. * ೨೫೪/೧, ಖಾಸಗಿ, ೬೦.೭೦೫ ಚ.ಮೀ. * ೨೫೪/೧೧, ಖಾಸಗಿ, ೧೦.೧೧೭೫ ಚ.ಮೀ. * ೨೫೪/೨, ಸರಕಾರಿ, ೭೦.೮೨೨೫ ಚ.ಮೀ. * ೨೫೪/೮, ಖಾಸಗಿ, ೫೦.೫೮೭೫ ಚ.ಮೀ. * ೨೫೪/೯, ಖಾಸಗಿ, ೩೦.೩೫೨೫ ಚ.ಮೀ. * ೨೫೯/೨, ಸರಕಾರಿ, ೪೦.೪೭ ಚ.ಮೀ. * ೨೬೬/೩, ಸರಕಾರಿ, ೧೧೧.೨೯೨೫ ಚ.ಮೀ. * ೨೬೬/೪, ಸರಕಾರಿ, ೬೦೭.೦೫ ಚ.ಮೀ. * ೨೭/೧೮, ಖಾಸಗಿ, ೧೦.೧೧೭೫ ಚ.ಮೀ. * ೨೯೬/೧, ಸರಕಾರಿ, ೩೬೪.೨೩ ಚ.ಮೀ. * ೨೯೬/೩, ಸಾಮಾನ್ಯ (ಸರಕಾರಿ/ಖಾಸಗಿ), ೪೦.೪೭ ಚ.ಮೀ. * ೩೦೮/೨ಎ೧ಸಿ, ಸಾಮಾನ್ಯ (ಸರಕಾರಿ, ಖಾಸಗಿ), ೧೧೩೩.೧೬ ಚ.ಮೀ.
ಕೊಕ್ರಾಡಿ ಗ್ರಾಮ: ಸರ್ವೇ ನಂಬರ್ ೧೩೭/೧, ಖಾಸಗಿ, ೬೦೭.೦೫ ಚ.ಮೀ. * ೧೫೨/೧ಬಿ೧, ಖಾಸಗಿ, ೪೦.೪೭ ಚ.ಮೀ. * ೧೫೨/೧ಬಿ೨, ಖಾಸಗಿ, ೮೦.೯೪ ಚ.ಮೀ. * ೧೫೩/೩, ಖಾಸಗಿ, ೯೧.೦೫೭೫ ಚ.ಮೀ. * ೧೫೩/೫, ಖಾಸಗಿ, ೧೦೧.೧೭೫ ಚ.ಮೀ. * ೧೫೩/೬, ಖಾಸಗಿ, ೧೨೧.೪೧ ಚ.ಮೀ. * ೧೫೩/೭, ಖಾಸಗಿ, ೬೦.೭೦೫ ಚ.ಮೀ. * ೧೫೩/೮, ಖಾಸಗಿ, ೧೦.೧೧೭೫ ಚ.ಮೀ. * ೧೫೮/೧೦, ಖಾಸಗಿ, ೧೦.೧೭೫ ಚ.ಮೀ. * ೧೫೮/೯, ಖಾಸಗಿ, ೪೦.೪೭ ಚ.ಮೀ. * ೧೬೦/೧ಇ೨, ಸರಕಾರಿ, ೪೨೪.೯೩೫ ಚ.ಮೀ. * ೧೬೩/೧ಎ೧ಎ೨, ಖಾಸಗಿ, ೧೨೧೪.೧ ಚ.ಮೀ. * ೧೬೩/೧ಎ೧ಬಿ, ಖಾಸಗಿ, ೯೫೧.೦೪೫ ಚ.ಮೀ. * ೧೬೩/೧ಎ೧ಸಿ, ಸರಕಾರಿ, ೯೧.೦೫೭೫ ಚ.ಮೀ. * ೧೬೩/೧ಬಿ, ಸರಕಾರಿ, ೬೦೭.೦೫ ಚ.ಮೀ. * ೧೬೩/೨, ಖಾಸಗಿ, ೫೦.೫೮೭೫ ಚ.ಮೀ. * ೧೬೩/೩, ಖಾಸಗಿ, ೪೮೫.೬೪ ಚ.ಮೀ. * ೧೮೦/೨, ಸರಕಾರಿ, ೮೦.೯೪ ಚ.ಮೀ. * ೧೮೦/೩ಎ, ಖಾಸಗಿ, ೨೫೨.೯೩೭೫ ಚ.ಮೀ. * ೬೦, ಖಾಸಗಿ, ೧೦೧.೧೭೫ ಚ.ಮೀ.
613.65 ಕೋಟಿ ರೂ. ಯೋಜನೆ
ಐತಿಹಾಸಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಸ್ಪರ್ ಯೋಜನೆಯಲ್ಲಿ ರಸ್ತೆ ಅಭಿವೃದ್ಧಿ ಹೊಂದಲಿದೆ. ಉಜಿರೆಯಿಂದ ಧರ್ಮಸ್ಥಳದವರೆಗೆ ಚತುಷ್ಪಥ ರಸ್ತೆ ಹಾಗೂ ಧರ್ಮಸ್ಥಳದಿಂದ ಕೊಕ್ಕಡದ ಮೂಲಕ ಪೆರಿಯಶಾಂತಿಯವರೆಗೆ ೧೦ ಮೀಟರ್ ಅಗಲದ ದ್ವಿಪಥ ರಸ್ತೆಯಾಗಿ ಅಭಿವೃದ್ಧಿಯಾಗುವ ನಿರೀಕ್ಷೆ ಇದೆ. ಈ ರಸ್ತೆ ಅಭಿವೃದ್ಧಿ ಹೊಂದುವುದರಿಂದ ಧರ್ಮಸ್ಥಳ, ಸುಬ್ರಹ್ಮಣ್ಯದ ಸಂಚಾರ ಸುಲಭವಾಗಲಿದೆ. ಈ ರಸ್ತೆ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರ ಸರ್ಕಾರ ೬೧೩.೬೫ ಕೋಟಿ ರೂ. ಮೊತ್ತಕ್ಕೆ ಮಂಜೂರಾತಿ ನೀಡಿದೆ. ಯೋಜನೆಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಫೆ.೨೨ರಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಶಿಲಾನ್ಯಾಸ ನೆರವೇರಿಸಿದ್ದರು.
ಹೆದ್ದಾರಿ ಭೂಸ್ವಾಧೀನ ಅಧಿಸೂಚನೆಯ ಮಾಹಿತಿ:
ಗ್ರಾಮ ಜಮೀನಿನ ಸಂಖ್ಯೆ ವಿಸ್ತೀರ್ಣ
ಉಜಿರೆ 6 18 ಸೆಂಟ್ಸ್
ಧರ್ಮಸ್ಥಳ 24 4.99 ಎಕರೆ
ನಿಡ್ಲೆ 32 4.53 ಎಕರೆ
ಕೊಕ್ಕಡ 21 87 ಸೆಂಟ್ಸ್
ಕೌಕ್ರಾಡಿ 20 1.34 ಎಕರೆ
ಒಟ್ಟು 103 11.92 ಎಕರೆ