ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿ ವನ ಟ್ರಸ್ಟ್ ಇದರ ವತಿಯಿಂದ ನಡೆಯುವ ತಾಲೂಕು ಮಟ್ಟದ ಜ್ಞಾನ ದರ್ಶಿನಿ ಮತ್ತು ಜ್ಞಾನ ವರ್ಷಿಣಿ ಮೌಲ್ಯ ಶಿಕ್ಷಣ ಪುಸ್ತಕ ಆಧಾರಿತ ಸ್ಪರ್ಧೆಗಳು ಅಮೃತ ಭಾವನ ಸುಳ್ಯ ಇಲ್ಲಿ ಉದ್ಘಾಟನೆಗೊಂಡಿತು. ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು. ಕೆ. ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ಸುನಂದ ಉದ್ಘಾಟಿಸಿದರು. ಶಾಂತಿವನ ಟ್ರಸ್ಟಿನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಸ್ಪರ್ಧೆಯ ಯೋಜನೆ ಉದ್ದೇಶ ರೂಪುರೇಶೆಯ ಬಗ್ಗೆ ಮಾತನಾಡಿದರು.
ತಾಲೂಕು ಯೋಗ ಸಂಘಟಕಿ ಮಮತಾ ಮೂಡಿತ್ತಾಯ ಸ್ವಾಗತಿಸಿ, ಯೋಗ ಶಿಕ್ಷಕ ವೆಂಕಟರಾಜ ವಂದಿಸಿದರು. ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು .ಶಿಕ್ಷಣ ಸಂಯೋಜಕರಾದ ಸಂಧ್ಯಾ ಹಾಗೂ ಧನಲಕ್ಷ್ಮಿ ಮತ್ತು ಸಮೂಹ ಸಂಪನ್ಮೂಲ ವ್ಯಕ್ತಿ ಮಮತಾ ಉಪಸ್ಥಿತರಿದ್ದರು.
p>