ಕಿಲ್ಲೂರು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ(ಶ್ರೀ ದುರ್ಗಾದೇವಿ) ದೇವಸ್ಥಾನ ಮಿತ್ತ ಬಾಗಿಲು, ಕಂಪಾನಿಯೋ ನೆಮ್ಮದಿ ವೆಲ್ ನೆಸ್ಸ್ ಸೆಂಟರ್ ಪುತ್ತೂರು ಇದರ ಸಹಯೋಗದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರ ಕೊಲ್ಲಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಹದಿನೈದು ದಿನಗಳ ಕಾಲ ನಡೆಯಿತು.
ಅ.25ರಂದು ಸಂಸ್ಥೆಯ ಮುಖ್ಯಸ್ಥ ಹಾಗೂ ಸಿಬಂದಿ ವರ್ಗದವರನ್ನು ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿಯಿತು. ಸಭಾಧ್ಯಕ್ಷತೆಯನ್ನು ದೇವಾಲಯದ ಆಡಳಿತಾಧಿಕಾರಿ ಮೋಹನ್ ಬಂಗೇರ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಮಿತ್ತ ಬಾಗಿಲು ಗ್ರಾಮದ ಗ್ರಾಮಕರಣಿ ಸಂತೋಷ್, ಸ್ಥಳೀಯರಾದ ಮೋಹನ್ ಪೂಜಾರಿ ಕಿಲ್ಲೂರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಂಪಾನಿಯೋ ಮುಖ್ಯಸ್ಥ ಪ್ರಭಾಕರ ಸಾಲಿಯಾನ್, ಸಿಬ್ಬಂದಿಗಳಾದ ಕಾವ್ಯ, ಜ್ಯೋತಿ, ದಿವಾಕರ ಸಾಲಿಯಾನ್ ಇವರುಗಳನ್ನು ಗೌರವಿಸಲಾಯಿತು.
ಶಿಬಿರದಲ್ಲಿ ಮುನ್ನೂರಕ್ಕಿಂತಲೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸ್ಥಳೀಯರಾದ ಮಲ್ಲಿಕಾ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನೇಮಿರಾಜ್ ಕಿಲ್ಲೂರು ಸ್ವಾಗತಿಸಿದರು. ಕೇಶವ ಪಡ್ಕೆಯವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.