ದಯಾ ವಿಶೇಷ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

0

ಬೆಳ್ತಂಗಡಿ: ಗಾಂಧಿ ಜಯಂತಿಯನ್ನು ದಯಾ ವಿಶೇಷ ಶಾಲೆಯಲ್ಲಿ ಅ.2ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಅದ್ಯಕ್ಷತೆಯನ್ನು ಶಾಲೆಯ ಮುಖ್ಯ ಶಿಕ್ಷಕಿ ದಿವ್ಯ ಟಿ ವಿ ರವರು ವಹಿಸಿದರು.

ಗಾಂಧಿ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು ಭಾರತ ದೇಶಕ್ಕೆ ದೊರಕಿದ ಒಬ್ಬ ಮಹಾನ್ ವ್ಯಕ್ತಿ. ಈ ದಿವಸ ಅವರ ಹುಟ್ಟುಹಬ್ಬ ಮಾಡುವ ಸಂದರ್ಭದಲ್ಲಿ ನಾವೆಲ್ಲಾ ಗಾಂಧೀಜಿಯವರಿಗೆ ಧನ್ಯವಾದ ಸಲ್ಲಿಸಬೇಕು.ಅವರು ಹುಟ್ಟಿ ಬೆಳೆದ ಜೀವನವನ್ನೆ ಇಡೀ ದೇಶಕ್ಕೆ ಮುಡಿಪಾಗಿಟ್ಟರು. ಸ್ವಾತಂತ್ರ್ಯದ ದಿನಗಳಲ್ಲಿ ಅವರು ನಮಗೆ ನೀಡಿದ ಮೌಲ್ಯಗಳು ಅದನ್ನು ಪಾಲಿಸಿಕೊಂಡು ಬಂದರೆ ಭಾರತವು ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಆದರೆ ಇವತ್ತು ನೋಡುವುದಾದರೆ ಮಹತ್ಮ ಗಾಂಧೀಜಿಯವರು ನಮಗೆ ನೀಡಿದಂತಹ ಮೌಲ್ಯಗಳನ್ನು ನಾವು ಮರೆತು ಬಿಟ್ಟಿದ್ದೇವೆ.

ಮಹಾತ್ಮ ಗಾಂಧೀಜಿಯವರು ಸತ್ಯ, ಶಾಂತಿ ಮತ್ತು ನೀತಿಯನ್ನು ಭೋಧಿಸಿದರು, ಅದೇ ರೀತಿ ಬ್ರೀಟಿಷ್ ಸರಕಾರ ದೌರ್ಜನ್ಯ, ಅವರ ಹಿಂಸ ಮನೋಭಾವವನ್ನು ಖಂಡಿಸಿದರು, ಅದು ಮಾತ್ರವಲ್ಲದೇ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅವರ ಜೀವನವೇ ನಿರಂತರ ಒಂದು ಹೋರಾಟವಾಗಿತು. ಮಹಾತ್ಮ ಗಾಂಧೀಜಿಯವರು ಹೋರಾಟದಿಂದಲೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಆದರೆ ಇವತ್ತು ಆಳುವವರು ಹೋರಾಟ ಮಾಡಿದವರನ್ನು ಅತ್ತಿಕ್ಕಿ, ಮೂಲೆ ಗುಂಪುಮಾಡಿ ಅವರನ್ನು ಜೈಲಿಗೆ ಕಳಿಹಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ನಾವೆಲ್ಲಾರೂ ಮಹಾತ್ಮ ಗಾಂಧೀಜಿಯವರು ನಮಗೆ ತೋರಿಸಿಕೊಟ್ಟ ಮಾರ್ಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಯಾವುದೇ ಒಂದು ವ್ಯವಸ್ಥೆಯಲ್ಲಿ ಅಧಿಕಾರ ಅಥವಾ ಅಧಿಕಾರೇತರ ವ್ಯೆವಾಸ್ಥೆ ಇರಲಿ ಮನುಷ್ಯರ ವಿರುದ್ದ ಹೋರಾಟ ಹಾಗೂ ದಬ್ಬಾಳಿಕೆ ಮಾಡುವುದನ್ನು ನಿಲ್ಲಿಸಬೇಕು. ಅದರ ವಿರುದ್ದ ಜನರು ಹೋರಾಟ ಮಾಡಬೇಕು, ಮಹಾತ್ಮ ಗಾಂಧೀಜಿಯವರು ನೀಡಿದಂತಹ ಸತ್ಯ, ನೀತಿ, ಮೌಲ್ಯಗಳು ನಮ್ಮದಾಗಿಕೊಂಡು ದೌರ್ಜನ್ಯವನ್ನು ಅದೇ ರೀತಿ ಮನುಷ್ಯನ ಮೇಲೆ ಅಗುವಂತಹ ಹಿಂಸೆಯನ್ನು ಖಂಡಿಸಬೇಕು. ನಾವೆಲ್ಲಾ ಒಟ್ಟಿಗೆ ಸೇರಿ ದ್ವನಿ ಎತ್ತಬೇಕು. ಮಹಾತ್ಮ ಗಾಂಧೀಜಿಯವರು ಬ್ರೀಟಿಷ್ ಅಧಿಕಾರದ ವಿರುದ್ದ ಹೊರಾಟ ಹಾಗೂ ಧ್ವನಿ ಎತ್ತಿದ್ದರಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಭಾರತವೊಂದು ಸ್ವಾತಂತ್ರ ರಾಷ್ಟ್ರವಾಯಿತು. ಅದ್ದರಿಂದ ನಾವೆಲ್ಲಾ ಒಟ್ಟಗೆ ಸೇರಿ ನಮ್ಮ ಮೇಲೆ ದಬ್ಬಾಳಿಕೆ ನಡೆಸುವವರ ವಿರದ್ದ ಹೋರಾಟ ಮಾಡಬೇಕು. ನಾವೆಲ್ಲಾ ಸ್ವಾತಂತ್ರ್ಯ ಹೊಂದಿದವರು, ನಮ್ಮಲ್ಲಿರುವ ಮುಲಭೂತ ಹಕ್ಕುಗಳನ್ನು ರಕ್ಷಣೆ ಮಾಡುವುದಲ್ಲದೇ ಅದು ಬೇರೆಯವರಿಗೂ ದೊರಕುವಂತೆ ಶ್ರಮಿಸಬೇಕು.

ಹೆಣ್ಣು-ಗಂಡು ನಡುವೆ ತಾರತಮ್ಯ ಬೇಡ, ಎಲ್ಲರೂ ಸರಿ ಸಮಾನರು ಎಂಬ ಮನೋಭಾವನೆ ಇರಬೇಕು. ಹಾಗೂ ಗಡಿ ಕಾಯುವ ಸೈನಿಕರ ದೇಶಪ್ರೇಮದಂತೆಯೇ ಈ ಇಂತಹ ಮಕ್ಕಳ ಸೇವೆ ಒಂದು ಬಗೆಯ ದೇಶ ಪ್ರೇಮವಾಗಿದೆ. ಗಾಂಧಿಜೀಯವರ ಅಭಿವ್ಯೆಕಿ ವಾಕ್ ಸ್ವಾತಂತ್ರವನ್ನು ಸದುಪಯೊಗ ಮಾಡುತ್ತಾ ಜನರ ಹಿತವನ್ನು ಕಾಪಾಡಿದರು. ಬ್ರಿಟಿಷ್ ಹಾಗೂ ಸರಕಾರದ ವಿರುದ್ದ ಹೊರಾಟ ಮಾಡಿ ಉಪ್ಪಿನ ಸತ್ರಗ್ರಹ ದೊಂದಿಗೆ ಹಲವಾರು ಜನ ವಿರೋಧಿ ದೊರಣೆಗಳನ್ನು ದಿಕ್ಕರಿಸಿದರು. ಗಾಂಧಿಜೀಯವರ ಅಹಿಂಸೆ, ಮತ್ತು ಅವರ ತ್ಯಾಗಗಳ ಬಗ್ಗೆ ಮಾತನಾಡಿದರು. ಗಾಂಧಿಜೀಯವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಚತೆ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ಆಚರಿಸುತ್ತಾರೆ ಎಂದು ತಿಳಿಸಿದರು.

ಗಾಂಧಿಜೀಯವರ ಜೀವನ ಅವರ ಆಧರ್ಶ ತತ್ವಗಳಾದ ಅಹಿಂಸೆ, ಸಮಾನತೆ, ಭಾತೃತ್ವ ಭಾವನೆ ಅಂಶಗಳನ್ನು ನಾವು ಮೈಗೂಡಿಸಿಕೊಂಡು ಅವರಂತೆ ಆದರ್ಶ ವೈಕ್ತಿಗಳಾಗೊಣ ಎಂದು ಶುಭ ಹಾರೈಸಿದರು.
ಈ ಕಾರ್ಯಕ್ರಮವನ್ನು ಜನ್ವಿರಾ ಸ್ವಾಗತಿಸಿದರು, ಧನ್ಯವಾದವನ್ನು ಧನ್ಯ ರವರು ನೇರವೆರಿಸಿದರು.

LEAVE A REPLY

Please enter your comment!
Please enter your name here