ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದಿಂದ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮ

0

ಸುಲ್ಕೇರಿಮೊಗ್ರು: ಬ್ರಹ್ಮಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಯುವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆ ವತಿಯಿಂದ ಗ್ರಾಮದ ಬಿಲ್ಲವ ಸಮಾಜ ಬಾಂಧವರ ಸಮಾಗಮ ಮತ್ತು ಮನರಂಜನೆಗಾಗಿ ಬಿರ್ವೆರೆ ಕೆಸರ್ದ ಗೊಬ್ಬು ಕಾರ್ಯಕ್ರಮವು ಸುಲ್ಕೇರಿಮೊಗ್ರು ನಡಾಯಿ ಬಳಿ ದಯಾನಂದರ ಗದ್ದೆಯಲ್ಲಿ ಸೆ.29ರಂದು ವಿಜೃಂಭಣೆಯಿಂದ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷರಾದ ಸಂಕೇತ್ ಬಂಗೇರ ವಹಿಸಿದ್ದರು. ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.

ವೇದಿಕೆಯಲ್ಲಿ ಸುಧೀರ್ ಸುವರ್ಣ, ದಿಶಾಂತ್ ಕುಮಾರ್, ಸ್ವರಾಜ್ ಬಂಗೇರ, ಸಂದೀಪ್ ಪಟ್ಲ, ಕುಮಾರ್‌ಚಂದ್ರ, ದಯಾನಂದ ಪೂಜಾರಿ, ಶಾಲಿನಿ ಕೇಶವ ಬಂಗೇರ, ಶಾಂತಿಕಿರಣ್, ರವಿ ಪೂಜಾರಿ, ಶಿವಪ್ಪ ಪೂಜಾರಿ, ಅಶೋಕ್ ಸುವರ್ಣ, ಮಲ್ಲಿಕಾ, ವೆಂಕಪ್ಪ ಪೂಜಾರಿ, ಸದಾನಂದ ಪೂಜಾರಿ, ಲಲಿತ ಆನಂದ ಪೂಜಾರಿ, ರೇವತಿ, ಪ್ರಕಾಶ್ ಕೊಲ್ಲಂಗೆ, ಅಶ್ವತ್ ವರ್ಪಾಳೆ, ಪುರುಷೋತ್ತಮ, ಗಣೇಶ್ ಕಾಡಂಗೆ ಉಪಸ್ಥಿತರಿದ್ದರು.

ಅತಿಥಿಗಳನ್ನು ನಂದನ್ ಕುಮಾರ್ ಸ್ವಾಗತಿಸಿ, ನಿರೂಪಿಸಿ, ಕಾರ್ಯದರ್ಶಿ ವಿಜಯಕುಮಾರ್ ಧನ್ಯವಾದವಿತ್ತರು.

ಬೆಸ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಂ ಕಾರ್ಯಕ್ರಮಕ್ಕೆ ಆಗಮಿಸಿ, ಶುಭ ಹಾರೈಸಿ ಸ್ಪರ್ಧಾ ಗಳು ಹಾಗೂ ಗಂಗಾಧರ ಮಿತ್ತಮಾರು ಇವರೊಂದಿಗೆ ಕೆಸರುಗದ್ದೆಗೆ ಇಳಿದು ಹುಲಿ ಕುಣಿತ ಮಾಡಿ ಸ್ಪರ್ದಾರ್ಥಿಗಳನ್ನು ಹುರುದುಂಬಿಸಿದರು.

ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಗ್ಗ ಜಗ್ಗಾಟ, ವಾಲಿಬಾಲ್, ಅಪಂಗಾಯಿ ಓಟ, ತಿರುಗಿ ಓಡುವುದು. 200 ಮೀಟರ್ ಓಟ, ಕಬಡ್ಡಿ, ಹಿಂದೆ ನಡೆಯುವುದು, ಹಾಳೆ ಎಳೆಯುವುದು, ಮೂರು ಜನರ ಟೊಂಕ ಮೊದಲಾದ ಗ್ರಾಮೀಣ ಸ್ಫರ್ದೆಗಳನ್ನು ಆಯೋಜಿಸಲಾಗಿತ್ತು. ಸರ್ವದರ್ಮದ ಬಂಧುಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರೋತ್ಸಾಹಿಸಿ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದರು.

ನಿತೀಶ್ ರೆಪ್ರಿಯಾಗಿ ಹಾಗೂ ರಾಮ್‌ಪ್ರಸಾದ್ ಮಾರ್ನಾಡ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

LEAVE A REPLY

Please enter your comment!
Please enter your name here